ಅಮ್ಮ ಎಂದರೆ ಖುಷಿ ಮನಸ್ಸಿಗೆ
ಆಕೆ ಮಾದರಿ ನನ್ನ ಬದುಕಿಗೆ
ಒಂಬತ್ತು ತಿಂಗಳು ತನ್ನ
ಉದರದೊಳಗೆ ಹೊತ್ತು
ತನ್ನ ಉಸಿರ ಪಣಕ್ಕಿಟ್ಟು
ಭೂಮಿಗೆ ತಂದಳು ಎನ್ನ
ನನ್ನ ಮೊದಲ ತುದಲುನುಡಿ ಅವಳು
ನನ್ನ ಮೊದಲ ಗುರು ಅವಳು
ನಾ ಕಂಡಿಲ್ಲ ನಿಜವಾದ ದೇವರ
ಇರಬಹುದು ನಿನ್ನಂತೆ ಅವರು
ನನ್ನ ಬದುಕಿನ ಪ್ರಥಮ ಪ್ರೀತಿ ಅಮ್ಮ
ನೀನಿಲ್ಲದೆ ನಾನೇನು ಇಲ್ಲಮ್ಮಾ
ನನ್ನಳೊಗಿನ ಧೈರ್ಯ ನೀನು
ನನ್ನೆಲ್ಲಾ ಸಂತೋಷ ನೀನು
ಪ್ರೀತಿ ಹಂಚುವುದರಲ್ಲಿ ಮೊದಲಿವಳು
ತ್ಯಾಗದ ಪ್ರತೀಕ ಇವಳು
ಪ್ರತಿಕ್ಷಣ ನನ್ನ ಕ್ಷೇಮ ಬಯಸುವಳು
ನನ್ನ ಕಣ್ಣೀರಿಗೆ ಕಣ್ಣೀರಾಗುವಳು
ಹೇ ಪ್ರೀತಿಮೂರ್ತಿಯೇ ಎಲ್ಲ ಸುಖಗಳನ್ನು ಧಾರೆಯೆರೆದೆ ಎನಗೆ
ನಿನ್ನ ಮಮತೆಗೆ ಕೊನೆ ಎಂಬುದು ಎಲ್ಲಿದೆ
ನಿನ್ನ ಋಣವ ನಾ ತೀರಿಸಲಿ ಹೇಗೆ
ಗ್ರೀಷ್ಮಾ ಭಂಡಾರಿ
ಅಂತಿಮ ಪತ್ರಿಕೋದ್ಯಮ
ವಿ.ವಿ ಕಾಲೇಜು ಮಂಗಳೂರು