
ಇತ್ತಿಚೆಗೆ ಬೆಂಗಳೂರು ವಿಇಟಿ ಫಸ್ಟ್ ಗ್ರೇಡ್ ಕಾಲೇಜ್ ನಲ್ಲಿ ಆಯೋಜಿಸಿದ್ದ,ಮಕ್ಕಳ ವಿಭಾಗದ Abacus ಸ್ಪರ್ಧೆಯಲ್ಲಿ ,ಕುಂದಾಪುರ ತಾಲ್ಲೂಕಿನ ಸಿದ್ದಾಪುರದ ನಿವಾಸಿಗಳಾದ ಜಗದೀಶ್ ಭಂಡಾರಿ ಹಾಗೂ ಚೇತನ ಜಗದೀಶ್ ಇವರ ಪುತ್ರಿ ಕುಮಾರಿ ವಿಸ್ಮಯ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿರುತ್ತಾಳೆ. ಈಕೆ ಶಂಕರನಾರಾಯಣ ಮದರ್ ತೆರೇಸಾ ಆಂಗ್ಲ ಮಧ್ಯಮ ಸ್ಕೂಲ್ ನ ಐದನೇ ತರಗತಿಯ ವಿದ್ಯಾರ್ಥಿನಿ .
ಇವಳ ಮುಂದಿನ ಶೈಕ್ಷಣಿಕ ಜೀವನ ಉಜ್ವಲವಾಗಿರಲೆಂದು ಭಂಡಾರಿವಾರ್ತೆ ಹಾರೈಸುತ್ತದೆ.