September 20, 2024

ಪುತ್ರ, ಪುತ್ರನ್ 


ಈ ಬರಿಯು ತುಳುನಾಡಿನ ಪ್ರಾಚೀನ ಬರಿಯಾಗಿದ್ದು, ಸಾಮಾನ್ಯವಾಗಿ ಎಲ್ಲಾ ಜಾತಿಗಳಲ್ಲಿ ಕಂಡುಬರುತ್ತದೆ. ಈ ಬರಿಯ ಉಗಮದ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ಪ್ರಾಕೃತ ಭಾಷೆಯಲ್ಲಿ ಪುತ್ರ ಅಥವಾ ಪುತ್ರೋ ನಗರ/ಪಟ್ಟಣ ಎಂಬ ಹೆಸರನ್ನು ಸೂಚಿಸುತ್ತದೆ. ಉದಾಹರಣೆಗೆ ಮಗಧ ಸಾಮ್ರಾಜ್ಯದ ರಾಜಧಾನಿ ಪಾಟಲಿಪುತ್ರ ಎಂಬುದಾಗಿತ್ತು. ಈ ಕಾಲದಲ್ಲಿ ಚಕ್ರವರ್ತಿಯಾಗಿದ್ದ ಅಶೋಕ ತುಳುನಾಡನ್ನು ಪ್ರಾಕೃತ ಭಾಷೆಯಲ್ಲಿ ಸತಿಯಪುತ್ರ “ಸತಿಯಪುತೋ” ಎಂಬುದಾಗಿ ಉಲ್ಲೇಖಿಸಿದ್ದಾನೆ. ಈ ಉದಾಹರಣೆಯಿಂದ ಪುತ್ರ ಬರಿಯ ಜನರು ಮಗಧ ಸಾಮ್ರಾಜ್ಯ ಕಾಲದಲ್ಲಿ ನಗರವಾಸಿಗಳಾಗಿದ್ದವರು ಅಥವಾ ಪಾಟಲೀಪುತ್ರದ ಜನರು ಎಂದು ಅಭಿಪ್ರಾಯಿಸಬಹುದು. ಸಂಸ್ಕೃತ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಪುತ್ರ ಎಂದರೆ ಮಗ ಎಂದರ್ಥ. ಆದರೆ ಬರಿಯ ಹೆಸರಿಗೂ ಈ ಪದಕ್ಕೂ ಸಾಮ್ಯತೆ ಕಂಡುಬರುವುದಿಲ್ಲ. ಪುತ್ರ ಅಥವಾ ಪುತ್ರನ್ ಬರಿಯ ಹೆಸರು ಭಾರತದಲ್ಲಷ್ಟೇ ಅಲ್ಲದೇ ಇಂಡೋನೆಷ್ಯಾ ಮತ್ತು ಸೌದಿ ಅರೇಬಿಯಾದಲ್ಲೂ ಕಂಡುಬರುತ್ತದೆ. 

ಕುಂದ್ರ, ಕುಂದರ್,  ಕುಂದರನ್


‘ಬುಧಿ ಕುಂದರನ್’ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಪಟು ಇವರು ಉಡುಪಿಯ ಮೊಗವೀರ ಸಮುದಾಯದವರು. ಇವರು ಕರಾವಳಿಯ ಕುಂದರ್ ಬರಿ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಬಾಲಿವುಡ್ ನಟ ಸೆಲೆಬ್ರಿಟಿ ಶಿರಿಸ್ ಕುಂದರ್ ಕೂಡಾ ಬರಿ ಹೆಸರನ್ನು ಹೊಂದಿದ್ದಾರೆ. ಕುಂದರ್ ಪದದ ಮೂಲ ಪದ ಈಗ ಬಳಕೆಯಲ್ಲಿ ಇಲ್ಲ. ಈ ಪದದ ಮೂಲ ಉತ್ಪತ್ತಿಯನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಪ್ರಾಚೀನ ಆಪ್ರಿಕಾದ ಇತಿಹಾಸದ ಪುಟಗಳಲ್ಲಿ ‘ಕುಂದಾ’ ಎಂಬ ಹೆಸರಿನ ಆದಿ‌ ಜನಾಂಗ ಕಂಡುಬರುತ್ತದೆ. ಭಾರತೀಯ ಭಾಷೆಗಳಲ್ಲಿ ಗಟ್ಟಿಯಾದ ವಸ್ತು ಬಿಸಿಗೆ ಕುದಿಯುತ್ತಾ ದ್ರವವಾಗುವ ಪ್ರಕ್ರಿಯೆ ಅಥವಾ ನೀರಾಗಿರುವ ಪದಾರ್ಥವನ್ನು ಕುದಿಸಿದಾಗ ಮೆತ್ತನೆಯ ತೇವಯುತ/ಘನರೂಪಕ್ಕೆ ಮರಳುವ ಪ್ರಕ್ರಿಯೆಗೆ ಕುಂದ ಎನ್ನುತ್ತಾರೆ. ಹಾಲು ಮತ್ತು ಸಕ್ಕರೆಯ ಪಾಕಕ್ಕೆ ಕುಂದ ಎನ್ನಲಾಗುತ್ತದೆ. ತುಳುವಿನಲ್ಲಿ ‘ಕುಂದಾವುನ’ ಎಂಬಪದ ಬಳಕೆಯಲ್ಲಿದೆ. ನಮಗೆ ಬೇಕಾದ ರೂಪಕ್ಕೆ ಹದಬರಿಸುವ ಪ್ರಕ್ರಿಯೆಗೆ “ಕುಂದಾವುನ” ಎನ್ನುತ್ತಾರೆ. ‘ಕುಂದ’ ಎಂದರೆ ಕಂಬ ಎಂಬ ಸಮಾನಾರ್ಥವು ತುಳುವಿನಲ್ಲಿದೆ. ಜೈನ ಮತ್ತು ಬೌದ್ದ ಸಾಹಿತ್ಯಗಳಲ್ಲಿ ಕುಂದ ಎಂಬ ಪದದ ಉಲ್ಲೇಖವಿದೆ. ದ್ರವ ರೂಪದ ಚಿನ್ನವನ್ನು ತಮಗೆ ಬೇಕಾದ ರೂಪಕ್ಕೆ ಹದಬರಿಸುವ ಪ್ರಕ್ರಿಯನ್ನು ಕುಂದ ಎನ್ಮಲಾಗುತಿತ್ತು. ಈ ವಿಶೇಷ ಕೌಶಲ್ಯ ಹೊಂದಿದ್ದ ಜನಾಂಗವನ್ನು ಕುಂದ ಜನಾಂಗ ಎಂಬ ಹೆಸರಿನಿಂದ ಕರೆಯಲಾಗಿತ್ತು. ಬಂಗಾರ ಕರಗಿಸುವ ಮತ್ತು ದ್ರವ ರೂಪದ ಚಿನ್ನವನ್ನು ಲೋಹವನ್ನಾಗಿಸುವ ಪ್ರಕ್ರಿಯೆ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನಡೆಯುತಿತ್ತು. ಈ ವಿಶೇಷ ಕೌಶಲ್ಯ ಹೊಂದಿದ ವಂಶವಾಹಿ ಜನಾಂಗಕ್ಕೆ ಕುಂದ ಎಂಬ ವಿಶೇಷ ಹೆಸರು ಬಂದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. 


ಕುಂದರ್ : ಕುಂದರನ್ನರು ಹೆಚ್ಚಾಗಿ ಆಧುನಿಕ ಜಾತಿಗಳಾದ ಬಂಟ ಮತ್ತು ಮೊಗವೀರರಲ್ಲಿ ಕಂಡುಬರುತ್ತಾರೆ. ಸಾಮಾನ್ಯವಾಗಿ ತುಳುನಾಡಿನ ಎಲ್ಲಾ ಜಾತಿಗಳಲ್ಲೂ ಕಂಡುಬರುವ ಬರಿಗಳಲ್ಲಿ ಇದು ಒಂದು. ಕುಂದರನ್ನರು ಕೂಡಾ ಪ್ರಾಚೀನ ಕಾಲದಲ್ಲಿ ತುಳುನಾಡಿಗೆ ಉತ್ತರಭಾರತದಿಂದ ವಲಸೆ ಬಂದ ಜನಾಂಗವೆಂದು ಗುರುತಿಸಲಾಗಿದೆ. 
ಕುಂದ್ರ ಎಂಬ ಸರ್ ನೇಮ್ ಉತ್ತರಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಜಾತಿಸೂಚಕವಲ್ಲ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರ /ಕುಂದರ್ ಸರ್ನೇಮ್ ಹೊಂದಿದ್ದಾರೆ. 


‘ಕುಂದ ಹೆಸರಿನ ಊರುಗಳು ಭಾರತದೆಲ್ಲೆಡೆ ಕಂಡುಬರುತ್ತವೆ. ಉದಾಹರಣೆಗೆ ಕುಂದಾಪುರ, ಕುಂದಾಗೋಳ, ನವಳಗುಂದ , ನರಗುಂದ ಇತ್ಯಾದಿ. ಇವೆಲ್ಲ ಪ್ರಾಚೀನ ಕಾಲದ ರಾಜರು ತಮ್ಮ ವಿಜಯದ ಸಂಕೇತವಾಗಿ ಸ್ಥಾಪಿಸಿದ ಕಂಬಸ್ಮಾರಕಗಳು. ಇoದು ಅದು ಊರಿನ ಹೆಸರಾಗಿ ಬದಲಾಗಿದೆ. ‘

ಪ್ರಶಾಂತ್ ಭಂಡಾರಿ ಕಾರ್ಕಳ

Leave a Reply

Your email address will not be published. Required fields are marked *