January 18, 2025
Putturu Bhandaary sangha aatidonji dina 3

ಪುತ್ತೂರು ಭಂಡಾರಿ ಸಮಾಜ ಸಂಘ ಮತ್ತು ಭಂಡಾರಿ ಮಹಿಳಾ ಸಂಘ ಇವರ ನೇತೃತ್ವದಲ್ಲಿ ಅಗಸ್ಟ್ 12 ಭಾನುವಾರದಂದು  ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಭಂಡಾರಿ ಬಂಧುಗಳ ಆಟಿಡೊಂಜಿ ದಿನ ಕಾಯ೯ಕ್ರಮವನ್ನು ಸಂಘದ ಅಧ್ಯಕ್ಷ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು .

ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರುವರು ತಮ್ಮ ಅತಿಥಿ ಭಾಷಣದಲ್ಲಿ ಹಿರಿಯರು ಆಚರಿಸಿಕೊಂಡು ಬಂದಂತಹ ಸಂಪ್ರದಾಯ ಸಮಾಜ ಗುರುತಿಸುವಂತೆ ಮಾಡುತ್ತದೆ,ಆಟಿ ತಿಂಗಳಿನಲ್ಲಿ ಬಳಸುವ ತಿಂಡಿ ತಿನಿಸುಗಳು ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ, ಸಂಸ್ಕಾರ ಮತ್ತು ಸಂಸ್ಕೃತಿಯ ಭಾಗವಾಗಿರುವ ಆಟಿ ತಿಂಗಳು ಸಮಾಜ ಮತ್ತು ಕುಟುಂಬವನ್ನು ಒಟ್ಟುಗೂಡಿಸುವ ತಿಂಗಳಾಗಿದೆ ಎಂದು ಪ್ರತಿಯೊಬ್ಬ ಸಮಾಜ ಬಾಂದವರು ತನ್ನದೇ ಜಾತಿಯ ಮೂಲಕ ಬೆಳೆದುಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ತನ್ನ ಧಮ೯ವನ್ನು ಪ್ರೀತಿಸಿದ ಹಾಗೆ ಇತರ ಧರ್ಮವನ್ನು ಪ್ರೀತಿಸುವಂತಾಗಬೇಕು ಎಂದು ಹೇಳಿದರು.

 
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದೈವಾರಾಧಕರ ಸಂಘದ ಸದಸ್ಯ ಅಶ್ವತ್ಥ್ ಬರಿಮಾರು ಮಾತನಾಡಿ ಆಟಿ ತಿಂಡಿ ತಿನಿಸುಗಳು ವೈವಿಧ್ಯತೆ ಮತ್ತು ಅದರ ಮಹತ್ವವನ್ನು ಮೊದಲು ತಮ್ಮ ಮನೆಯಲ್ಲಿ ಆಚರಿಸಬೇಕು ಮತ್ತು ಕೂಟದಲ್ಲಿ ಆಚರಿಸಿದರೆ ಅದರ ಮಹತ್ವಕ್ಕೆ ಬೆಲೆ ಬರುತ್ತದೆ ತುಳುನಾಡಿನ ಶಕ್ತಿಯನ್ನು ನಾವು ಒಪ್ಪುಲೇಬೇಕಾಗುತ್ತದೆ ತುಳು ಭಾಷೆ ಮತ್ತು ತುಳು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ನಾವು ಕಾಯೋ೯ನ್ಮುಖರಾಗಬೇಕಾಗಿದೆ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಿರಂಜನ್ ರೃೆ ಮಾತನಾಡಿ ತುಳುನಾಡಿನಲ್ಲಿ ಬೇರೆ ಬೇರೆ ಸಂಸ್ಕೃತಿ ವರ್ಗದ ಜನರಿದ್ದರೂ ಸಮಾಜದಲ್ಲಿ ಎಲ್ಲರೂ ಪರಸ್ಪರ ಅರಿತು ಒಗ್ಗಟ್ಟಾಗಿ ಬದುಕುವ ವ್ಯಕ್ತಿತ್ವವನ್ನು ಹೊಂದಿರಬೇಕು ನಾವು ಆಸ್ತಿ ಸಂಪತ್ತನ್ನು ಕ್ರೋಢಿಕರಿಸುವ ಬದಲು ನಮ್ಮ ಮಕ್ಕಳನ್ನು ಸಮಾಜದ ಆಸ್ತಿವಂತರನ್ನಾಗಿ ಮಾಡಬೇಕು ಮನೆಯಲ್ಲಿ ಹಿರಿಯರು ಇದ್ರೆ ಅವರ ಚಾಕರಿ ಮಾಡಬೇಕಾಗುತ್ತದೆ ಎನ್ನುವ ರೀತಿಯಲ್ಲಿ ತಾತ್ಸಾರ ಮಾಡುವ ಬದಲು ಅವರನ್ನು ಪ್ರೀತಿಸುವ ಗುಣವನ್ನು ನಾವು ಮಕ್ಕಳಿಗೆ ಕಲಿಸಿಕೊಡುವಂತಾಗಬೇಕು ಆಹಾರ ಪದ್ಧತಿಯಲ್ಲಿ ಪಾಶ್ಚ್ಯಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುವ ಬದಲು ನಾವು ಆರೋಗ್ಯಕ್ಕೆ ಒಳಿತಾಗುವ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಪುತ್ತೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಮಾತನಾಡುತ್ತಾ ಹಿಂದಿನ ಆಟಿ ತಿಂಗಳಲ್ಲಿ ಭಾರಿ ಮಳೆಯಿಂದಾಗಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಬಹಳ ಕಷ್ಟವಿತ್ತು ಆದರೆ ಇಂದು ಅಭಿವೃದ್ಧಿ ಮತ್ತು ಸೌಕರ್ಯದಲ್ಲಿ ಮುಂದಿದ್ದೇವೆ ಪ್ರಕೃತಿದತ್ತವಾಗಿ ಸಿಗುವ ಫಲವಸ್ತುಗಳು ಇಂದಿನ ಮತ್ತು ಮುಂದಿನ ಪೀಳಿಗೆಗೆ ತಿಳಿಸುವುದು ಬಹಳ ಮುಖ್ಯವಾಗಿದೆ ಹಳ್ಳಿಯಲ್ಲಿ ತಾವೇ ಬೆವರು ಸುರಿಸಿ ಬೆಳೆಸಿದ ಸೊಪ್ಪು ತರಕಾರಿಗಳು ಮಾನವನ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.

