January 18, 2025
Shailaja Manjunath bhandary
ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಮಾಜಿ ಸಹಕಾರ್ಯದರ್ಶಿ, ಬೆಂಗಳೂರಿನ ಖ್ಯಾತ ವಕೀಲೆಯಾಗಿದ್ದ ಶ್ರೀಮತಿ ಶೈಲಜಾ ಮಂಜುನಾಥ್ ಅಲ್ಪಕಾಲದ ಅಸೌಖ್ಯದಿಂದ ಡಿಸೆಂಬರ್ 22, 2018 ರ ಶನಿವಾರ ನಿಧನ ಹೊಂದಿದರು. ಅವರಿಗೆ ಸುಮಾರು 54 ವರ್ಷ ವಯಸ್ಸಾಗಿತ್ತು.
ದಿವಂಗತರು ಮೂಲತಃ ಪುತ್ತೂರಿನ  ದಿವಂಗತ ಪುತ್ತೂರು ಮಹಾಲಿಂಗ ಭಂಡಾರಿಯವರ ಪುತ್ರಿ ಹಾಗೂ  ಪುಣೆಯ ಕ್ಯಾಬಿನೆಟ್ ಸಿಸ್ಟಮ್ಸ್ ಮತ್ತು ಕಂಟ್ರೋಲ್ಸ್ ಪ್ರವೇಟ್ ಲಿಮಿಟೆಡ್ ನ ಪುತ್ತೂರು ಶ್ರೀ ಬಾಲಕೃಷ್ಣ ಭಂಡಾರಿಯವರ ಸಹೋದರಿ.
ಮೃತರು ಪತಿ ಮಂಜುನಾಥ್ ಮತ್ತು  ಏಕೈಕ ಪುತ್ರಿಯನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಡಿಸೆಂಬರ್ 23, 2018 ರ ಭಾನುವಾರ ಬೆಳಿಗ್ಗೆ  10 ಗಂಟೆಗೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. 
ಶ್ರೀಮತಿ ಶೈಲಜಾ ಮಂಜುನಾಥ್ ಅವರ ನಿಧನದಿಂದ ದುಃಖತಪ್ತರಾದ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.
                                                                                                                                                                                                                                                                                     
Smt Shailaja Manjunath expired on 22nd December at Bengaluru due to short time illness
She was an advocate by profession
Smt Shailaja Manjunath was the daughter of late Puttur Mahalinga Bhandary and sister of Sri Puttur Balakrishna Bhandary Poona
May the departed soul RIP
Bhandary Varthe

2 thoughts on “ಬೆಂಗಳೂರಿನ ವಕೀಲೆ ಶ್ರೀಮತಿ ಶೈಲಜಾ ಮಂಜುನಾಥ್ ನಿಧನ

  1. ಮೃತರ ಆತ್ಮಕ್ಕೆ‌ಚಿರಶಾಂತಿ ಸಿಗಲಿ

  2. ಮೃತರ ಆತ್ಮಕ್ಕೆ ದೈವ ಶಾಂತಿ ನೀಡಲೆಂದು ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

Leave a Reply

Your email address will not be published. Required fields are marked *