
ಪುತ್ತೂರು ಭಂಡಾರಿ ಸಮಾಜ ಸಂಘ ಮತ್ತು ಭಂಡಾರಿ ಮಹಿಳಾ ಸಂಘ ಪುತ್ತೂರು ಇವರ ನೇತೃತ್ವದಲ್ಲಿ ಅಗಸ್ಟ್ 12 ನೇ ಆದಿತ್ಯವಾರ ದಂದು ಬೆಳಿಗ್ಗೆ 10 ಗಂಟೆಗೆ ಲಯನ್ಸ್ ಸೇವಾ ಮಂದಿರ ರಾಧಾಕೃಷ್ಣ ಮಂದಿರದ ಬಳಿ ಬಪ್ಪಳಿಗೆ ಪುತ್ತೂರು ಇಲ್ಲಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ, ಕೈಪ ಅಧ್ಯಕ್ಷರು ಭಂಡಾರಿ ಸಮಾಜ ಸಂಘ ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಿರಂಜನ್ ರೈಮಠಂತಬೆಟ್ಟು ಹಾಗೂ ಮೂಡಬಿದ್ರೆ ಎಕ್ಸಲೆಂಟ್ ಕಾಲೇಜ್ ಉಪನ್ಯಾಸಕ ನವೀನ್ ಕುಮಾರ್ ಮರಿಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸುತ್ತಾರೆ.
ಭಂಡಾರಿ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಿಢೊಂಜಿ ದಿನ ಕಾಯ೯ಕ್ರಮವನ್ನು ಯಶಸ್ವಿಗೊಳಿಸಲು ಪ್ರೋತ್ಸಾಹಿಸ ಬೇಕಾಗಿ ಪುತ್ತೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಭಂಡಾರಿ ವಾತೆ೯ಯ ಮುಖಾಂತರ ಸಮಾಜ ಬಂಧುಗಳಲ್ಲಿ ವಿನಂತಿಸಿದ್ದಾರೆ.
-ಭಂಡಾರಿ ವಾತೆ೯