January 18, 2025
WhatsApp Image 2023-08-15 at 1.16.34 PM

ಅಜಲ್    ಎಂಬುದು ಒಂದು ತುಲು ಪದವಾಗಿರುತ್ತದೆ. ಬೇರೆ ಬೇರೆ ಬರಹಗಾರರು ಅವರವರ ಅರ್ಥಗಳನ್ನು ಈ ಪದಕ್ಕೆ ಕೊಟ್ಟಿದ್ದಾರೆ.ಆ ಸಾಲಿನಲ್ಲಿ ನನ್ನದೂ ಒಂದಿರಲಿ.ವಾದ ವಿವಾದಕ್ಕೆ ನಾನು ಎಡೆ ಮಾಡಿ ಕೊಡುವವನು ನಾನಲ್ಲ.

“ಅಜಲ್”ಎಂಬ ಪದದಲ್ಲಿ ಎರಡು ಅಕ್ಷರಗಳು ಜೋಡಣೆ ಆಗಿದೆ.ಅವೆಂದರೆ “ಅಜೆ ಅಥವಾ ಅಜ” ಮತ್ತು “ಆಲ್”. ಉದಾಹರಣೆಗೆ:ಅಜೆ ಕಲ್ಲ್ ಅಥವಾ ಅಜ ಕಲ್ಲ್ .ಎಂದರೆ ಬೂತ ಸ್ಥಾನಗಳ ಅಂಗಣದಲ್ಲಿ ಎತ್ತರಕ್ಕೆ ಇಟ್ಟಿರುವ ಕಲ್ಲು. ಬೂತಗಳಿಗೆ ನೇಮ(ಸ್ಮರಣೆ-ಉತ್ಸವ)ಆದ ಬಳಿಕ ಕಾಯಿ ಒಡೆದು ದೃಷ್ಟಿ ತೆಗೆಯುವ ನಂಬಿಕೆಗಾಗಿ.ಈ ಕಲ್ಲಿಗೆ ಹೂವು ಕುಂಟಲ್ ಸೊಪ್ಪುಗಳನ್ನು ಅರ್ಪಿಸುವುದು ಇದೆ. ಅಜೆಕೋಲು ಅಥವಾ ಅಜಕೋಲು.ತುಲುನಾಡಲ್ಲಿ ಅಂದೆಲ್ಲಾ ಅದರಲ್ಲೂ ಮುಲಿ ಹುಲ್ಲಿನ ಮನೆಯ ಚಾವಡಿಗಳಲ್ಲಿ ಎತ್ತರದಲ್ಲಿ ಉದ್ದದ ಕೋಲು ಒಂದನ್ನು ಸಮಾನಾಂತರವಾಗಿ ಹೊಡೆಯುವುದು ಇತ್ತು.ಇದರಲ್ಲಿ ಬಟ್ಟೆ ಬರೆ ,ಶಾಲು,ಕೋಮನ(ಲಂಗೋಟಿ),ಬೈರಾಸು ಇತ್ಯಾದಿಗಳನ್ನು ನೇತು ಹಾಕುತ್ತಿದ್ದರು. ಅಜೆಕುಂಜ ಅಥವಾ ಅಜಕುಂಜ.ಅಜೆಕಾರು ಇಲ್ಲಿ ಕಾಣುವ ಎತ್ತರದ ಪರ್ವತದಲ್ಲಿ ಕಾಣುವ ಕಲ್ಲು.ಅಜೆ ಎಂದರೆ ಎತ್ತರ ಮತ್ತು ಕಾರ್ ಅಥವಾ ಕರ್ ಎಂದರೆ ಕಲ್ಲು (ತಪ್ಪಾಗಿ ಇದನ್ನು ಅಜೆ ಕುಂಜ|ಲಾಲಿ ಕುಂಜ ಎನ್ನುವ ಬದಲು ಅಜ್ಜಿಕುಂಜ,ವಾಲಿ ಕುಂಜ ಎನ್ನುತ್ತಾರೆ)

 

 

ಒಟ್ಟಿನಲ್ಲಿನಲ್ಲಿ ಅಜೆ ಅಥವಾ ಅಜ ಎಂದರೆ ಎತ್ತರದಲ್ಲಿ ಇರುವವರು,ಮೇಲು ವರ್ಗದವರು,ಮೇಲು ಜಾತಿಯವರು ,ಉಳ್ಳವರು,ಕೆಳಗಿನಿಂದ ಮೇಲಿನವರೆಗಿನ ಮೆಟ್ಟಿಲು ಇತ್ಯಾದಿ ಅರ್ಥಗಳು.

 

ಇನ್ನು ” ಆಲ್ “ಎಂದರೆ ಆಳು, ಸೇವಕ,ಕೆಲಸದವ, ಗುಲಾಮ, ಅಡಿ ಆಳು, ಜೀತದಾಳು,ಸ್ಲೇವರಿ ಇತ್ಯಾದಿ. “ಅಜೆ|ಅಜ ಎಂದರೆ ಮೇಲಿನ ಮೆಟ್ಟಿಲು.”ಆಲ್” ಎಂದರೆ ಕೆಳ ಮೆಟ್ಟಿಲು.

“ಜಾತಿ” ಮೇಲ್ಜಾತಿ,ಕೀಳ್ಜಾತಿ ಎಂದು ಹುಟ್ಟಿತ್ತೋ ಅಂದೇ ಈ “ಅಜಲ್”ಎಂಬ ಪದದ ಜನನ ಆಯಿತು.ಹುಟ್ಟು ಹಾಕಿದ್ದು ಮಾತ್ರ ಮೇಲ್ಜಾತಿಯ ಜನ ಎಂದು ಕರೆಸಿ ಕೊಂಡವರು.ಅತೀ ಕೆಳಗಿನ ಮೆಟ್ಟಿಲನ್ನು ಮೇಲಿನ ಎಲ್ಲಾ ಮೆಟ್ಟಿಲುಗಳು ಒದ್ದು ಒದ್ದು ರಕ್ತವನ್ನು ಕುಡಿದು ಬಿಟ್ಟಿದೆ. ನಂತರದ ಎರಡನೆಯದು,ಮೂರನೆಯದು….ಹೀಗೆ ಮುಂದುವರಿದಿದೆ.

Leave a Reply

Your email address will not be published. Required fields are marked *