January 18, 2025
aati koota karkala

ಕಾರ್ಕಳ ಕಾಬೆಟ್ಟು ಕಟ್ಟಿಮಾರು ಹೈವೇ ಬಳಿ ದಿನಾಂಕ 07- 08-2018 ಮಂಗಳವಾರದಂದು ಕಾರ್ಕಳ ತಾಲೂಕು ಭಂಡಾರಿ ಸಮಾಜ ಸೇವಾ ಸಂಘ (ರಿ) ಮತ್ತು ಸವಿತಾ ಸ್ವಸಹಾಯ ಮಹಿಳಾ ಸಂಘ ಕಾರ್ಕಳ ತಾಲೂಕು ಇವರ ಜಂಟಿ ಆಶ್ರಯದಲ್ಲಿ ಭಂಡಾರಿ ಸಮಾಜ ಭಾಂದವರಿಗಾಗಿ

ಕೆಸರ್ ಡ್ ಒಂಜಿ ದಿನ -ಆಟಿದ ಕೂಟ

ಆಯೋಜಿಸಲಾಗಿದೆ.

ಪೂರ್ವಾಹ್ನ 9.00 ರಿಂದ ಮಹಿಳೆಯರಿಗೆ , ಯುವಕರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಮತ್ತು ಆಟಿಯ ವಿಶೇಷ ಆಹಾರ ಖಾದ್ಯಗಳ ಜೊತೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಬಂಧುಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಟಿದ ಕೂಟ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಭಂಡಾರಿ ವಾರ್ತೆಯ ಮೂಲಕ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಭಂಡಾರಿ ನಿಂಜೂರು, ಕಾರ್ಯದರ್ಶಿ ಸುಂದರ ಭಂಡಾರಿ ಕಟ್ಟಿಮಾರ್, ಕೋಶಾಧಿಕಾರಿ ಲೀಲಾಧರ ಭಂಡಾರಿ , ಮತ್ತು ಕ್ರೀಡಾ ಕಾರ್ಯದರ್ಶಿ ಸುರೇಶ ಭಂಡಾರಿ ಹೆಬ್ರಿ ಮುಂತಾದವರು ಆಮಂತ್ರಣ ನೀಡಿ ಮನವಿ ಮಾಡಿರುತ್ತಾರೆ.

 

-ಪ್ರಕಟಣೆ

Leave a Reply

Your email address will not be published. Required fields are marked *