September 20, 2024

ಕೊಪ್ಪ ದ ದಿವಂಗತ ಶೀನ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ರಮಣಿ ಭಂಡಾರಿ ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 12 ರ ಬುಧವಾರ ಮುಂಜಾನೆ ವಿಧಿವಶರಾದರು. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು.


ದಿವಂಗತರು 4 ಗಂಡು ಮಕ್ಕಳಾದ ಶ್ರೀ ಹರೀಶ್ ಭಂಡಾರಿ ಕೊಪ್ಪ ಮತ್ತು ಸೊಸೆ ಸುಚೇತಾ ,ಉಮೇಶ್ ಭಂಡಾರಿ ಮತ್ತು ಸೊಸೆ ರಾಜೇಶ್ವರಿ ,ಸತೀಶ್ ಭಂಡಾರಿ ಮತ್ತು ಸೊಸೆ ಸುಜಯಾ, ದಿನೇಶ್ ಭಂಡಾರಿ ಮತ್ತು ಸೊಸೆ ಜ್ಯೋತಿ , 3 ಹೆಣ್ಣು ಮಕ್ಕಳಾದ ಹೇಮಾ ಮತ್ತು ಅಳಿಯ ಉಮೇಶ್, ಭಾಗ್ಯ ಮತ್ತು ಅಳಿಯ ಮನೋಹರ್ ಭಂಡಾರಿ ,ಗಾಯತ್ರಿ ಮತ್ತು ಅಳಿಯ ದೇವರಾಜ್,ಸೊಸೆ ಲತಾ ಹಾಗೂ ಮೊಮ್ಮಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದಿವಂಗತರ ಒಬ್ಬ ಮಗ ಪ್ರಕಾಶ್ ಭಂಡಾರಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ .

ಮೃತರ ಅಂತ್ಯಕ್ರಿಯೆಯು ಫೆಬ್ರವರಿ 12 ರ ಬುಧವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಸ್ವಗೃಹ ಕೊಪ್ಪದಲ್ಲಿ ನಡೆಯಲಿದೆಯೆಂದು ಕುಟುಂಬದ ಮೂಲಗಳು ತಿಳಿಸಿವೆ.


ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ತುಂಬಲಿ ಎಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತಿದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *