
ಚಿಕ್ಕಮಗಳೂರಿನ ಖ್ಯಾತ ವಕೀಲರಾದ ಶ್ರೀ ಪ್ರಕಾಶ್ ಮತ್ತು ಶ್ರೀಮತಿ ರಷ್ಮಿ ಪ್ರಕಾಶ್ ದಂಪತಿಯು ಚಿಕ್ಕಮಗಳೂರು ನಗರದ ಹೌಸಿಂಗ್ ಬೊರ್ಡ್, ಚಂದ್ರಪ್ರಭಾ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸಿದ
ದ ಗೃಹಪ್ರವೇಶ ಸಮಾರಂಭವನ್ನು ಅಕ್ಟೋಬರ್ 20, 2018 ರ ಶನಿವಾರದಂದು ಅದ್ಧೂರಿಯಾಗಿ ನೆರವೇರಿಸಿದರು.
ದಿವಂಗತ ಸುಂಕಪ್ಪ ಮತ್ತು ದಿವಂಗತ ಸುಶೀಲಮ್ಮ ದಂಪತಿಯ ಪುತ್ರರಾದ ಶ್ರೀ ಪ್ರಕಾಶ್ ರವರು ಚಿಕ್ಕಮಗಳೂರಿನ ಹೆಸರಾಂತ ವಕೀಲರು.ಇವರ ಧರ್ಮಪತ್ನಿ ಶ್ರೀಮತಿ ರಷ್ಮಿ ಪ್ರಕಾಶ್ ಶಿರಾಳಕೊಪ್ಪದ ಶ್ರೀ ಜೋಗುಭಂಡಾರಿ ಮತ್ತು ಶ್ರೀಮತಿ ವಸಂತಿ ಜೋಗು ಭಂಡಾರಿ ದಂಪತಿಯ ಹಿರಿಯ ಮಗಳು.ಇವರಿಗೆ ಸೃಜನ್ ಮತ್ತು ಸೃಶಾ ಇಬ್ಬರು ಮಕ್ಕಳು. ತಮ್ಮ ಹುಟ್ಟು ಹಬ್ಬದ ದಿನವೇ ಗೃಹಪ್ರವೇಶ ಸಮಾರಂಭ ಏರ್ಪಡಿಸಿಕೊಂಡ ಪ್ರಕಾಶ್ ರವರು ಈ ವರ್ಷದ ಜನ್ಮ ದಿನವನ್ನು ಬಹಳ ವಿಶೇಷವಾಗಿ ಆಚರಿಸಿಕೊಂಡರು.
ಗೃಹಪ್ರವೇಶ ಸಮಾರಂಭದ ಶುಭ ಸಂದರ್ಭದಲ್ಲಿ ಮನೆ ದೇವರಿಗೆ ಹೋಮ ಹವನದ ಮೂಲಕ ಪೂಜಿಸಿ ಮಧ್ಯಾಹ್ನ ಎಲ್ಲಾ ಅತಿಥಿ ಮಹೋದಯರಿಗೆ ಭೋಜನ ಕೂಟ ಏರ್ಪಡಿಸಲಾಯಿತು.
ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಂಧುಗಳು, ಸ್ನೇಹಿತರು, ಆತ್ಮೀಯರು, ಸಹೋದ್ಯೋಗಿಗಳು ದಂಪತಿಗಳಿಗೆ ಶುಭ ಹಾರೈಸಿದರು.
ನೂತನ ಗೃಹ ಪ್ರವೇಶದ ಈ ಶುಭ ಸಂದರ್ಭದಲ್ಲಿ ಶ್ರೀ ದೇವರು ಶ್ರೀ ಪ್ರಕಾಶ್ ಮತ್ತು ಶ್ರೀಮತಿ ರಷ್ಮಿ ಹಾಗೂ ಅವರ ಮಕ್ಕಳಾದ ಸೃಜನ್ ಮತ್ತು ಸೃಷಾರಿಗೆ ಆಯುರಾರೋಗ್ಯ ಭಾಗ್ಯವನ್ನಿತ್ತು, ಸುಖ, ನೆಮ್ಮದಿ ಶಾಂತಿ, ಕೊಟ್ಟು ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.