ತುಳು ಸಾಹಿತ್ಯ ಅಕಾಡೆಮಿಗೆ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್ (ರಿ) ನ ಅಧ್ಯಕ್ಷರಾದ ಶ್ರೀ ಕಡಂದಲೆ ಸುರೇಶ ಭಂಡಾರಿ ಯವರನ್ನು ನಾಮ ನಿರ್ದೇಶನ ಸದಸ್ಯರಾಗಿ ನೇಮಕ ಮಾಡಲು ಕರ್ನಾಟಕ ಸರಕಾರ ನಿರ್ದೇಶನ ನೀಡಿದೆ ಎಂದು ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಂಡಾರಿ ವಾರ್ತೆ ಜೊತೆ ಮಾತನಾಡಿದ ಶ್ರೀ ದಯಾನಂದ ಕತ್ತಲ್ ಸಾರ್ ಇದೊಂದು ಪ್ರತಿಷ್ಠಿತ ಸ್ಥಾನವಾಗಿದ್ದ್ದು ತುಳು ಸಾಹಿತ್ಯ , ಸಂಸ್ಕೃತಿ ಮತ್ತು ಭಾಷೆಯ ಅಭಿವೃದ್ಧಿಗಾಗಿ ಸರಕಾರ ಕೊಡುವ ಒಂದು ಅವಕಾಶ, ಇದರ ಅವಧಿ ಮೂರು ವರ್ಷದ್ದಾಗಿದೆ,ಇವರ ಜೊತೆ ಚೇತಕ್ ಪೂಜಾರಿ ಮಂಗಳೂರು ಮತ್ತು ಪಿ ಎಂ ರವಿ ಮಡಿಕೇರಿ ಕೂಡಾ ನೇಮಕವಾಗಿದ್ದಾರೆ ಎಂದು ತಿಳಿಸಿದರು.
ಕಡಂದಲೆ ಭಂಡಾರಿ ಮಹಾಮಂಡಲದ ಮಾಜಿ ಅಧ್ಯಕ್ಷರು ಮತ್ತು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಕಳೆದ ಐದು ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ತುಳು ಸಾಹಿತ್ಯ ಅಕಾಡೆಮಿಗೆ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಶ್ರೀ ಸುರೇಶ ಭಂಡಾರಿ ಕಡಂದಲೆಗೆ ಭಂಡಾರಿ ವಾರ್ತೆಯು ಅಭಿನಂದನೆಗಳನ್ನು ಸಲ್ಲಿಸಿ , ಈ ಸ್ಥಾನದ ಮೂಲಕ ಅವರ ಘನತೆ ಗೌರವಗಳು ಹೆಚ್ಚಿ ಇನ್ನಷ್ಟು ಸಮಾಜಮುಖಿ ಕೆಲಸ ಮಾಡುವಂತೆ ಶ್ರೀ ನಾಗೇಶ್ವರನು ಅನುಗ್ರಹಿಸಲಿ ಎಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
-ಭಂಡಾರಿ ವಾರ್ತೆ