January 19, 2025
SupreethaFeatured

ದೇಶದ ಪ್ರಪ್ರಥಮ ಶಿಕ್ಷಣ ಸಚಿವ ,ಸ್ವಾತಂತ್ರ್ಯ ಹೋರಾಟಗಾರ , ಶಿಕ್ಷಣ ಪ್ರೇಮಿ, ಭಾರತರತ್ನ ಮೌಲಾನಾ ಅಬ್ದುಲ್ ಕಲಾಂ ಆಝಾದ್ ಅವರ ಜನ್ಮದಿನದ ಅಂಗವಾಗಿ ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ ವತಿಯಿಂದ ರಾಷ್ಟ್ರೀಯ ಶಿಕ್ಷಣ ದಿನದಂದು ಶಿಕ್ಷಕರಿಗಾಗಿ ನಡೆದ ಮೌಲಾನಾ ಅಬುಲ್ ಕಲಾಂ ಆಝಾದ್ ರವರ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ಶಿಕ್ಷಕಿ. ಸುಪ್ರೀತಾ ಭಂಡಾರಿ ಸೂರಿಂಜೆ ಯವರು ಭಾಗವಹಿಸಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಬಹುಮಾನವು ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನೊಳಗೊಂಡಿದೆ. 

ಬಹುಮಾನ ವಿತರಣಾ ಕಾರ್ಯಕ್ರಮವು ನವೆಂಬರ್ 15, 2019 ರಂದು ಮಂಗಳೂರಿನ ಟಿ ಆರ್ ಎಫ್ ಸಭಾಂಗಣದಲ್ಲಿ ನಡೆಯಿತು. 

ಇವರ ಈ ಸಾಧನೆಗೆ ಭಂಡಾರಿ ಕುಟುಂಬಗಳ ಮನೆ ಮನದ ಮಾತು ‘ಭಂಡಾರಿ ವಾರ್ತೆ’ ಅಭಿನಂದಿಸುತ್ತಾ , ಇವರು ಮುಂದೆಯೂ ಇನ್ನಷ್ಟು ಸಾಧನೆಗೈದು ಸಮಾಜಕ್ಕೆ ಹೆಮ್ಮೆಯನ್ನು ತರಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

1 thought on “ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ ‘ನ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಸುಪ್ರೀತಾ ಭಂಡಾರಿ.

Leave a Reply

Your email address will not be published. Required fields are marked *