January 18, 2025
WhatsApp Image 2021-09-24 at 18.24.12

ಬೆಂಗಳೂರಿನ ವೈಟ್ ಫೀಲ್ಡ್ ಬೋರ್ ವೆಲ್ ರೋಡ್ ನ ಶ್ರೀ ಆನಂದ ವಿ ಸ್ವಾಮಿಯವರು ಸೆಪ್ಟೆಂಬರ್ 24 ರ ಮದ್ಯಾಹ್ನ1.30 ಕ್ಕೆ ಅಲ್ಪ ಕಾಲದ ಅಸೌಖ್ಯದಿಂದ ವಿಧಿವಶರಾದರು.ಅವರಿಗೆ ಸುಮಾರು 78 ವರ್ಷ ವಯಸ್ಸಾಗಿತ್ತು. ಇವರು ನಮ್ಮ ಸಮಾಜದ ಖ್ಯಾತ ವೈದ್ಯರಾಗಿರುವ ಡಾ| ತ್ಯಾಗರಾಜ್ ರವರ ಅಣ್ಣ.

ದಿವಂಗತರು ಮಗ ಸಂತೋಷ್ ಮತ್ತು ಹೆಣ್ಣು ಮಕ್ಕಳಾದ ಶ್ರೀಮತಿ ಅನಿತಾ ಮತ್ತ ಸಂಗೀತ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳು , ಸಹೋದರರು ಹಾಗೂ ಅಪಾರ ಬಂಧು‌ ವರ್ಗವನ್ನು ಅಗಲಿದ್ದಾರೆ.
ಜನಾನುರಾಗಿ ಹಾಗು ಕೊಡುಗೈ ದಾನಿಯಾಗಿದ್ದ ಇವರು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಓರ್ವ ಪೋಷಕರಾಗಿದ್ದರು.

ಮೃತರ ಅಂತ್ಯಕ್ರಿಯೆಯು ಸೆಪ್ಟೆಂಬರ್ 25 ರ ಬೆಳಿಗ್ಗೆ 10.30 ಕ್ಕೆ ಮೃತರ ಸ್ವಗೃಹ ಬೆಂಗಳೂರಿನ ವೈಟ್ ಫೀಲ್ಡ್ ನ ಬೋರೆವೆಲ್ ರೋಡ್ ನಲ್ಲಿ ನಡೆಯಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ .
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕುಟುಂಬಕ್ಕೆ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು. ಇದಕ್ಕಾಗಿ ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *