September 20, 2024
ಸೊಪ್ಪುಗಳು ಬೇರೆ ಬೇರೆ ರೀತಿಯ ರೂಪ, ಗಾತ್ರ, ಆಕಾರ ಬಣ್ಣ ರುಚಿಗಳನ್ನು ಹೊಂದಿರುವ ತರಕಾರಿಗಳು ನಮ್ಮ ಪ್ರತಿನಿತ್ಯದ ಆಹಾರಕ್ಕೆ ವೈವಿಧ್ಯವನ್ನು ಸ್ವಾದವನ್ನು  ನೀಡುತ್ತವೆ. ಸೊಪ್ಪು ಮತ್ತು ತರಕಾರಿಗಳು ಜೀವಸತ್ವಗಳ ಆಗರ. ಜತೆಗೆ ಇವುಗಳಲ್ಲಿ ನಾರಿನ ಅಂಶವೂ ಇದೆ. ತರಕಾರಿಗಳನ್ನು ಮುಖ್ಯವಾಗಿ ಸೊಪ್ಪು ತರಕಾರಿಗಳು, ಗೆಡ್ಡೆ ಗೆಣಸುಗಳು ಎಂದು ವಿಂಗಡಿಸಬಹುದು.
 
 
 
 ವಿವಿಧ ಬಗೆಯ  ಸೊಪ್ಪುಗಳು
      ಹರಿವೆ, ರಾಜಗಿರಿ, ಪಾಲಕ್, ಮೆಂತೆ ,ಸಬ್ಬಸಿಗೆ ,ಗೋಣಿ,  ಬಸಳೆ, ದಂಟು ,ಹನಗೊನೆ, ಕೊತ್ತಂಬರಿ ,ಕರಿಬೇವು, ಪುದೀನಾ ,ಎಲೆ ಕೋಸು, ನುಗ್ಗೆ ಸೊಪ್ಪು, ಹುಣಸೆ ಎಲೆ, ಮೂಲಂಗಿ ಎಲೆ, ಕಡ್ಲೆ ಸೊಪ್ಪು, ನೀರುಳ್ಳಿ ಗಣಿ ಇತ್ಯಾದಿ ಹೆಸರಿನ ಸೊಪ್ಪುಗಳನ್ನು ನಾವು ಉಪಯೋಗಿಸುತ್ತೇವೆ. ಸೊಪ್ಪುಗಳಲ್ಲಿ ಕೇವಲ   2ರಿಂದ 5% ಪ್ರೋಟಿನ್, 0.5ರಿಂದ 2%ಕೊಬ್ಬು 5ರಿಂದ 10% ಕಾರ್ಬೋಹೈಡ್ರೇಟ್ ಇದ್ದು ಪ್ರತಿ 100 ಗ್ರಾಂ ಸೊಪ್ಪು ಕೊಡುವ ಶಕ್ತಿ ಯ ಪ್ರಮಾಣ ಕೇವಲ 20ರಿಂದ 50 ಕ್ಯಾಲೋರಿಗಳು  ಮಾತ್ರ . ಆದುದರಿಂದ ಬೊಜ್ಜಿನವರು ಸೊಪ್ಪನ್ನು ಸೇವಿಸಲು ಹಿಂದೆ ಮುಂದೆ ನೋಡಬೇಕಾಗಿಲ್ಲ. ಸಕ್ಕರೆ ಕಾಯಿಲೆಯವರು, ಹೃದಯ ರೋಗಿಗಳು ಕೂಡ ಎಷ್ಟು ಬೇಕಾದರೂ ಸೊಪ್ಪನ್ನು ತಿನ್ನಬಹುದು. ಸೊಪ್ಪು ಜೀವಸತ್ವ ಮತ್ತು ಲವಣಗಳಿಂದ ಸಮೃದ್ಧ ವಾಗಿದೆ. ಸೊಪ್ಪಿನಲ್ಲಿ ‘ಎ’ ‘ಬಿ’ ಮತ್ತು ‘ಸಿ’ ಜೀವಸತ್ವ ಗಳು ,ಕಬ್ಬಿಣ, ರಂಜಕ, ಕ್ಯಾಲ್ಸಿಯಂ ಲವಣಗಳು ಅಧಿಕವಾಗಿದೆ. ಇವೆಲ್ಲಾ ನಮ್ಮ ಆರೋಗ್ಯಕ್ಕೆ ಅತ್ಯವಶ್ಯಕ. ಸೊಪ್ಪು ಎಲ್ಲಾ ಕಾಲದಲ್ಲೂ ಸಿಗುತ್ತದೆ. ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಲು ಸಮತೂಕ ಆಹಾರದಲ್ಲಿ ತಿಳಿಸಿರುವಂತೆ ಪ್ರತಿನಿತ್ಯ 40 ಗ್ರಾಂಗಳಷ್ಟಾದರೂ ಸೊಪ್ಪನ್ನು ಉಪಯೋಗಿಸುವುದು ಒಳ್ಳೆಯದು.
 
 
ಸೊಪ್ಪಿನಲ್ಲಿ ನಾರಿನ ಅಂಶ  ಅಧಿಕವಾಗಿದ್ದು ಇದು ನಮ್ಮ ಕರುಳನ್ನು ಸ್ವಚ್ಛವಾಗಿಡುತ್ತದೆ ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತದೆ. ಮಲಬದ್ಧತೆಯ ತೊಂದರೆಯುಳ್ಳವರಿಗೆ ಸೊಪ್ಪುಗಳು ವರದಾನವಾಗಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸೊಪ್ಪು ಎಲ್ಲಾ ಕಾಯಿಲೆಯವರಿಗೂ ಅತ್ಯುತ್ತಮ ಪೋಷಕ ಆಹಾರ. ಮೂತ್ರಕೋಶದಲ್ಲಿ ಕಲ್ಲು ಆಗುವುದನ್ನು ಬಸಲೆ ಸೊಪ್ಪು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲುದೆಂದು ಸಂಶೋಧನೆಗಳು ಹೇಳುತ್ತವೆ. ಸೊಪ್ಪಿನ ಬಣ್ಣ ದಟ್ಟವಾಗಿದ್ದಷ್ಟು ಅವುಗಳಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತದೆ. ನುಗ್ಗೆ , ಕರಿಬೇವು, ಕೊತ್ತಂಬರಿ ಸೊಪ್ಪು, ಸಬ್ಬಸಿಗೆ,ಪಾಲಕ್ ಹನಗೊನೆ, ರಾಜಗಿರಿ, ವೀಳ್ಯದೆಲೆ ಗಳಲ್ಲಿ ‘ಎ’ ಜೀವಸತ್ವ ವಿದ್ದು ಈ ಸೊಪ್ಪುಗಳ ಬಣ್ಣ ದಟ್ಟ ಹಸುರಾಗಿದೆ. ಹನಗೊನೆ, ಕರಿಬೇವು ,ನುಗ್ಗೆ, ಮೆಂತೆ ,ದಂಟು, ಈ ಸೊಪ್ಪುಗಳಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿದ್ದರೆ ಬಸಲೆ, ಗೋಣಿ,ಕೋಸು, ಸಬ್ಬಸಿಗೆ, ರಾಜಗಿರಿ, ದಂಟು ,ಕಡ್ಲೆ ಸೊಪ್ಪು, ಪುದೀನಾ ಇವುಗಳಲ್ಲಿ ಕಬ್ಬಿಣದಂಶ ಅಧಿಕವಾಗಿದ್ದು ರಕ್ತ ಹೀನತೆಯನ್ನು ತಡೆಗಟ್ಟುತ್ತದೆ. ಅತೀ ಕಡಿಮೆ ಶಕ್ತಿ ನೀಡುವ ದಂಟು, ಬಸಲೆ, ಗೋಣಿ ,ಮೂಲಂಗಿ ಸೊಪ್ಪು, ಸಬ್ಬಸಿಗೆ, ಪಾಲಕ್ ಇವುಗಳನ್ನು ಬೊಜ್ಜಿನವರು ಹೆಚ್ಚಾಗಿ  ತಿನ್ನಬಹುದು.
 
 
ಪುದೀನಾ
 
 
ಆರೋಗ್ಯ ರಕ್ಷಕ ಆಹಾರಗಳಲ್ಲಿ ಸೊಪ್ಪುಗಳಿಗೆ ವಿಶೇಷ ಮಾನ್ಯತೆ. ಅಂತಹ ಮಸಾಲೆ ಸೊಪ್ಪುಗಳಲ್ಲಿ ಪುದೀನಾ ಸೊಪ್ಪು ಸಹ ಒಂದಾಗಿದೆ. ಪುದೀನಾ ಎಲ್ಲೆಡೆ ಸುಲಭವಾಗಿ ಸಿಗೋ ಸೊಪ್ಪು. ಇದನ್ನು ಆಗಾಗ ಬಳಸುತ್ತಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ಮನೆ ಮದ್ದಾಗಿಯೂ ಇದನ್ನು ಬಳಸಬಹುದು. ಪುದೀನಾ ಸೊಪ್ಪಿನಲ್ಲಿ ಅಕ್ರ್ಯಾಲಿಕ್‌ ಆ್ಯಸಿಡ್‌, ಕಬ್ಬಿಣ, ವಿಟಮಿನ್‌ ಎ, ಬಿ, ಸಿ ಮತ್ತು ರಂಜಕ ಅಧಿಕವಾಗಿರುವುದರಿಂದ ಇದು ಮನೆ ಮದ್ದಾಗಿ ಬಹಳ ರೀತಿಯಲ್ಲಿ ಬಳಕೆಗೆ ಬರುತ್ತದೆ.
 
