September 20, 2024
“ಮನೆಯೇ ಮೊದಲ ಪಾಠ ಶಾಲೆ ಜನನಿಯೇ ಮೊದಲ ಗುರು” ಈ ಕವಿ ವಾಣಿ ನನ್ನ ಜೀವನದಲ್ಲಂತೂ ನಿಜವಾಗಿದೆ ಎಂದು ಸ್ಪಷ್ಟವಾಗಿ ಹೇಳಬಲ್ಲೆ. ನನಗಂತೂ ನನ್ನ ತಾಯಿಯೇ ಅಪ್ಪ ಅಮ್ಮ. ತಂದೆ ತನ್ನ ಜವಾಬ್ದಾರಿ ಮರೆತೂ ನಮ್ಮಿಂದ ದೂರವಾದನೂ? ಅಥವಾ ಬೇರೆ ಕಾರಣನೂ ತಿಳಿದಿಲ್ಲ. ಅಂದಿನಿಂದ ಎಲ್ಲ ಹೊಣೆಯನ್ನು ತಾನು ಹೊತ್ತುಕೊಂಡ ಆಕೆ ತನ್ನ ಖುಷಿಗಿಂತ ಮಕ್ಕಳ ಸಂತೋಷವೇ ದೊಡ್ಡದು ಎಂದು ತಿಳಿದು ಹಗಲು ಇರುಳೆನ್ನದೇ ನಮಗಾಗಿ ದುಡಿದಳು.
 
 
               ಯಾರಾದರೂ ನನ್ನ ಬಳಿ ನಿನಗೆ ಮಾದರಿ ಯಾರೆಂದು ಕೇಳಿದರೆ ನಾನು ಹೇಳುವ ಒಂದೇ ಹೆಸರು ಅಮ್ಮ.ಅವಳು ಬಯಸಿದ್ದರೇ ಅಂದೇ ಅವಳಿಗೆ ಬೇಕಾದ ಜೀವನ ಆರಿಸುವ ಆಯ್ಕೆ ಇತ್ತು. ತಂದೆ ಬಿಟ್ಟು ಹೋದರೂ ಈ ಪುರುಷ ಪ್ರಧಾನ ಸಮಾಜದಲ್ಲಿ ಒಬ್ಬಂಟಿಯಾಗಿ ಮೂವರು ಮಕ್ಕಳ ಜೊತೆ ಬಾಳಿನ ಚಕ್ರ ದೂಡಿದಳು.ನಮ್ಮ ಅ ಪರಿಸ್ಥಿತಿಯಲ್ಲಿ ಸಹಾಯಕ್ಕೆ ಬಂದವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೆಯೇ ಕಷ್ಟದ ಸಮಯದಲ್ಲಿ ಇನ್ನಷ್ಟು ಅವಮಾನ ಮಾಡಿದವರಿಗೂ ಧನ್ಯವಾದ.
 
ದಾಸ ವಾಣಿ: ಅಮ್ಮ ನಿಮ್ಮ ಮನೆಗಳಲ್ಲಿ
 
                 ಜಗತ್ತಿನಲ್ಲಿರುವ ಇತರ ಸಂಬಂಧಗಳು ಮನಸ್ಸಿನಲ್ಲಿ ಕಲ್ಪಿಸಬಹುದು,ಮಾತಿನಲ್ಲಿ ಹೇಳಬಹುದು. ಆದರೆ ಮಾತೆಯ ಪ್ರೀತಿ ಎಂಬುದು ಕರುಳಬಳ್ಳಿಯ ಸಂಬಂಧ ಅದನ್ನು ವರ್ಣಿಸಲು ಅಸಾಧ್ಯ. ಮಗು ಜನನವಾದ ಕ್ಷಣದಿಂದ ಅದು ಸರ್ವಾಂಗೀಣವಾಗಿ ಬೆಳೆಯುವ ತನಕ ತಾಯಿಯ ಆರೈಕೆಯಲ್ಲಿರುತ್ತದೆ. ಆಕೆ ತನ್ನಲ್ಲಿರುವ ಒಳ್ಳೆಯ ವಿಚಾರಗಳನ್ನು ಧಾರೆಯೆರೆಯುತ್ತಾಳೆ. ಆದರೆ ದೊಡ್ಡವರಾದಂತೆ ತನ್ನ ಪ್ರಾಣವನ್ನೇ ಒತ್ತೆ ನೀಡಿ ಜನ್ಮ ನೀಡಿದ ತಾಯಿಯನ್ನು ಮರೆತು ಬಿಡುತ್ತೇವೆ.
 
                   ನನ್ನಲ್ಲಿರುವ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ನನ್ನ ತಾಯಿ ನಗು.”ಹೇ ಪ್ರೀತಿಮೂರ್ತಿಯೇ ಎಲ್ಲ ಸುಖಗಳನ್ನು ಧಾರೆಯೆರೆದೆ ಎನಗೆ…ನಿನ್ನ ಮಮತೆಗೆ ಕೊನೆ ಎಂಬುದು ಎಲ್ಲಿದೆ…
   
 
 
 
 
 
 
 
ಗ್ರೀಷ್ಮಾ ಭಂಡಾರಿ,ಕಲ್ಲಡ್ಕ 
 

Leave a Reply

Your email address will not be published. Required fields are marked *