ಪಾತೂರು ದಿವಂಗತ ಶ್ರೀ ತನಿಯಪ್ಪ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ದೇವಕಿ ತನಿಯಪ್ಪ ಭಂಡಾರಿ (86 ವರ್ಷ) ಮೇ 8 ನೇ ಶುಕ್ರವಾರದಂದು ಅಲ್ಪ ಕಾಲದ ಅಸೌಖ್ಯದಿಂದ ಫರಂಗಿಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರ ಅಂತ್ಯ ಸಂಸ್ಕಾರ ವಿಧಿ ವಿಧಾನಗಳು ಮಂಗಳೂರಿನ ಬಿಜೈಯ ಪುತ್ರನ ಮನೆಯಲ್ಲಿ ಶುಕ್ರವಾರದಂದು ಸಾಯಂಕಾಲ 3.00 ಗಂಟೆಗೆ ಮಕ್ಕಳು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಲಿದೆ.
ಶ್ರೀ ಯಶವಂತ ಮತ್ತು ಶ್ರೀಮತಿ ಸವಿತಾ ಭಂಡಾರಿ ಮೂಡಬಿದ್ರೆ, ಶ್ರೀ ಉಮೇಶ್ ಮತ್ತು ಶ್ರೀಮತಿ ನಮಿತಾ ಭಂಡಾರಿ ಬಿಜೈ, ಮಂಗಳೂರು ಶ್ರೀಮತಿ ಮೂಕಾಂಬಿಕಾ ಧರ್ಮರಾಜ್ ವರ್ಕಾಡಿ, ಶ್ರೀಮತಿ ಮೋಹಿನಿ ವಸಂತ ಭಂಡಾರಿ ಉಜಿರೆ, ಶ್ರೀಮತಿ ಗೀತಾ ಕರುಣಾಕರ ಭಂಡಾರಿ ಫರಂಗಿಪೇಟೆ ಶ್ರೀ ಕುಶಲ್ ಮತ್ತು ಶ್ರೀಮತಿ ಭವ್ಯ ಬೆಂಗಳೂರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮಕ್ಕಳು ಹಾಗೂ ಕುಟುಂಬಸ್ಥರಿಗೆ ಇವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
-ಭಂಡಾರಿ ವಾರ್ತೆ