September 20, 2024

ವಿಶ್ವವೇ ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ತತ್ತರಿಸುತ್ತಿದೆ. ಈ ರೋಗದಿಂದ ಭಾರತ ದೇಶ ಕೂಡಾ ಲಾಕ್ ಡೌನ್ ಸಂಕಷ್ಟದಿಂದ ಇದೀಗ ಸ್ವಲ್ಪ ಸ್ವಲ್ಪ ಮುಕ್ತಿಯನ್ನು ಕಾಣುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ದೊಡ್ಡ ಮಟ್ಟದ ಹೊಡೆತ ಬಿದ್ದಿರುವುದು ಕ್ಷೌರಿಕ ವೃತ್ತಿ ಮಾಡುವ ಭಂಡಾರಿ ಸಮಾಜ ಮತ್ತು ಪರಿಯಾಳ ಸಮಾಜದ ವೃತ್ತಿ ಬಾಂಧವರಿಗೆ. ಕೋವಿಡ್ ಪ್ರಕರಣಗಳನ್ನು ಯಾರೂ ಆಹ್ವಾನಿಸುವುದಿಲ್ಲ, ಕೊರೊನಾ ವೈರಾಣು ಯಾರನ್ನೂ ಕೇಳಿ ಬರುವುದಿಲ್ಲ . ಅದಕ್ಕೆ ಯಾವ ಅಡೆ ತಡೆಯೂ ಇರುವುದಿಲ್ಲ. ಉಡುಪಿ ಸವಿತಾ ಸಮಾಜದ ಬಂಧುಗಳಲ್ಲಿ ಕೊರೊನಾ ಬಾಧಿತರು ಇಲ್ಲದಿದ್ದರೂ ರಾಜ್ಯ ,ದೇಶಗಳಲ್ಲಿ ಕೊರೊನಾ ಬಾಧಿಸುವರ ಸಂಖ್ಯೆ ಏರುತ್ತಲೇ ಇದೆ ಕೊರೊನಾಕ್ಕೆ ಶ್ರೀಮಂತ, ಬಡವ, ಜಾತಿ,ಅಂತಸ್ತು, ಧರ್ಮ ಇಲ್ಲದ ಕಾರಣ ನಾವು ಸ್ವಲ್ಪ ಎಡವಿದರೂ ರೋಗ ಆವರಿಸಬಹುದು. ಯಾವುದೇ ಪ್ರದೇಶವಿರಲಿ ನಮ್ಮದು ಕೊರೊನಾ ರೋಗ ಮುಕ್ತ ಊರು ಎಂದು ದಿಢೀರ್ ಹೇಳುವ ಪರಿಸ್ಥಿತಿ ಈಗಿಲ್ಲ. ರೋಗ ನಮ್ಮಲ್ಲಿ ಬಾರದಂತೆ ನೋಡಿಕೊಳ್ಳವುದು ನಮ್ಮ ಜವಾಬ್ದಾರಿ. ನಿಯಮಗಳನ್ನು ಎಲ್ಲರೂ ಪಾಲಿಸಿದರಷ್ಟೆ ಸಂಕಟದಿಂದ ದೂರವಾಗಲೂ ಸಾಧ್ಯ.

