ಮಂಗಳೂರು ಭಂಡಾರಿ ಸಮಾಜ ಭಾಂದವರ ಮೂರನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ಅಗಸ್ಟ್ 5, ಆದಿತ್ಯವಾರದಂದು ಸಮಯ 10:30ರಿಂದ ಭಂಡಾರಿ ಸಮಾಜಸಂಘ ಮಂಗಳೂರು, ಭಂಡಾರಿ ಯುವ ವೇದಿಕೆ ಮಂಗಳೂರು , ಭಂಡಾರಿ ಸ್ವಯಂ ಸೇವಕ ಸಂಘ ಮಂಗಳೂರು ಇವರ ನೇತೃತ್ವದಲ್ಲಿ ಮಂಗಳೂರು ಕದ್ರಿ ಮಲ್ಲಿಕಟ್ಟೆ ಸುಮಸದನ ದಲ್ಲಿ ಮಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ನಾಗೇಶ್ ಎಮ್ ಮಣ್ಣಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಆಟಿದ ಕೂಟದ ಉದ್ಘಾಟನೆ ಮಾಡಲಿದ್ದಾರೆ ,ಮಂಗಳೂರು ಶಕ್ತಿನಗರ ಶಕ್ತಿ ಎಜುಕೇಶನ್ ಟ್ರಸ್ಟ್ ನ ಆಡಳಿತಾಧಿಕಾರಿ ಬೈಕಾಡಿ ಜನಾಧ೯ನ್ ಆಚಾರ್ ಆಟಿದ ಮದಿಪು ಕಾರ್ಯಕ್ರಮ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ,
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಮ್ .ಬಿ.ಸದಾಶಿವ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ, ಭಂಡಾರಿ ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಆಗಮಿಸಲಿದ್ದಾರೆ ಹಾಗೂ ಎಲ್ಲಾ ವಲಯದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿರುವರು. ಬಂದ ಅತಿಥಿಗಳಿಗೆ ಪಾನಕ ಪೆಲಕಾಯಿದ ಗಟ್ಟಿ ಮತ್ತು ಪತ್ರೊಡೆ ನೀಡಿ ಸತ್ಕಾರ ಮಾಡಲಾಗುವುದು.
ಮಧ್ಯಾಹ್ನದ ಊಟಕ್ಕೆ ಆಟಿ ವಿಶೇಷವಾಗಿ ಕುಕ್ಕುದ ಉಪ್ಪಡ್, ತೆಕ್ಕರೆ ತಲ್ಲಿ ,ಕುಡುತ ಚಟ್ನಿ, ಕುಕ್ಕುದ ಚಟ್ನಿ ,ಉಪ್ಪಡ್ ಪಚ್ಚೀರ್ ,ತೊಜಂಕ್ ನುರ್ಗೆ ಸೊಪ್ಪು , ಪದೆಂಗಿ ಗಸಿ, ಉಪೆ೯ಲ್ ನುಪ್ಪು, ಕುಡುತ ಸಾರ್ ,ತೇವು ತೇಟ್ಲ ,ಕೋರಿ ಸುಕ್ಕ, ಬೂತಾಯಿ ಪುಳಿಮುಂಚಿ , ಪೆಲಕಾಯಿದ ಗಾರ್ಯ, ಮೆತ್ತದ ಗಂಜಿ ಹಾಗೂ ಇನ್ನಿತರ ವಿಶೇಷ ಬಗೆಯ ತಿಂಡಿ ತಿನಿಸುಗಳು ಇದೆ.
ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ಮಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ನಾಗೇಶ್ ಎಮ್ . ಮಣ್ಣಗುಡ್ಡೆ ಹಾಗೂ ಮಾಜಿ ಅಧ್ಯಕ್ಷ ಚಂದ್ರಶೇಖರ್ ಕುಳಾಯಿ ಮಂಗಳೂರಿನ ಎಲ್ಲಾ ಭಂಡಾರಿ ಸಂಘ ಸಂಸ್ಥೆಗಳ ಪರವಾಗಿ ಭಂಡಾರಿ ವಾರ್ತೆ ಮೂಲಕ ಸರ್ವ ಭಂಡಾರಿ ಬಂಧುಗಳಿಗೂ ಆಮಂತ್ರಣ ನೀಡಿ ಮನವಿ ಮಾಡಿರುತ್ತಾರೆ.
-ಪ್ರಕಟಣೆ .