
ಪುತ್ತೂರು ಬಸ್ ನಿಲ್ದಾಣದ ಬಳಿ ಕಳೆದ ಹಲವಾರು ವರ್ಷಗಳಿಂದ ವ್ಯವಹಾರ ನಿರತರಾಗಿರುವ ದಿನೇಶ್ ಬೇಕರಿಯ ಮಾಲೀಕರಾಗಿದ್ದ ಪಾಂಗಳಾಯಿ ನಿವಾಸಿ ಐತಪ್ಪ ಭಂಡಾರಿ (85 ವರ್ಷ ) ವಯೋಸಹಜ ಅಸೌಖ್ಯದಿಂದ ಮೂಡಬಿದಿರೆಯಲ್ಲಿರುವ ಪುತ್ರ ದಿನೇಶ್ ಭಂಡಾರಿ ಅವರ ಮನೆಯಲ್ಲಿ ಜುಲಾಯಿ 13 ಬುಧವಾರದಂದು ದೈವಾಧೀನರಾದರು.
1965 ರಲ್ಲಿ ಪುತ್ತೂರಿನಲ್ಲಿ ಪ್ರಪ್ರಥಮವಾಗಿ ದಿನೇಶ್ ಬೇಕರಿಯನ್ನು ಪ್ರಾರಂಭಿಸಿದ್ದ ಇವರು ಸಮಾಜದ ಕೊಡುಗೈ ದಾನಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡು ಜನಪ್ರಿಯರಾಗಿದ್ದರು ಪುತ್ರರಾದ ದಿನೇಶ್,ಗಣೇಶ್ ,ಯತೀಶ್ ಮತ್ತು ಮಹೇಶ್ ಹಾಗೂ ಸೊಸೆಯಂದಿರು ಮೊಮ್ಮಕ್ಕಳನ್ನು ಅಗಲಿದ್ದಾರೆ ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ಮಕ್ಕಳು ಕುಟುಂಬ ವರ್ಗ ಅಗಲುವಿಕೆಯ ಶಕ್ತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.