ದಕ್ಷಿಣ ಕನ್ನಡದ ಜಿಲ್ಲೆಯ ಹೆಮ್ಮೆಯ ನಮ್ಮ ಟಿವಿಯ ಸಂಕಲನಕಾರ, ಕಲಾಂಜಲಿ ಕ್ರಿಯೇಷನ್ಸ್ ನ ಕ್ರಿಯೇಟಿವ್ ಹೆಡ್ ಮತ್ತು ಭಂಡಾರಿ ವಾರ್ತೆಯ ಸಹ ಸದಸ್ಯ ಶ್ರೀ ರಾಜೇಶ್ ಭಂಡಾರಿಯವರಿಗೆ ನವೆಂಬರ್ 19,2019 ರ ಮಂಗಳವಾರ 31 ನೇ ಹುಟ್ಟು ಹಬ್ಬದ ಸಂಭ್ರಮ.
ಮೂಡಿಗೆರೆ ತಾಲೂಕಿನ ಬಣಕಲ್ ದಿವಂಗತ ಶ್ರೀಧರ ಭಂಡಾರಿ ಮತ್ತು ಶ್ರೀಮತಿ ವಿನೋದ ಭಂಡಾರಿ ದಂಪತಿಯ ಪುತ್ರ ಶ್ರೀ ರಾಜೇಶ್ ಭಂಡಾರಿಯವರು ಕಳೆದ 11 ವರ್ಷಗಳಿಂದ ನಮ್ಮ ಟಿವಿಯಲ್ಲಿ ಉದ್ಯೋಗಿಯಾಗಿದ್ದರೂ, ಸಂಗೀತ ಪ್ರೇಮಿಗಳಿಗೆ ತಮ್ಮ ತುಳು ಮತ್ತು ಕನ್ನಡ ಭಾಷೆಯ ರಿಮಿಕ್ಸ್ ಹಾಡುಗಳಿಂದ ಚಿರಪರಿಚಿತರಾಗಿದ್ದಾರೆ.
ಇವರ ಚೊಚ್ಚಲ ಸಂಗೀತ ನಿರ್ದೇಶನದ “ಮುಗುರು ತೆಲಿಕೆ” ಅಲ್ಬಮ್ ಹಾಡು ಇವರಿಗೆ ಜನಪ್ರಿಯತೆ ತಂದು ಕೊಟ್ಟಿತು. ಕಲಾಂಜಲಿ ಕ್ರಿಯೇಷನ್ಸ್ ನ ಮುಖಾಂತರ ಸ್ನೇಹಿತರೊಂದಿಗೆ ಸೇರಿ ಮಾಡಿದ ಕಿರಿಕ್ ಪಾರ್ಟಿಯ ತುಳು ವರ್ಷನ್ “ವಾ ಸೇಲೆ” ಯೂ ಟ್ಯೂಬ್ ನಲ್ಲಿ ಆರು ಲಕ್ಷಕ್ಕೂ ಹೆಚ್ಚಿನ ವೀಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದು ಸಂಚಲನ ಮೂಡಿಸಿದೆ. ಕಲಾಂಜಲಿ ಕ್ರಿಯೇಷನ್ಸ್ ನ ಮೂಲಕ ಈಗಾಗಲೇ ನಲುವತ್ತೈದಕ್ಕೂ ಹೆಚ್ಚು ಕನ್ನಡ ಮತ್ತು ತುಳು ಗೀತೆಗಳನ್ನು ರಿಮಿಕ್ಸ್ ಮಾಡಿ ಸಂಗೀತ ಪ್ರೇಮಿಗಳಿಗೆ ಉಣಬಡಿಸಿದ್ದಾರೆ.
ಇವರು ಸಂಕಲನಕಾರರು ಮಾತ್ರವಲ್ಲದೆ ಸಂಗೀತ ನಿರ್ದೇಶಕರೂ ಹೌದು. ಬಿಗ್ ಬಾಸ್ ನ ವಾಸುಕಿ ವೈಭವ್ ಹಾಡಿರುವ “ಮನಸ್ಸಿಂದ ಯಾರೂನು ಕೆಟ್ಟೋರಲ್ಲ” ಹಾಡು ರಾಜೇಶ್ ರವರ ಕಲಾಂಜಲಿಯ ಇತ್ತೀಚಿಗೆ ಬಿಡುಗಡೆಯಾದ ಆಲ್ಬಮ್ , ಈ ಹಾಡಿಗೆ ಪವಿತ್ರಾ ಮಯ್ಯ ಧ್ವನಿ ಕೊಟ್ಟಿದ್ದಾರೆ .
ಭಂಡಾರಿವಾರ್ತೆಯ ಸೆಲ್ಫಿ ಫೋಟೋ ಸ್ಪರ್ಧೆ ಮತ್ತು ಭಂಡಾರಿ ಚಿತ್ತಾರ ಸ್ಪರ್ಧೆಗಳಲ್ಲಿ ತಮ್ಮ ಕೈಚಳಕ ತೋರಿಸಿ ಭಂಡಾರಿವಾರ್ತೆಯ ಓದುಗರಿಗೂ ಹತ್ತಿರವಾಗಿದ್ದಾರೆ. ಹುಟ್ಟು ಹಬ್ಬದ ದಿನ ಪ್ರತೀ ವರ್ಷದಂತೆ ಅನಾಥಾಶ್ರಮದ ಪುಟ್ಟ ಮಕ್ಕಳೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿರುವ ಇವರು ಉಡುಪಿಯ ಶ್ರೀ ಮಠದ ಪರಮ ಭಕ್ತರು. ರಾಜೇಶ್ ರವರಿಗೆ ಅವರ ತಾಯಿ, ತಂಗಿ ಶ್ರೀಮತಿ ವಿನೀತ ಪ್ರಸನ್ನ ಭಂಡಾರಿ, ಬಾವ ಶ್ರೀ ಪ್ರಸನ್ನ ಭಂಡಾರಿ, ಸೊಸೆ ಪುಟಾಣಿ ಗ್ರೀಷ್ಮಾ, ಸ್ನೇಹಿತರು, ಆತ್ಮೀಯರು, ಸಹೋದ್ಯೋಗಿಗಳು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಮ್ಮೆಲ್ಲರ ಪ್ರೀತಿಯ ರಾಜೇಶ್ ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯವನ್ನು ಕೊಟ್ಟು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ“ ಮತ್ತು ತಂಡದಿಂದ ಹಾರ್ದಿಕವಾಗಿ ಶುಭ ಹಾರೈಸುತ್ತಿದ್ದೇವೆ.
–ಭಂಡಾರಿವಾರ್ತೆ