
ಉದ್ಯೋಗ ನಿಮಿತ್ತ ದೂರದ ಮಸ್ಕತ್ ನಲ್ಲಿ ನೆಲೆಸಿರುವ ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯ ಶ್ರೀ ಅನಿಲ್ ಭಂಡಾರಿ ಮತ್ತು ಶ್ರೀಮತಿ ಚೇತನಾ ಅನಿಲ್ ಭಂಡಾರಿ ದಂಪತಿಗಳು ತಮ್ಮ ವೈವಾಹಿಕ ಜೀವನದ ಐದನೇ ವರ್ಷದ ವಾರ್ಷಿಕೋತ್ಸವವನ್ನು ಫೆಬ್ರುವರಿ 9 ರ ಶನಿವಾರ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಿಕೊಂಡರು.




ಈ ಸುಸಂದರ್ಭದಲ್ಲಿ ಮಗ ಮಾಸ್ಟರ್ ಅನ್ವಿತ್ ಅನಿಲ್ ಭಂಡಾರಿ,ಅಜ್ಜ ಶ್ರೀ ವಾಸು ಭಂಡಾರಿ, ಅಜ್ಜಿ ಶ್ರೀಮತಿ ಶಾಂತ ವಾಸು ಭಂಡಾರಿ, ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯಲ್ಲಿ ನೆಲೆಸಿರುವ ತಂದೆ ತಾಯಿ ಶ್ರೀ ವಸಂತ ಭಂಡಾರಿ ಮತ್ತು ಶ್ರೀಮತಿ ಮೀನಾಕ್ಷಿ ವಸಂತ ಭಂಡಾರಿ, ಮೂಡುಬಿದಿರೆಯಲ್ಲಿರುವ ಅತ್ತೆ ಮಾವ ಶ್ರೀ ದಾಮೋಧರ ಭಂಡಾರಿ ಮತ್ತು ಶ್ರೀಮತಿ ಗಿರಿಜಾ ದಾಮೋಧರ ಭಂಡಾರಿ, ತಂಗಿಯಂದಿರಾದ ಶ್ರೀಮತಿ ಅನಿತಾ ಹರೀಶ್ ಭಂಡಾರಿ, ಬೆಂಗಳೂರು ಮತ್ತು ಶ್ರೀಮತಿ ಅಮಿತಾ ಗಿರಿಧರ್ ಭಂಡಾರಿ, ಮೂಡುಬಿದಿರೆ,ನಾದಿನಿ ಕುಮಾರಿ ನಂದನ ದಾಮೋಧರ ಭಂಡಾರಿ, ಪುಟಾಣಿಗಳಾದ ದೇವಿಕಾ,ಮನೀಶ್,ಧನ್ವಿತ್ ಹಾಗೂ ಅಪಾರ ಬಂಧುಬಳಗದವರು,ಸ್ನೇಹಿತರು,ಹಿತೈಷಿಗಳು ಶುಭ ಹಾರೈಸಿದ್ದಾರೆ.



ಶ್ರೀ ಅನಿಲ್ ಕುಮಾರ್ ದಂಪತಿಗಳು ತಮ್ಮ ಮದುವೆಯ ಐದನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಈ ಶುಭ ಸಂದರ್ಭದಲ್ಲಿ ಭಗವಂತನು ಅವರಿಗೆ ಆಯುರಾರೋಗ್ಯ, ಐಶ್ವರ್ಯ ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ”ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”