ಭಂಡಾರಿ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಐತ್ತಪ್ಪ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶೋಭಾ ಯಾದವ್ ಭಂಡಾರಿ ಹಾಗೂ ನಯನಾ ಜಗದೀಶ್ ಚೆನ್ನಮಣೆ ಆಟವನ್ನು ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ದಾಂಪತ್ಯ ಜೀವನದ ಸುವರ್ಣ ವರ್ಷ ವನ್ನು ಆಚರಿಸಿದ ದಾಸಪ್ಪ ಭಂಡಾರಿ ಮತ್ತು ಪದ್ಮಾವತಿ ಭಂಡಾರಿ ಕುಂಜೂರು ಪಂಜ ಇವರನ್ನು ಸನ್ಮಾನಿಸಲಾಯಿತು ನವ ದಂಪತಿ ದಿವ್ಯರಾಜ್ ಆಶಿಕಾ ದಂಪತಿಯನ್ನು ಅಭಿನಂದಿಸಲಾಯಿತು.

ಸಮಾಜ ಬಂದುಗಳು ತಮ್ಮ ಮನೆಯಲ್ಲಿ ತಯಾರಿಸಿದ ಸುಮಾರು 29 ಬಗ್ಗೆಯ ತಿಂಡಿ ತಿನಸುಗಳನ್ನು ಉಣಬಡಿಸಲಾಯಿತು.

 

ಗೀತಾ ಹರೀಶ್ ಪ್ರಾರ್ಥಿಸಿದರು.ಪ್ರಧಾನ ಕಾರ್ಯದರ್ಶಿ ಜಗದೀಶ್ ಭಂಡಾರಿ ಕುಂಜೂರು ಪಂಜ ಸ್ವಾಗತಿಸಿ ವಂದಿಸಿದರು ನಗರಸಭಾ ಸದಸ್ಯ ವಿನಯ ಭಂಡಾರಿ , ನವೀನ್ ಭಂಡಾರಿ ಮೂಡಂಬೈಲು , ಸುರೇಂದ್ರ ಭಂಡಾರಿ , ಸುಮ ಸುರೇಂದ್ರ ಭಂಡಾರಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು ಜಗದೀಶ್ ಭಂಡಾರಿ ನರಿಮೊಗರು ಕಾರ್ಯಕ್ರಮ ನಿರೂಪಿಸಿದರು.

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *