ಮಂಗಳೂರು ತಾಲೂಕು ಹರೇಕಳ ಗ್ರಾಮದ ದಿವಂಗತ ಶ್ರೀ ಶಿವಪ್ಪ ಭಂಡಾರಿಯ ಪತ್ನಿ ಶ್ರೀಮತಿ ಪದ್ಮಾವತಿ ಶಿವಪ್ಪ ಭಂಡಾರಿ ಹರೇಕಳ (77 ವಷ೯) ಮಂಗಳವಾರ ಮಧ್ಯಾಹ್ನ ಮಂಗಳೂರು ನಿಂದ ಮುಂಬಯಿಗೆ ತನ್ನ ಪುತ್ರ ಶ್ರೀ ಜಯಶೀಲ ಜೊತೆಗೆ ರೈಲುನಲ್ಲಿ ಪ್ರಯಾಣಿಸುತ್ತಿರುವಾಗ ದಿನಾಂಕ 20 ನೇ ನವೆಂಬರ್ 2019 ರಂದು ಬುಧವಾರ ಮುಂಜಾನೆ ರೈಲು ಮುಂಬಯಿಯ ಥಾಣೆ ಸಮೀಪ ಹೃದಯಾಘಾತದಿಂದ ನಿಧನರಾದರು.
ರೈಲ್ವೆ ಇಲಾಖೆಯ ವತಿಯಿಂದ ಕಾನೂನು ರೀತಿಯ ತನಿಖೆ ನಡೆಸಿ ಶವದ ಮಹಜರು ನಡೆಸಿ ಬುಧವಾರ ಮಧ್ಯಾಹ್ನ ಶವವನ್ನು ಕುಟುಂಬಸ್ಥರಿಗೆ ರೈಲ್ವೆ ಇಲಾಖೆಯವರು ಹಸ್ತಾಂತರಿಸಿದರು. ಸಾಯಂಕಾಲ ಶ್ರೀಮತಿ ಪದ್ಮಾವತಿ ಅವರ ಅಂತ್ಯ ಸಂಸ್ಕಾರ ವಿಧಿ ವಿಧಾನಗಳು ಮುಂಬಯಿ ಮಲಾಡ್ ಪುತ್ರನ ಮನೆಯಲ್ಲಿ ನಡೆಯಿತು.
ಮೃತರು ಶ್ರೀ ವಿಶ್ವನಾಥ್ ಭಂಡಾರಿ ಹರೇಕಳ ಮತ್ತು ಶ್ರೀ ಜಯಶೀಲ ಭಂಡಾರಿ ಮುಂಬಯಿ ಇಬ್ಬರು ಪುತ್ರರು ಮತ್ತು ಶ್ರೀಮತಿ ಸಾವಿತ್ರಿ ಪೈೂತಾಜೆ ಬಂಟ್ವಾಳ ಮತ್ತು ಶ್ರೀಮತಿ ಮೋಹಿನಿ ಭಂಡಾರಿ ಮುಂಬಯಿ ಇಬ್ಬರು ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಇವರ ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು ಮಕ್ಕಳಿಗೆ ಹಾಗೂ ಕುಟುಂಬಸ್ಥರಿಗೆ ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.