ಮೂಡಬಿದಿರೆ: ದಿನಾಂಕ 12 ನೇ ಜನವರಿ 2020 ರಂದು ಜವನೆರ್ ಬೆದ್ರ ಸಂಘಟನೆ ರಾಷ್ಟ್ರೀಯ ಯುವ ದಿವಸ್ ಅಂಗವಾಗಿ ಆಯೋಜಿಸಿದ್ದ ವಿವೇಕೋತ್ಸವ -2020 ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕವಯಿತ್ರಿಯಾಗಿರುವ ಮುನಿರಾಜ್ ರೆಂಜಾಳರವರ ಶಿಷ್ಯೆ , ‘ಮೊದಲ ಹೆಜ್ಜೆ’ ಎಂಬ ಕವನ ಸಂಕಲನದ ಕವಯಿತ್ರಿ , 800 ಕ್ಕೂ ಮಿಕ್ಕಿ ಕವನಗಳನ್ನು ಬರೆದಿರುವ ಮತ್ತು ಸಾಮಾಜಿಕ ಜಾಲತಾಣದಲ್ಲಿ ನೂರು ಕಂತುಗಳ ಸದಾಶಿವ ಕಾದಂಬರಿಯನ್ನು ಬರೆದು ಓದುಗರ ಪ್ರಶಂಸೆಗೆ ಪಾತ್ರರಾಗಿರುವ ಮೂಡಬಿದಿರೆ ನಾಗರಕಟ್ಟೆಯ ಶ್ರೀಮತಿ ನಾಗಶ್ರೀ ಭಂಡಾರಿ ಉದಯೋನ್ಮುಖ ಕವಯಿತ್ರಿ ವಿಭಾಗದಲ್ಲಿ ವಿವೇಕ್ ಪುರಸ್ಕಾರ್ -2020 ಪ್ರಶಸ್ತಿ ಪಡೆದಿರುತ್ತಾರೆ.
ಇವರು ಮೂಡಬಿದಿರೆ ನಾಗರಕಟ್ಟೆಯ ಶ್ರೀ ಚಂದ್ರಶೇಖರ ಭಂಡಾರಿ ಮತ್ತು ಜಯಂತಿ ಭಂಡಾರಿ ದಂಪತಿಗಳ ಪುತ್ರಿಯಾಗಿದ್ದು ಬಂಟ್ವಾಳದ ಶ್ರೀ ಸಂತೋಷ್ ಭಂಡಾರಿಯವರ ಪತ್ನಿಯಾಗಿರುತ್ತಾರೆ.
ಇವರ ಈ ಸಾಧನೆಗೆ ಅಭಿನಂದನೆ ಸಲ್ಲಿಸುತ್ತಾ ಇವರ ಸಾಹಿತ್ಯ ಕೃಷಿ ಇನ್ನಷ್ಟು ಉತ್ತುಂಗಕ್ಕೇರಿ ಪ್ರಶಸ್ತಿಗಳು ಅರಸಿ ಬರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಹೃದಯಪೂರ್ವಕವಾಗಿ ಹಾರೈಸುತ್ತದೆ.
-ಭಂಡಾರಿ ವಾರ್ತೆ