ಅಮ್ಮಾ
ಮರೆವಳು ತನ್ನ ಎಲ್ಲಾ ನೋವನು
ನೋಡಿ ಕಂದಮ್ಮನ ನಗುವನು,
ಸರಿ ದಾರಿಯಲ್ಲಿ ನಡೆಯುವಂತೆ
ತಿದ್ದಿ ತೀಡುವಳು ಪಾದರಸದಂತೆ।
ಸಹಿಸಿರುವಳು ಒಂಬತ್ತು ತಿಂಗಳ ನೋವಾ
ಮರೆತು ಬಿಡುವಳು ನೋವಿನ ಜಗವಾ,
ತ್ಯಜಿಸುವಳು ಎಲ್ಲಾ ಸುಖವ
ಬಯಸುವಳು ತನ್ನ ಕಂದಮ್ಮನ ನಗುವ।
ತಾನಾಗುವಳು ಸಂಸಾರ ಸಾರಥಿ
ಹಂಚುವಳು ಎಲ್ಲರಿಗೂ ಪ್ರೀತಿ
ತಾಳ್ಮೆಗೆ ಇನ್ನೊಂದು ಹೆಸರೇ ತಾಯಿ
ಅವಳೇ ಈ ತ್ಯಾಗಮಯಿ………।
ವೈಶಾಲಿ ಭಂಡಾರಿ ಬೆಳ್ಳಿಪ್ಪಾಡಿ