ಸಮಾಜದ ಬಗ್ಗೆ ಸದಾ ಕಾಳಜಿ ವಹಿಸಿ ಸಮಾಜಕ್ಕಾಗಿ ತನ್ನಿಂದ ಏನಾದರೂ ಸೇವೆ ಮಾಡಲೇ ಬೇಕು ಎಂಬ ಕನಸು ಕಟ್ಟಿಕೊಂಡು ಉಡುಪಿ ಜಿಲ್ಲೆಯಲ್ಲಿ ಸಂಘಟನೆ ಜೊತೆಗೆ ಅಂದಿನ ಸವಿತಾ ಸಮಾಜ ಜಿಲ್ಲಾಧ್ಯಕ್ಷರಾಗಿದ್ದ ಗೋವಿಂದ ಭಂಡಾರಿ ಬನ್ನಂಜೆ ಮತ್ತು ಕ್ರಿಯಾಶೀಲ ಪದಾಧಿಕಾರಿಗಳ ಬೆಂಬಲದೊಂದಿಗೆ ವೆಂಕಟೇಶ್ ಶಿಕಾರಿಪುರ ಇವರ ಪ್ರೇರಣೆ ಹಾಗೂ ಮಾರ್ಗದರ್ಶನದೊಂದಿಗೆ ಮಣಿಪಾಲದ ನವೀನ್ ಚಂದ್ರ ಭಂಡಾರಿ ಉಡುಪಿ ಜಿಲ್ಲೆಯಾದ್ಯಂತ ನೆಲೆಸಿರುವ ಸವಿತಾ ಸಮಾಜದ (ಭಂಡಾರಿ ಮತ್ತು ಪರಿಯಾಳ) ಕ್ಷೌರಿಕರ ಆರ್ಥಿಕ ಅಭಿವೃದ್ಧಿಯ ದೂರದೃಷ್ಟಿಯನ್ನಿಟ್ಟು ಕೊಂಡು 2007 ನೇ ಮೇ 22 ರಂದು ಸಮಾನ ಮನಸ್ಕರ ತಂಡ ಕಟ್ಟಿ ಕೊಂಡು ಸವಿತಾ ಸಮಾಜದ ಬಂದುಗಳಿಗಾಗಿ ಸವಿತಾ ಸಮಾಜ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆ ಯನ್ನು ಉಡುಪಿ ಯಲ್ಲಿ ಸ್ಥಾಪಿಸಿದರು.

ಸಹಕಾರಿ ಸಂಸ್ಥೆ ಪ್ರಾರಂಭದ ದಿನದಿಂದ ಕ್ಷೌರಿಕರ ಪರವಾಗಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬ್ಯಾಂಕ್ ವ್ಯವಹಾರದೊಂದಿಗೆ ಕ್ಷೌರಿಕರಿಗೆ ಸಮಂಜಸವಾದ ದರದಲ್ಲಿ ಸೆಲೂನ್ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಮಳಿಗೆಯನ್ನು ಪ್ರಾರಂಭಿಸಲಾಯಿತು.

ಕಳೆದ ಐದಾರು ವರ್ಷಗಳಿಂದ ಸಹಕಾರಿ ಸಂಸ್ಥೆ ಸತತವಾಗಿ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಲಾಭಾಂಶ (ಡಿವಿಡೆಂಡ್ ) ವನ್ನು ಘೋಷಿಸುತ್ತಾ ಲೆಕ್ಕ ಪತ್ರದಲ್ಲಿ ” ಎ” ಶ್ರೇಣಿಯನ್ನು ಗಳಿಸಿದೆ. ಸತತವಾಗಿ ಜಿಲ್ಲೆಯ ಕ್ಷೌರಿಕರ ಪರವಾಗಿ ಕೆಲಸ ಮಾಡಿದ ಸಹಕಾರಿ ಸಂಸ್ಥೆ ಯು ಮೂರು ವರ್ಷಗಳ ಹಿಂದೆ ಎರಡು ಬಹು ಮುಖ್ಯವಾದ ಯೋಜನೆಯು ಅಧ್ಯಕ್ಷರಾಗಿರುವ ನವೀನ್ ಚಂದ್ರ ಭಂಡಾರಿಯವರ ಚಿಂತನೆಯಿಂದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಜಾರಿ ಮಾಡಲಾಯಿತು.


ಸವಿತಾ ಹಿರಿಯ ನಾಗರಿಕರ ವೇತನ : 2016- 2017 ನೇ ಸಾಲಿನಲ್ಲಿ ಪ್ರಾರಂಭವಾದ ಯೋಜನೆ ಸಹಕಾರಿಯ ಸದಸ್ಯತನವನ್ನು ಹೊಂದಿರುವ ಕ್ಷೌರಿಕ ವೃತ್ತಿ ನಿರತ ಮತ್ತು ನಿವೃತ್ತಿ ಹೊಂದಿದ್ದ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಸತತ ಮೂರು ವರ್ಷದಿಂದ ಸಹಕಾರಿಯ ಲಾಭಾಂಶದಲ್ಲಿ ಸುಮಾರು ಮೂರು ಲಕ್ಷ ರೂಪಾಯಿ ಹಿರಿಯ ನಾಗರಿಕರಿಗೆ (45 ಮಂದಿಗೆ) ವೇತನ ನೀಡಲಾಗಿದೆ .


