January 18, 2025
Sugandi Bhandary

Advt.
Advt.

ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದರೂ ಅವರದು ಸುಖೀ ಕುಟುಂಬವಾಗಿತ್ತು. ಗಂಡ-ಹೆಂಡತಿ ಮಾತ್ರ ಇರುವ ಮನೆಯಲ್ಲೀಗ ಖಾಯಿಲೆಯ ಕರಿನೆರಳು ಆವರಿಸಿ ಆಸ್ಪತ್ರೆಯಲ್ಲಿ ಕಾಲ ಕಳೆಯಬೇಕಾದ ಸ್ಥಿತಿಯನ್ನು ತಂದೊಡ್ಡಿದೆ. ಒಂದೆಡೆ ಆಸ್ಪತ್ರೆಯ ಖರ್ಚು ಭರಿಸುವುದು, ಮತ್ತೊಂದೆಡೆ ಜೀವನ ಸಾಗಿಸಲು ಆರ್ಥಿಕ ಹೊರೆಯಿಂದಾಗಿ ದಾನಿಗಳ ನೆರವನ್ನು ಯಾಚಿಸುತ್ತಿದ್ದಾರೆ.
ಇದು ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಕುದುರೆಮಜಲು ನಿವಾಸಿ ಜಗದೀಶ ಭಂಡಾರಿ ಅವರ ಕುಟುಂಬದ ವ್ಯಥೆ. ಇವರ ಪತ್ನಿ ಸುಗಂಧಿ ಭಂಡಾರಿ ಅವರು ಹೃದಯ ಸಂಬಂಧಿ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ. 
ಆರಂಭ ಸಿಡಿಲಿನ ಆಘಾತದಿಂದ ತೊಂದರೆಗೆ ಒಳಗಾಗಿದ್ದ ಸುಗಂಧಿ ಅವರಿಗೆ ಸಕ್ಕರೆ ಖಾಯಿಲೆ ಬಾಧಿಸಿತ್ತು. ಇದರಿಂದ ಕಾಲಿನಲ್ಲಿ ಗಾಯ ಕಾಣಿಸಿಕೊಂಡು ಪ್ರಸ್ತುತ ಕಾಲಿನ ಬೆರಳನ್ನೇ ಕತ್ತರಿಸಲಾಗಿದೆ. ಇದರ ಜತೆಗೆ ಇದೀಗ ಹೃದಯಸಂಬಂಧಿ ಖಾಯಿಲೆ ಕಾಣಿಸಿಕೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಈಗಾಗಲೇ ಸಾವಿರಾರು ರೂಪಾಯಿ ವ್ಯಯಿಸಿರುವ ಕುಟುಂಬಕ್ಕೆ ಮುಂದೆ ಹಣ ಹೊಂದಿಸುವುದು ಕಷ್ಟವಾಗಿದೆ. ಜತೆಗೆ ಜಗದೀಶ್ ಅವರು ಕೂಡ ಆಸ್ಪತ್ರೆಯಲ್ಲಿ ನಿಲ್ಲಬೇಕಿರುವುದರಿಂದ ಅವರ ಕೆಲಸವೂ ಮೊಟಕುಗೊಂಡಿದೆ. ಹೀಗಾಗಿ ಕುಟುಂಬ ದಾನಿಗಳ ಸಹಕಾರ ಯಾಚಿಸುತ್ತಿದೆ. 
ನೆರವು ನೀಡುವ ದಾನಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ನಿಮ್ಮ ನೆರವನ್ನು ಕಳುಹಿಸಬಹುದು 
ಉಳಿತಾಯ ಖಾತೆ ಸಂಖ್ಯೆ: 140901011001167
ಖಾತೆದಾರರ ಹೆಸರು : ಜಗದೀಶ್
ಬ್ಯಾಂಕ್ ಹೆಸರು ಮತ್ತು ಶಾಖೆ: ವಿಜಯಾ ಬ್ಯಾಂಕ್ ,ಸುಬ್ರಹ್ಮಣ್ಯ ಶಾಖೆ
IFSC code   : VIJB0001409 
ಹೆಚ್ಚಿನ ಮಾಹಿತಿಗೆ ಜಗದೀಶ್ ಅವರ ಭಾವ ಗಣೇಶ್ (ಮೊಬೈಲ್ ಸಂಖ್ಯೆ 08111858295) ಅವರನ್ನು ಸಂಪರ್ಕಿಸಬಹುದು.
ವರದಿ : ಗಣೇಶ್ ಭಂಡಾರಿ , ಬಂದಡ್ಕ , ಕಾಸರಗೋಡು.

ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ 

http://www.bhandaryvarthe.in/selfie-contest-2018/

Leave a Reply

Your email address will not be published. Required fields are marked *