ಸೈನಿಕ ಶಾಲೆ ಸೊಸೈಟಿಯು ಹೆಣ್ಣು ಮಕ್ಕಳಿಗೆ ಶಾಲೆ ಪ್ರವೇಶಾತಿ ನೀಡಲು, ಆನ್‌ಲೈನ್ ಅಪ್ಲಿಕೇಶನ್ ಪೋರ್ಟಲ್ ಅನ್ನು ಪುನಃ ಓಪನ್ ಮಾಡಿದೆ. ಕರ್ನಾಟಕದ ಬಿಜಾಪುರ ಮತ್ತು ಕೊಡಗು, ಮಹಾರಾಷ್ಟ್ರದ ಚಂದ್ರಾಪುರ, ಉತ್ತರಖಂಡದ ಗೋರಕಲ್, ಆಂದ್ರಪ್ರದೇಶದ ಕಲಿಕಿರಿ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಪ್ರವೇಶಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ಸೈನಿಕ ಶಾಲೆ ಸೊಸೈಟಿಯ ಆನ್‌ಲೈನ್ ಅಪ್ಲಿಕೇಶನ್ ಪೋರ್ಟಲ್ ನವೆಂಬರ್ 26, 2019 ರಂದು ಓಪನ್ ಆಗಿದ್ದು, ಡಿಸೆಂಬರ್ 6 ರವರೆಗೆ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
6 ರಿಂದ 9 ನೇ ತರಗತಿವರೆಗೆ, ಭಾರತದಾದ್ಯಂತದ ಸೈನಿಕ ಶಾಲೆಗಳಿಗೆ ಪ್ರವೇಶಾತಿಗಾಗಿ ವಿದ್ಯಾರ್ಥಿಗಳ ಆಯ್ಕೆಗೆ ಅರ್ಹತಾ ಪರೀಕ್ಷೆ (AISSEE) ನಡೆಸಲಾಗುತ್ತದೆ. AISSEE 2020 ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜನವರಿ 5, 2020 ರಂದು ನಡೆಸಲಾಗುತ್ತದೆ.
ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಆಸಕ್ತಿ ಇರುವ ಹೆಣ್ಣು ಮಕ್ಕಳ ಪ್ರವೇಶಾತಿಗಾಗಿ, AISSEE 2020 ಪ್ರವೇಶ ಪರೀಕ್ಷೆಗೆ ಅಧಿಕೃತ ವೆಬ್‌ಸೈಟ್ sainikschooladmission.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 6ನೇ ತರಗತಿ ಪ್ರವೇಶಾತಿಗೆ, ಹೆಣ್ಣು ಮಕ್ಕಳು 10 ರಿಂದ 12 ವರ್ಷದೊಳಗಿರಬೇಕು. 9 ನೇ ತರಗತಿ ಪ್ರವೇಶಾತಿಗೆ 13 ರಿಂದ 15 ವರ್ಷದೊಳಗಿರಬೇಕು.
AISSEE 2020 ಗೆ ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಸಾಮಾನ್ಯ ವರ್ಗ ಮತ್ತು ರಕ್ಷಣಾ ವಿಭಾಗದ ವಿದ್ಯಾರ್ಥಿಗಳಿಗೆ ರೂ.400, ಎಸ್‌ಸಿ /ಎಸ್‌ಟಿ ವಿದ್ಯಾರ್ಥಿಗಳಿಗೆ ರೂ.250 ರಿಜಿಸ್ಟ್ರೇಷನ್ ಶುಲ್ಕ ಇರುತ್ತದೆ.
ಪ್ರವೇಶ ಪರೀಕ್ಷೆಯು ವಿದ್ಯಾರ್ಥಿಗಳಿಗೆ OMR ಆಧಾರಿತ ಪರೀಕ್ಷೆ ಆಗಿರುತ್ತದೆ. ಸೈನಿಕ ಶಾಲೆಗಳಿಗೆ ಹೆಣ್ಣು ಮಕ್ಕಳ ಪ್ರವೇಶಾತಿ ಅವಕಾಶ ಇತ್ತೀಚಿನ ಬೆಳವಣಿಗೆ ಆಗಿದೆ.
ಆನ್‌ಲೈನ್ ಅರ್ಜಿಗೆ ಡೈರೆಕ್ಟ್ ಲಿಂಕ್ ಇಲ್ಲಿದೆ
— ಭಂಡಾರಿ ವಾರ್ತೆ