ಸವಿತಾ ಆರೋಗ್ಯ ಶ್ರೀ ವಿನೂತನ ಯೋಜನೆ : ಈ ಯೋಜನೆಗೆ ಸವಿತಾ ಸೆಲೂನ್ ಸಾಮಗ್ರಿ ಮಳಿಗೆಯಲ್ಲಿ ವರ್ಷಕ್ಕೆ ಕನಿಷ್ಟ ₹ 12000/- ವ್ಯವಹಾರ ನಡೆಸುತ್ತಿರುವ ಕ್ಷೌರಿಕ ವೃತ್ತಿನಿರತರು ಹಾಗೂ ಅವರ ಕುಟುಂಬದವರು ಆರ್ಹರಾಗುತ್ತಾರೆ. ಈ ಯೋಜನೆಯ ಅನ್ವಯ ಅರ್ಹ ಸದಸ್ಯರು ಹಾಗೂ ಕುಟುಂಬದವರು ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಸಹಕಾರಿ ಸಂಸ್ಥೆ ಯು ಕನಿಷ್ಟ ₹ 5000 ದಿಂದ ಗರಿಷ್ಟ ₹ 25000 ದ ವರೆಗೆ ಸಹಾಯ ಧನವನ್ನು ನೀಡುತ್ತದೆ. ಯೋಜನೆಯು 2016 – 17 ಸಾಲಿನಲ್ಲಿ ಪ್ರಾರಂಭವಾಗಿದೆ.


ಇತ್ತೀಚಿನ ತನಕ ಒಟ್ಟು 30 ಆರ್ಹ ಸದಸ್ಯರು ಸುಮಾರು ₹ 2 ಲಕ್ಷದಷ್ಟು ಪ್ರಯೋಜನ ಪಡೆದಿದ್ದಾರೆ.ಇದಲ್ಲದೆ ಇನ್ನಿತರ ಯೋಜನೆಗಳಾದ ಸವಿತಾ ಸಮಾಜದ ಬಡ ಹೆಣ್ಣು ಮಕ್ಕಳಿಗೆ ಸವಿತಾ ವಿವಾಹ ಸಾಲ , ಸಹಕಾರಿ ಸಂಸ್ಥೆಯ ಸದಸ್ಯರಿಗೆ ಅನಾರೋಗ್ಯದ ಸಮಯದಲ್ಲಿ ಸವಿತಾ ಆರೋಗ್ಯ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತಿದೆ.


ಸಹಕಾರಿ ಸಂಸ್ಥೆಯ ಘೋಷ ವಾಕ್ಯ ನಿಧಿಯಾಗು ನೆರವಾಗುವೇಯ ಆಶಯದಂತೆ ಕೊರೊನಾ ಸಾಂಕ್ರಾಮಿಕ ರೋಗದಿಂದ ತತ್ತರಿಸುತ್ತಿರುವ ಸಂಕಷ್ಟದ ಸಮಯದಲ್ಲಿ ಕ್ಷೌರಿಕ ವೃತ್ತಿ ಮಾಡುವವರ ಕಷ್ಟವನ್ನು ಮನಗಂಡ ಅಧ್ಯಕ್ಷ ನವೀನ್ ಚಂದ್ರ ಭಂಡಾರಿಯವರು ಸೆಲೂನ್ ಪುನಃ ಕಾರ್ಯರಂಭಗೊಳ್ಳುವ ಸಂಕಷ್ಟದ ಸಮಯದಲ್ಲಿ ಜಿಲ್ಲೆಯ ಕ್ಷೌರಿಕ ಬಂಧುಗಳ ಆರ್ಥಿಕ ಪುನಶ್ಚೇತನಕ್ಕೆ ಪುಷ್ಪಿಕೊಡಲು ಅನೇಕ ಯೋಜನೆಗಳನ್ನು ನಿರ್ದೇಶಕರ ಸಹಮತದೊಂದಿಗೆ ಜಾರಿಗೊಳಿಸಿದ್ದಾರೆ.


