
ಚಿಕ್ಕಮಗಳೂರು ತಾಲೂಕು ಮಾಗಡಿ ಕೈಮರ ದಿ॥ ಶ್ರೀ ಜಯಶೇಖರ ಭಂಡಾರಿ ಮತ್ತು ಶ್ರೀಮತಿ ಲತಾ ಜಯಶೇಖರ ದಂಪತಿಗಳ ಪುತ್ರ ಆದಿತ್ಯ ಹಾಗೂ ಹಾಸನ ಜಿಲ್ಲೆ ಅರಕಲಗೋಡು ದೊಡ್ಡಮಗ್ಗೆ ಶ್ರೀ ವೆಂಕಟೇಶ್ ಭಂಡಾರಿ ಮತ್ತು ಪ್ರಮೀಳಾ ವೆಂಕಟೇಶ್ ದಂಪತಿಗಳ ಪುತ್ರಿ ಸ್ವಾತಿ ಇವರ ವಿವಾಹ ನಿಶ್ಚಿತಾರ್ಥ ದಿನಾಂಕ 23/2/2018 ಶುಕ್ರವಾರ ಹಾಸನ ಭೈರಾಪುರ ವಧುವಿನ ಸಹೋದರಿ ಶ್ರೀಮತಿ ಸುಮತಿ ಕುಮಾರ್ ಭಂಡಾರಿ ಯವರ ಮನೆಯಲ್ಲಿ ಬಂಧು ಮಿತ್ರರು ಗುರು ಹಿರಿಯರು ಹಾಗೂ ಕುಟುಂಬಸ್ಥರ ಅನುಮತಿ ಮತ್ತು ಆಶೀರ್ವಾದೊಂದಿಗೆ ಬಹಳ ವಿಜೃಂಭಣೆ ಯಿಂದ ಜರಗಿತು .
ಈ ಶುಭ ಸಂದರ್ಭದಲ್ಲಿ ವೈವಾಹಿಕ ಜೀವನಕ್ಕೆ ಹೆಜ್ಜೆ ಇಡಲು ನಿರ್ಧರಿಸುವ ತಮ್ಮ ಕನಸು ಶೀಘ್ರವೇ ಈಡೇರಿಸಲು ಭಗವಂತನ ಅನುಗ್ರಹ ನಿಮಗೆ ಇರಲಿ ಎಂದು ಭಂಡಾರಿ ಸಮಾಜದ ಮನೆ ಮನದ ಮಾತಾಗಿರುವ ಭಂಡಾರಿ ವಾರ್ತೆ ಯ ಪ್ರೀತಿ ಪೂರ್ವಕ ಶುಭ ಹಾರೈಕೆ.
—ಭಂಡಾರಿ ವಾರ್ತೆ