ಕೆನ್-ಇ-ಮಬುನಿ ಷಿಟೋ ರೂ ಕರಾಟೆ ಸ್ಕೂಲ್ ಆಫ್ ಇಂಡಿಯಾ (ರಿ),ಉಡುಪಿ ಇವರ ಆಶ್ರಯದಲ್ಲಿ ಆಗಸ್ಟ್ 4 ಮತ್ತು 5 ರಂದು ಉಡುಪಿ ಕಟ್ಪಾಡಿಯ ವಿಶ್ವನಾಥ ಕ್ಷೇತ್ರದ “ಸಪ್ತಪದಿ ಸಭಾಂಗಣ” ದಲ್ಲಿ ಜರುಗಿದ ಎರಡನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಷಿಪ್ ನಲ್ಲಿ ನಮ್ಮ ಭಂಡಾರಿ ಕುಟುಂಬದ ಮಾಸ್ಟರ್ ಆದಿತ್ಯಾ ಕಿರಣ್ ಹತ್ತರಿಂದ ಹನ್ನೆರಡು ವರ್ಷದೊಳಗಿನ ಕಾಟಾ ವಿಭಾಗದಲ್ಲಿ ಪ್ರಥಮ ಮತ್ತು ಕುಮಿಟೆ ವಿಭಾಗದಲ್ಲಿ ತೃತೀಯ ಬಹುಮಾನ ಗಳಿಸಿರುತ್ತಾರೆ.
ಅದೇ ರೀತಿ ಆದಿತ್ಯನ ಸಹೋದರಿ ಬೇಬಿ ಅನುಷ್ಕಾ ಕಿರಣ್ ಏಳು ವರ್ಷದೊಳಗಿನವರ ಕಾಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮಿಟೆ ವಿಭಾಗದಲ್ಲಿ ತೃತೀಯ ಬಹುಮಾನ ಗಳಿಸಿರುತ್ತಾರೆ. ಮಂಗಳೂರು ವಾಮಂಜೂರಿನ ಶ್ರೀ ಕಿರಣ್ ಕುಮಾರ್ ಭಂಡಾರಿ ಮತ್ತು ಶ್ರೀಮತಿ ಲೀಲಾವತಿ.ಕೆ.ಭಂಡಾರಿ ದಂಪತಿಯ ಮಕ್ಕಳಾದ ಇವರು ಕಾವೂರಿನ ನಿತಿನ್ ಸುವರ್ಣರವರ ಗರಡಿಯಲ್ಲಿ ಕರಾಟೆ ಕಲಿಯುತ್ತಿದ್ದಾರೆ. ಇವರಿಬ್ಬರೂ ಮಂಗಳೂರಿನ ಕೇಂಬ್ರಿಡ್ಜ್ ಸ್ಕೂಲ್ ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು.ಆದಿತ್ಯ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ,ಅನುಷ್ಕ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಸಾಧನೆ ಮಾಡಿರುವ ಆದಿತ್ಯ ಮತ್ತು ಅನುಷ್ಕ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಹೆತ್ತವರಿಗೆ ಮತ್ತು ಭಂಡಾರಿ ಸಮಾಜಕ್ಕೆ ಕೀರ್ತಿ, ಗೌರವ ತಂದುಕೊಡಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯ ಶುಭ ಹಾರೈಕೆ.
— ಭಂಡಾರಿವಾರ್ತೆ.