ಸಹಕಾರಿ ಸಂಸ್ಥೆಯ ಸೆಲೂನ್ ಸಮಾಗ್ರಿ ಮಳಿಗೆಯಲ್ಲಿ ನಿರಂತರವಾಗಿ ವ್ಯವಹಾರಿಸುತ್ತಿರುವ (ವರ್ಷಕ್ಕೆ ಕನಿಷ್ಠ ₹ 5,000) ಸದಸ್ಯರ ವೈಯಕ್ತಿಕ ಸಾಲದ ಮೂರು ತಿಂಗಳ ಬಡ್ಡಿದರವನ್ನು ಸಂಪೂರ್ಣವಾಗಿ ಮನ್ನಾ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ.
ಜಿಲ್ಲೆಯ ಎಲ್ಲಾ ಕ್ಷೌರಿಕ ಸದಸ್ಯರಿಗೆ ಸೆಲೂನ್ ಸಾಮಾಗ್ರಿ ಪಡೆದು ಕೊಳ್ಳಲು ₹ 10,000 ಆರು ತಿಂಗಳ ಬಡ್ಡಿ ರಹಿತ ಸಾಲವನ್ನು ನೀಡಲು ನಿರ್ಧರಿಸಲಾಗಿದೆ. ಸೆಲೂನ್ ಸಾಮಾಗ್ರಿ ಮಳಿಗೆಯಲ್ಲಿ ವ್ಯವಹರಿಸುವ (ವರ್ಷಕ್ಕೆ ಕನಿಷ್ಟ ₹ 5000) ಸದಸ್ಯರಿಗೆ ಈ ಸಾಲವು ಜಾಮೀನು ರಹಿತವಾಗಿ ನೀಡಲಾಗುತ್ತದೆ.


ಉಡುಪಿ ಜಿಲ್ಲೆಯಲ್ಲಿ ಸೆಲೂನ್ ಪುನಃ ಕಾರ್ಯಾರಂಭವಾಗುವ ಸಂಧರ್ಭದಲ್ಲಿ ಸಹಕಾರಿ ಸಂಸ್ಥೆಯ ಸೆಲೂನ್ ಮಳಿಗೆಯಲ್ಲಿ ವ್ಯವಹಾರವಿರುವ ಕ್ಷೌರಿಕ ಸದಸ್ಯರಿಗೆ ಅನುಕೂಲವಾಗುವಂತೆ (ವರ್ಷಕ್ಕೆ ಕನಿಷ್ಠ ₹ 2,000) ಸರಿ ಸುಮಾರು ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ 800 ಕ್ಕೂ ಹೆಚ್ಚಿನ ಸೆಲೂನ್ ಸಾಮಾಗ್ರಿ ಕಿಟ್ ಗಳನ್ನು ನೀಡಲು ಯೋಜನೆ ರೂಪಿಸಿ ಜಾರಿಗೊಳಿಸಲಾಗಿದೆ.

ನವೀನ್ ಚಂದ್ರ ಭಂಡಾರಿಯವರಿಗೆ ಸಮಾಜದ ಮೇಲಿನ ಕಾಳಜಿ ಕುಲ ಕಸುಬಿನ ಬಗ್ಗೆ ಇರುವ ಗೌರವ ಎಲ್ಲರನ್ನೂ ನಿಬ್ಬೆರಗಾಗಿಸುವಂತೆ ಮಾಡಿದೆ. ಅಷ್ಟೇ ಅಲ್ಲದೇ ಸೆಲೂನ್ ನಲ್ಲಿ ಕೆಲಸ ಮಾಡುವ ನೌಕರರಿಗೂ (ಸಹಕಾರಿ ಸಂಸ್ಥೆಯ ಸದಸ್ಯ) ಪಿಗ್ಮಿ ಸಂಗ್ರಾಹಕ ಸಿಬ್ಬಂದಿಗಳಿಗೂ ಅಹಾರ ಸಾಮಾಗ್ರಿ ಕಿಟ್ ನೀಡುವ ಯೋಜನೆ ರೂಪಿಸಿ ಆಡಳಿತ ಮಂಡಳಿಯ ಒಪ್ಪಿಗೆಯನ್ನು ಪಡೆದು ಜಾರಿಗೊಳಿಸಲಾಗಿದೆ.

