ಮಿಸ್ಟರ್ ಏಶಿಯಾ ಇಂಟರ್ ನ್ಯಾಷನಲ್ ಇಂಡಿಯಾ ಸ್ಪರ್ಧೆ ಯಲ್ಲಿ ಉಡುಪಿಯ ಅಂಬಲಪಾಡಿ ಓಂಕಾರ್ ಜೆ .ಭಂಡಾರಿ ಮೊದಲನೇ ರನ್ನರ್ ಅಪ್ ಪ್ರಶಸ್ತಿ
ಮಿಸ್ಟರ್ ಏಶಿಯಾ ಇಂಟರ್ ನ್ಯಾಷನಲ್ ಇಂಡಿಯಾ ಸ್ಪರ್ಧೆಯಲ್ಲಿ ಉಡುಪಿ ಅಂಬಲಪಾಡಿಯ ಓಂಕಾರ್ ಜೆ. ಭಂಡಾರಿ ಮೊದಲನೇ ರನ್ನರ್ ಅಪ್ ಪ್ರಶಸ್ತಿ
ಪಡೆದಿರುತ್ತಾರೆ. ಮಂಗಳೂರು, ಮಣಿಪಾಲ, ಮೈಸೂರು, ಬೆಂಗಳೂರು ಹಾಗೂ ದೇಶದ ವಿವಿಧ ನಗರಗಳಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಿಗೆ ಅಂತಿಮ ಸುತ್ತಿನ ಸ್ಪರ್ಧೆ ಆಗ್ರಾದಲ್ಲಿ ನಡೆದಿದ್ದು, ಉತ್ತಮ ಪೈಪೋಟಿ ನೀಡಿ ಮೊದಲನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.
ಇವರು ಮಂಗಳೂರು ಕೇಂದ್ರ ಕಚೇರಿಯ ಕ್ಯಾಂಪ್ಕೋ ಸಂಸ್ಥೆಯ ಸೀನಿಯರ್ ಮೆನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯ ಭಂಡಾರಿ ಮತ್ತು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾದ ಪೂರ್ಣಿಮ ರವರ ಸುಪುತ್ರನಾಗಿದ್ದು, ಮಣಿಪಾಲ ಡಿ ಓ ಸಿ ಕಾಲೇಜಿನ ದ್ವಿತೀಯ
ಬಿ. ಕಾಂ. ವಿದ್ಯಾರ್ಥಿಯಾಗಿದ್ದಾರೆ.ಉನ್ನತ ಶಿಕ್ಷಣವನ್ನು ಪಡೆದು ಕಲೆ ಮತ್ತು ಸಂಸ್ಕೃತಯಲ್ಲಿ ಅತ್ಯುತ್ತಮ ಹೆಸರು ಗಳಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭಹಾರೈಸುತ್ತದೆ
Proud of u, congratulations 💐💐💐🎉