
ಹೇಗೆ ಏನು ಎಂದು ತಿಳಿಯೆ
ಬಂದೆ ನಾ ನಿನ್ನ ಮಡಿಲಿಗೆ
ಬಣ್ಣದ ಲೋಕ ಎಲ್ಲವೂ ಸುಂದರ
ಈ ಹುಚ್ಚು ಮನಸ್ಸಿಗೆ
ಪುಟ್ಟ ರೆಕ್ಕೆ ಚಾಚಿ ಹಾರಿ ಈ ಜಗವ ನೋಡ ಬಯಸಿದೆ
ಅಮ್ಮ
ನಾನೀ ಜಗವ ನೊಡ ಬಯಸಿದೆ
ಹಾರಬೇಡ ಎಂದೆ ಅಂದು ನೀನು
ಆದರೆ ?
ಪುಟ್ಟ ಮನಸ್ಸು ದೊಡ್ಡ ಆಸೆ ಹಾರಿ ಹೋದೆ ನಾನು
ನವನವೀನ ಈ ಜಗತ್ತು ಹೊಸದು ನನ್ನ ಪಾಲಿಗೆ
ತಪ್ಪು ಸರಿಯ ತಿಳಿಯೆ ನಾನು ತೊಚಿದಂತೆ ಹಾರಿದೆ
ಅಮ್ಮ
ನಿನ್ನ ಮಾತ ಕೇಳಲಿಲ್ಲ ನನಗೆ ದೂರದ ಬೆಟ್ಟ ನುಣ್ಣಗೆ
ರೆಕ್ಕೆ ಮುರಿದು ಬಿದ್ದಿರುವೆ
ನೋಡು ಮತ್ತೊಮ್ಮೆ ನಿನ್ನ ಮಡಿಲಿಗೆ.