2012 ರಲ್ಲಿ ಕಾರ್ಕಳ, 2019 ರಲ್ಲಿ ಕುಂದಾಪುರದಲ್ಲಿ ತನ್ನ ಶಾಖೆಯನ್ನು ಆರಂಭಿಸಿ ದುಡಿಯುವ ವರ್ಗಕ್ಕೆ ಬೆನ್ನೆಲುಬಾಗಿ ನಿಂತಿದೆ.

ಸಂಸ್ಥೆಯ ಪ್ರಸ್ತುತ ಅಧ್ಯಕ್ಷರಾಗಿರುವ ಡಾ॥ ನವೀನ್ ಚಂದ್ರ ಭಂಡಾರಿ ಜನಸಾಮಾನ್ಯರ ದುಃಖ ದುಮ್ಮಾನಕ್ಕೆ ಸದಾ ಸ್ಪಂದಿಸುವ ಸಮಾಜದ ಹಿತ ಚಿಂತಕ ರಾಗಿದ್ದು ಉಡುಪಿಯ ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಂಶೋಧನಾ ವಿಭಾಗದಲ್ಲಿ ಸಂಶೋಧಕರಾಗಿ/ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಡಾ॥ ನವೀನ್ ಚಂದ್ರ ಭಂಡಾರಿ