 
 
ಪುದೀನಾ ಸೊಪ್ಪು ಖನಿಜಾಂಶಗಳು ಹಾಗೂ ಜೀವಸತ್ವಗಳಿಂದ ಕೂಡಿದೆ. ಹಲ್ಲುಜ್ಜುವ ಪೇಸ್ಟ್ ಮಿಠಾಯಿ ಮತ್ತು ಔಷಧ ತಯಾರಿಕೆಗಳಲ್ಲಿ ಪುದೀನಾ ತೈಲವನ್ನು ಬಳಸುತ್ತಾರೆ. ವಾಯು ಸಂಬಂದಿ ತೊಂದರೆಗಳನ್ನು ನಿವಾರಿಸುವ ಗುಣವನ್ನು ಹೊಂದಿರುವ ಪುದೀನಾವನ್ನು ಹೊಟ್ಟೆಗೆ ಸಂಬಂಧಿತ ವ್ಯಾಧಿಗಳ ನಿವಾರಣೆಗೆ ಬಳಸಲ್ಪಡುತ್ತದೆ. ಪುದೀನಾವು ಸ್ನಾಯು ಸೆಳೆತವನ್ನು ನಿಯಂತ್ರಿಸುತ್ತದೆ. ಹಸಿವನ್ನು ಹೆಚ್ಚಿಸಿ ಹೊಟ್ಟೆ ನೋವನ್ನು ದೂರ ಮಾಡುತ್ತದೆ. ಇದರಲ್ಲಿ ಪಚನ ಶಕ್ತಿಯನ್ನು ಹೆಚ್ಚಿಸುವ ಅಂಶಗಳಿವೆ. ಪಿತ್ತ ಜನಾಂಗಕ್ಕೆ ಉಪಯುಕ್ತವಾದ ಪುದೀನಾವು ಮಾತ್ರ ಜನಾಂಗದಲ್ಲಿ ಉಂಟಾಗುವ ಕಲ್ಲುಗಳನ್ನು ಕರಗಿಸುವ ಸಾಮರ್ಥ್ಯವನ್ನು ಪಡೆದಿದೆ. ಪುದೀನಾ ರಸವು ಹಸಿವನ್ನು ಹೆಚ್ಚಿಸಬಲ್ಲುದು.
 
Green Pudina Leaf Powder - Mentha - Mint, Packaging Size: 25 kg ...
 
ಅಜೀರ್ಣ, ಉದರ ಶೂಲೆ, ಪಿತ್ತೋದ್ರೇಕ ಹೊಟ್ಟೆಯೊಳಗಿನ ದಾರದ ಹುಳು ಮತ್ತು ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಅತಿಭೇದಿಯಂತಹ ರೋಗಗಳಿಗೆ ಪರಿಹಾರವನ್ನು ಕಂಡುಕೊಳ್ಳಲು 1 ಚಮಚದಷ್ಟು ನಿಂಬೆರಸ ಹಾಗೂ ಜೇನುತುಪ್ಪ ನನ್ನು ತಾಜಾ ಪುದೀನಾ ಎಲೆಗಳ ರಸದೊಂದಿಗೆ ಬೆರೆಸಿ ದಿನಕ್ಕೆ 3 ಬಾರಿಯಂತೆ ಸೇವಿಸಬೇಕು. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆಯ ವೇಳೆ 1ಲೋಟ ಪುದೀನಾ ಕಷಾಯವನ್ನು ಸೇವಿಸಿದರೆ ಜೀರ್ಣಕ್ರಿಯೆ ಯು ಸಮರ್ಪಕವಾಗುತ್ತದೆ. ಪುದೀನಾವನ್ನು ಜ್ಯೂಸ್, ಚಟ್ನಿಯ ಮೂಲಕ ಕೂಡ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಂಡು ಬರಬಹುದು.
 
 
 
    -ಸುಪ್ರೀತ ಭಂಡಾರಿ ಸೂರಿಂಜೆ
 
 

Leave a Reply

Your email address will not be published. Required fields are marked *