ಕುಂದಾಪುರ ತಾಲೂಕಿನ ಕೋಟೇಶ್ವರ, ಕಾಳಾವರದ ಶ್ರೀ ಸತೀಶ್ಚಂದ್ರ ಮತ್ತು ಶ್ರೀಮತಿ ಅಮಿತಾ ಕೆ.ವಿ. ದಂಪತಿಯ ಪುತ್ರಿ
ಡಾ॥ ಸಪ್ತಮಿ ಸತೀಶ್
ಇವರು ಕಳೆದ ಬಾರಿ ನಡೆದ ಎಮ್ .ಬಿ.ಬಿ.ಎಸ್ . ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕದೊಂದಿಗೆ ವೈದ್ಯಕೀಯ ಪದವಿಯನ್ನು ಪಡೆದಿದ್ದಾರೆ . ಡಾ॥ ಸಪ್ತಮಿ ಸತೀಶ್ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರದಲ್ಲಿ ನಾಲ್ಕನೇ ಮತ್ತು ಐದನೇ ತರಗತಿಯನ್ನು ಇಂಡಿಯನ್ ಇಂಟರ್ನಾಷನಲ್ ಸ್ಕೂಲ್ ಬುರೈದಾ ಮತ್ತು ಮಜ್ ಮಾ ದಲ್ಲಿ ಪಡೆದು ಕೋಟೇಶ್ವರದ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ ಕೋಟೇಶ್ವರದ ಸುಣ್ಣಾರಿ ಎಕ್ಸಲೆಂಟ್ ಪಿ.ಯು.ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಪಿ.ಯು ಶಿಕ್ಷಣ ಪೂರೈಸಿದರು. ಹಾಸನದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಹಾವಿದ್ಯಾಲಯದಲ್ಲಿ ಎಮ್ .ಬಿ. ಬಿ. ಎಸ್. ಪದವಿ ಪೂರೈಸಿ, ಅಲ್ಲಿಯೇ ಒಂದು ವರ್ಷದ ವೈದ್ಯಕೀಯ ತರಬೇತಿಯನ್ನು ಪಡೆದಿದ್ದಾರೆ.
ಚಿತ್ರಕಲೆ, ಕರಾಟೆ, ಬ್ಯಾಡ್ಮಿಂಟನ್ , NSS ಹಾಗೂ ಫ್ಯಾಷನ್ ಡಿಸೈನಿಂಗ್ ಇತರ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಅತ್ಯುತ್ತಮ ಸಾಧನೆಯನ್ನು ಮಾಡಿರುವ ಪ್ರತಿಭೆ ಕು. ಸಪ್ತಮಿಯವರು ಈಗ ಡಾಕ್ಟರ್ ಸಪ್ತಮಿ.
ಇವರ ತಂದೆ ಶ್ರೀ ಸತೀಶ್ಚಂದ್ರ ಭಂಡಾರಿಯವರು ಬಿ.ಎಸ್ಸಿ ಮತ್ತು ಎಮ್ .ಬಿ.ಎ. ಪದವಿಯನ್ನು ಪಡೆದು ಅರಿವಳಿಕೆ ತಂತ್ರಜ್ಞರಾಗಿ ದುಬೈ, ಸೌದಿ ಅರೇಬಿಯಾ,ಹಾಗೂ ಮೊರೀಶಿಯಸ್ ರಾಷ್ಟ್ರಗಳಲ್ಲಿ ಮೂವತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಅಪಾರ ಅನುಭವ ಹೊಂದಿರುತ್ತಾರೆ .
ತಾಯಿ ಶ್ರೀಮತಿ ಅಮಿತಾ ಕೆ.ವಿ. ಭಂಡಾರಿ ಯವರು ಎಮ್ .ಸಿ. ಎ. ಪದವಿಯನ್ನು ಪಡೆದಿದ್ದಾರೆ ಪ್ರಸ್ತುತ ಕೋಟೇಶ್ವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಂಪ್ಯೂಟರ್ ವಿಷಯದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಹೋದರ ಮಿಥುನ್ ಸತೀಶ್ ಕ್ರೀಡಾಕೊಟಾದ ನೆಲೆಯಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ.
ಡಾ॥ ಸಪ್ತಮಿ ಸತೀಶ್ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಪದವಿಯನ್ನು ಪಡೆದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜದ ಪ್ರಶಂಸೆಗೆ ಪಾತ್ರರಾಗಲಿ ಎಂಬುದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆ.
-ಭಂಡಾರಿ ವಾರ್ತೆ