ಶ್ರೀ ದಿವಂಗತ ಹಿರಿಯಣ್ಣ ಭಂಡಾರಿ, ಶ್ರೀಮತಿ ಸುಲೋಚನ ಭಂಡಾರಿ ದಂಪತಿಯ ಪ್ರಥಮ ಪುತ್ರ ಡಾ॥ ನವೀನ್ ಚಂದ್ರ ಭಂಡಾರಿ ಮಂಗಳೂರಿನ ಯೆಯ್ಯಾಡಿ ಶರಬತ್ ಕಟ್ಟೆಯ ತಾಯಿ ಮನೆಯಲ್ಲಿ ಜನಿಸಿದವರು
ನವೀನ್ ಚಂದ್ರರವರು M.Sc. M. Phil.
Ph.D (Thesis Submitted)
ಪದವಿ ಪಡೆದಿದ್ದಾರೆ
ಇವರ ಧರ್ಮಪತ್ನಿ
ಶ್ರೀಮತಿ ರೇಖಾ ನವೀನ್ ಚಂದ್ರ M.Sc. I.T., M. Phil. Ph.D (Thesis
Submitted)
ಪದವಿಯನ್ನು ಪಡೆದಿರುವ ಇವರು ಉಡುಪಿ M.G.M.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಾದ
ಡಾ॥ ನಿಧೀಶ್ BDS,
ನಿಕ್ಷೇಪ್ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಸವಿತಾ ಸಹಕಾರಿಯ ಸ್ಥಾಪನೆಗೆ ಸವಿತಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಹಾಲಿ ಗೌರವಾಧ್ಯಕ್ಷ ಗೋವಿಂದ ಭಂಡಾರಿ ಬನ್ನಂಜೆ ಯವರು ರಾತ್ರಿ ಹಗಲು ಶ್ರಮ ಪಟ್ಟು ದುಡಿದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಭಾನುವಾರದಂದು ಸೆಲೂನ್ ಬಂದ್ ಮಾಡವಂತೆ ಸವಿತಾ ಸಮಾಜದಿಂದ ಸೂಚನೆ.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಾಲ್ಕನೇ ಬಾರಿಗೆ ಭಾನುವಾರದಂದು ಕಟ್ಟು ನಿಟ್ಟಿನ ಲಾಕ್ ಡೌನ್ ಆದೇಶ ಹೊರಡಿಸಿದ ತಕ್ಷಣ
ಕುಂದಾಪುರದ ವೆಂಕಟೇಶ್ ಭಂಡಾರಿಯವರು ಹಾಗೂ ಭಂಡಾರಿ ವಾರ್ತೆಯ ಮುಖ್ಯ ಕಾರ್ಯನಿರ್ವಾಹಕ (ಸಿ ಇ ಓ ) ಪ್ರಕಾಶ್ ಭಂಡಾರಿ ಕಟ್ಲಾ ಇವರಿಬ್ಬರೂ ಮುಂದಿನ ದಿನಗಳಲ್ಲಿ ಭಾನುವಾರದಂದು ಸೆಲೂನ್ ಬಂದ್ ಮಾಡಿ ಸಂಸಾರದ ಜೊತೆಗೆ ಸಮಯ ಕಳೆಯಲು ಸೂಕ್ತ ಸಮಯ ಇದನ್ನು ಉಪಯೋಗಿಸಿ ಭಾನುವಾರದಂದು ಸೆಲೂನ್ ಬಂದ್ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಸಲಹೆ ನೀಡಿದ್ದರು. ಇವರಿಬ್ಬರ ಸಲಹೆಯನ್ನು ಸ್ವೀಕರಿಸಿದ ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಮತ್ತು ಸದಸ್ಯರು ತುರ್ತು ಸಭೆ ನಡೆಸಿ ಜಿಲ್ಲೆಯ ಎಲ್ಲಾ ತಾಲೂಕು ಸವಿತಾ ಸಮಾಜದ ಅಧ್ಯಕ್ಷರ ಜೊತೆಗೆ ಮೇ 22 ನೇ ಶುಕ್ರವಾರದಂದು ಮಾತನಾಡಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆಅಂಗಡಿ ಮುಂದಿನ ದಿನಗಳಲ್ಲಿ ಮಂಗಳವಾರದಂದು ಸೆಲೂನ್ ಓಪನ್ ಮಾಡಿ ಭಾನುವಾರದಂದು ಕಡ್ಡಾಯ ರಜೆ ಘೋಷಿಸುವ ಚಿಂತನೆ ನಡೆಸಿದ್ದಾರೆ. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು,ಕೋಶಾಧಿಕಾರಿ ಶೇಖರ ಸಾಲ್ಯಾನ್ ಆದಿ ಉಡುಪಿ, ರಾಜ್ಯ ಪ್ರತಿನಿಧಿ ವಿಶ್ವನಾಥ ಭಂಡಾರಿ ನಿಂಜೂರು, ಗೌರವಾಧ್ಯಕ್ಷ ಗೋವಿಂದ ಭಂಡಾರಿ ಬನ್ನಂಜೆ, ಸವಿತಾ ಸೌಹಾರ್ದ ಸಹಕಾರಿ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ಉಪಸ್ಥಿತರಿದ್ದರು. ಇವರ ನಿರ್ಧಾರ ಜಾರಿಗೆ ಬಂದರೆ ಉಡುಪಿ ಜಿಲ್ಲೆ ಪ್ರಪ್ರಥಮವಾಗಿ ಭಾನುವಾರದಂದು ಸೆಲೂನ್ ಬಂದ್ ಮಾಡುವ ಹೆಗ್ಗಳಿಕೆಗೆ ಪಾತ್ರವಾಗಿ ದೇಶಕ್ಕೆ ಮಾದರಿಯಾಗಲಿದೆ.

ಮಾಹಿತಿ :
ಸದಾಶಿವ ಬಂಗೇರ
ಕುರ್ಕಾಲು
ಪ್ರಧಾನ ಕಾರ್ಯದರ್ಶಿ
ಜಿಲ್ಲಾ ಸವಿತಾ ಸಮಾಜ ಉಡುಪಿ
ಮಂಜುನಾಥ ಭಂಡಾರಿ
ಪಡುಕೆರೆ
ನಿರ್ದೇಶಕರು ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಉಡುಪಿ

Leave a Reply

Your email address will not be published. Required fields are marked *