ಭಂಡಾರಿ ಸಮಾಜ ಸಂಘ ಮಂಗಳೂರು , ಭಂಡಾರಿ ಸ್ವಯಂ ಸೇವಕ ಸಂಘ ಮತ್ತು ಭಂಡಾರಿ ಯುವ ವೇದಿಕೆ ಇವರ ನೇತೃತ್ವದಲ್ಲಿ ಮಂಗಳೂರು ಭಂಡಾರಿ ಸಮಾಜ ಬಾಂದವರ ಆಟಿಡೊಂಜಿ ದಿನ ಮಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ನಾಗೇಶ್ ಎಮ್. ಮಣ್ಣಗುಡ್ಡೆ ರವರ ಅಧ್ಯಕ್ಷತೆಯಲ್ಲಿ ಆಗಸ್ಟ್ 5 ರ ಭಾನುವಾರದಂದು ಕದ್ರಿ ಮಲ್ಲಿಕಟ್ಟೆ ಸುಮಸದನದಲ್ಲಿ ನಡೆಯಿತು.
ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆಟಿದ ಲೇಸ್ ಉದ್ಘಾಟನೆ ಮಾಡಿದರು.
ಶಕ್ತಿ ಎಜುಕೇಶನ್ ಟ್ರಸ್ಟ್ ಶಕ್ತಿ ನಗರ ಆಡಳಿತಾದಿಕಾರಿ ಬೈಕಾಡಿ ಜನಾಧ೯ನ್ ಆಚಾರ್ ಮಾತನಾಡುತ್ತಾ ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಆರೋಗ್ಯದಲ್ಲಿ ಏರು ಪೇರು ಆಗುತಿತ್ತು , ಔಷಧಿ ಗುಣ ಇರುವ ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿತ್ತಿದ್ದರು ಆಟಿ ತಿಂಗಳ ಆಟಿ ಕಳಂಜ, ಚೆನ್ನೆಮಣೆ ಮತ್ತು ತಿನಿಸುಗಳು ತನ್ನದೇ ಆದ ಮಹತ್ವ ಪಡೆದುಕೊಂಡಿದ್ದು ಇಂತಹ ಆಚರಣೆಗಳು ಇಂದು ಸಂಘ ಸಂಸ್ಥೆಗಳ ಮೂಲಕ ಆಚರಿಸಿ ಸಂಪ್ರದಾಯದ ಮಹತ್ವವನ್ನು ಸಾರುತ್ತಿರುವುದು ಪರಂಪರೆ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು “ಆಟಿದ ಮದಿಪು” ನಲ್ಲಿ ಹೇಳಿದರು.
ಮುಖ್ಯ ಅತಿಥಿಯಾಗಿ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ರವರ ಅತಿಥಿ ಭಾಷಣದಲ್ಲಿ ತುಳುನಾಡಿನಲ್ಲಿ ಆಚರಿಸುವ ಭೂತರಾಧನೆ ನಾಗಾರಾಧನೆ ಹಾಗೂ ಪ್ರತಿಯೊಂದು ಹಬ್ಬಗಳಿಗೆ ತನ್ನದೇ ಅದ ಮಹತ್ವ ಇದೆ ಈಗಿನ ಕಾಲದಲ್ಲಿ ಮನುಷ್ಯನ ಯಾಂತ್ರಿಕ ಜೀವನ ತಾಂತ್ರಿಕ ಬದುಕು ಆಹಾರ ಪದ್ದತಿ ಫಾಸ್ಟ್ ಪುಡ್ ಆಗಿದೆ ಈ ನಿಟ್ಟಿನಲ್ಲಿ ಆಟಿಡೊಂಜಿ ದಿನವನ್ನು ಆಚರಿಸಿ ಮುಂದಿನ ಪೀಳಿಗೆ ಆಹಾರ ಪದ್ದತಿಯ ಮಹತ್ವವನ್ನು ತಿಳಿಸಬೇಕಾಗಿದೆ ಎಂದು ಹೇಳಿದರು.
ಭಂಡಾರಿ ಮಹಾಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಭಂಡಾರಿ ಯುವ ವೇದಿಕೆ ಅಧ್ಯಕ್ಷ ಸತ್ಯರಂಜನ್ ಭಂಡಾರಿ, ಸ್ವಯಂ ಸೇವಕ ಸಂಘದ ಅಧ್ಯಕ್ಷೆ ಪೂಣಿ೯ಮ ವಿಜಯ್ ಬೊಂದೇಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಸುಮಾರು 59 ಬಗ್ಗೆಯ ತಿಂಡಿ ತಿನಿಸುಗಳು ಪ್ರದಶ೯ನ ಮಾಡಿ ಸಮಾಜ ಬಂಧುಗಳಿಗೆ ಸೇವಿಸಲು ಲಭ್ಯವಿತ್ತು.
ಮಾಜಿ ಅಧ್ಯಕ್ಷ ರಾಮ್ ಗಣೇಶ್ ಸ್ವಾಗತಿಸಿದರು , ಧನ್ಯ ಹರೀಶ್ ಮತ್ತು ಅಮಿತಾ ಅಮರನಾಥ್ ಕಾಯ೯ಕ್ರಮ ನಿರೂಪಿಸಿ, ಕಾಯ೯ದಶಿ೯ ಶ್ರೀಧರ್ ಕಣ್ಣೂರು ಧನ್ಯವಾದವಿತ್ತರು.
-ಭಂಡಾರಿ ವಾರ್ತೆ
ಛಾಯಾಗ್ರಹಣ : ಸುರೇಶ್ ವಾಮಂಜೂರು