ನಮ್ಮ ಸಮಾಜದ ಯುವಕ ಶ್ರೀ ಮಧುಕರ್ ರೆಂಜಾಳ ಉಜಿರೆ ಇವರು ಉಜಿರೆಯ ಹೃದಯ ಭಾಗದಲ್ಲಿ ನೂತನವಾಗಿ ಪ್ರಾರಂಭಿಸಿರುವ ಅಮರ್ಥ್ಯ ಬೇಕರಿ ಮತ್ತು ಚಾಕ್ಲೆಟ್ಸ್ ಡಿಸೆಂಬರ್ 17 ರ ಶನಿವಾರ ಉಜಿರೆಯ ಮಾವಂತೂರು ರೆಸಿಡೆನ್ಸಿಯ ಮಾಲಕ ಶ್ರೀ ಪದ್ಮರಾಜ ಬಲ್ಲಾಲ್ ರವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡುವೆಟ್ನಯ ದೀಪ ಬೆಳಗಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜಾ ,ವಿಧಾನ ಪರಿಷತ್ ಶಾಸಕರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಲಕ್ಷ್ಮಿ ಗ್ರೂಪಿನ ಮಾಲಕರಾದ ಶ್ರೀ ಕೆ. ಮೋಹನ್ ಕುಮಾರ್ ರವರು, ಸಂಧ್ಯಾ ಟ್ರೇಡರ್ಸ್ ನ ಶ್ರೀ ರಾಜೇಶ್ ಪೈಯವರು, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರು ಕಾರಂತ್ ಹೋಟೆಲ್ ನ ಮಾಲಕರಾದ ಶ್ರೀ ಅರವಿಂದ್ ಕಾರಂತ್, ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ಭಂಡಾರಿ ಉಜಿರೆ, ದುರ್ಗಾ ಮೊಬೈಲಿನ ಮಾಲಕರಾದ ಶ್ರೀ ವಿಶ್ವನಾಥ್ ಭಂಡಾರಿ, ಕಾರ್ಕಳ ಪೋಸ್ಟ್ ಆಫೀಸ್ ನ ಅಸಿಸ್ಟೆಂಟ್ ಸುಪರಿಂಟೆಂಡೆಂಟ್ ಶ್ರೀ ಎಂ ಚಂದ್ರನಾಯಕ್ , ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರಕೂರು ಇದರ ಮಾಜಿ ಕಾರ್ಯದರ್ಶಿ ಶ್ರೀ ಸೋಮಶೇಖರ್ ಭಂಡಾರಿ, ಬೆಳ್ತಂಗಡಿ ತಾಲೂಕು ಭಂಡಾರಿ ಯುವ ವೇದಿಕೆಯ ಕಾರ್ಯದರ್ಶಿಗಳಾದ ಶ್ರೀ ಪ್ರಶಾಂತ್ ಅಂಡಿಂಜೆ ಇವರುಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ಶ್ರೀ ಪ್ರವೀಣ್ ಹಳ್ಳಿಮನೆ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಶ್ರೀ ರಕ್ಷಿತ್ ಶಿವರಾಮ್, ಶ್ರೀ ಬಾಬು ಮುಗೇರ ,ಶ್ರೀ ರಮಾನಂದ ಬಿ ಎಂ ಮೆಡಿಕಲ್ಸ್ ,ಶ್ರೀ ಸೂರಜ್ ಅಡೂರ್, ಶ್ರೀ ರಾಮಣ್ಣ ಮಾವಂತೂರ್ ರೆಸಿಡೆನ್ಸಿ, ಛತ್ರಪತಿ ಶಿವಾಜಿ ಉಜಿರೆ ಇದರ ಅಧ್ಯಕ್ಷರಾದ ಶ್ರೀ ಸಂತೋಷ ಅತ್ತಾಜೆ, ಬಿ ಎಂ ಎಸ್ ಇದರ ಜಿಲ್ಲಾ ಕಾರ್ಯದರ್ಶಿ ಶ್ರೀ ಕುಮಾರ್ ನಾಥ ಇನ್ನಿತರ ಗಣ್ಯರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅಮರ್ಥ್ಯ ಬೇಕರಿ ಮಾಲೀಕರಾದ ಶ್ರೀಮತಿ ಮತ್ತು ಶ್ರೀ ಮಧುಕರ ದಂಪತಿ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ರಮ್ಯ ಒನ್ ಗ್ರಾಂ ಗೋಲ್ಡ್ ಮಾಲಕರಾದ ಶ್ರೀ ಪ್ರಸಾದ್ ಬಿ ಎಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಉಜಿರೆಯಲ್ಲಿ ಪ್ರಪ್ರಥಮ ಬಾರಿಗೆ ಎಲ್ಲಾ ಬ್ರಾಂಡಿನ ಚಾಕ್ಲೇಟ್ಸ್ ಮತ್ತು ಡ್ರೈ ಫ್ರೂಟ್ಸ್ ಹಾಗೂ ವಿಧ ವಿಧದ ಕೇಕ್ ಗಳು ಒಂದೇ ಸೂರಿನಡಿಯಲ್ಲಿ ಕೈಗೆಟುಕುವ ದರದಲ್ಲಿ ದೊರೆಯಲಿದೆ.
ಅಮರ್ಥ್ಯ ಬೇಕರಿ ಮತ್ತು ಚಾಕ್ಲೆಟ್ಸ್ ಉದ್ಯಮದ ಮೂಲಕ ಶ್ರೀ ಮಧುಕರ್ ರವರು ಕೀರ್ತಿ ಯಶಸ್ಸು ಗಳಿಸಿ ಸಮಾಜದಲ್ಲಿ ಮನ್ನಣೆ ಪಡೆಯಲಿ ಎಂದು ಈ ಸಂದರ್ಭದಲ್ಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.