November 22, 2024
1

Anjeer benefits: ಚಳಿಗಾಲದಲ್ಲಿರಲಿ ಅಂಜೂರ ಹಣ್ಣುಗಳ ಸೇವನೆ; ಮಕ್ಕಳಿಗೆ ಹಾಲಿನ ಜೊತೆ ಸೇರಿಸಿ ಕೊಡಿ

ಚಳಿಗಾಲದಲ್ಲಿ ಹಲವರ ಜೀರ್ಣಕ್ರಿಯೆ ಸರಳವಾಗಿರಲ್ಲ. ಇದರ ಜೊತೆ ಚಳಿ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿಈ ಹಣ್ಣುಗಳ ಸೇವನೆ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ.

ಚಳಿಗಾಲದಲ್ಲಿ ನೀವೂ ಫಿಟ್​ ಆಗಿರಬೇಕಾದ್ರೆ ದಿನನಿತ್ಯದ ಆಹಾರದಲ್ಲಿ ಒಂದಿಷ್ಟು ಆಹಾರಗಳನ್ನು ಸೇವಿಸಬೇಕು. ಚಳಿಗಾಲದಲ್ಲಿಈ ಆಹಾರಗಳು ನಿಮ್ಮ ಹೆಚ್ಚು ಉಪಯುಕ್ತವಾಗಿವೆ.

ನೀವು ನಿಮ್ಮ ಆರೋಗ್ಯ ಮತ್ತು ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಲು ಬಯಸಿದ್ರೆ ಇಂದಿನಿಂದ ನಿಮ್ಮ ದೈನಂದಿನ ಆಹಾರದಲ್ಲಿ ಬೀಜಗಳನ್ನು ಸೇರಿಸಿ. ಅಂಜೂರು ಹಣ್ಣುಗಳು ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ಇಳಿಸುವಲ್ಲಿ ಸಹಾಯ ಮಾಡುತ್ತವೆ. ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ.

ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಎರಡು ಅಥವಾ ಮೂರು ಅಂಜೂರದ ಹಣ್ಣುಗಳನ್ನು ತಿನ್ನಬೇಕು. ಆದಾಗ್ಯೂ, ಅದರ ಮೊತ್ತದ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯಲು, ನೀವು ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳಬಹುದು. (ಸಾಂದರ್ಭಿಕ ಚಿತ್ರ)

ಅಂಜೂರದ ಹಣ್ಣನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದನ್ನು ತಿಂದರೆ ಚಳಿಗಾಲದಲ್ಲಿ ಕಾಯಿಲೆ ಬರುವುದಿಲ್ಲ ಎಂದು ಹೇಳುತ್ತಾರೆ. ಶೀತ, ಕೆಮ್ಮು, ನೋವು, ಜ್ವರವನ್ನು ತಡೆಯುವ ಶಕ್ತಿಯನ್ನು ಅಂಜೂರು ಹೊಂದಿವೆ. (ಸಾದರ್ಭಿಕ ಚಿತ್ರ)

ಚಳಿಗಾಲದಲ್ಲಿ ಜೀರ್ಣಶಕ್ತಿ ದುರ್ಬಲವಾಗುತ್ತದೆ. ಆದ್ದರಿಂದ ಅಂಜೂರದ ಹಣ್ಣು ಬೆರೆಸಿದ ಹಾಲನ್ನು ಕುಡಿಯಿರಿ. ಇದು ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. (ಸಾಂದರ್ಭಿಕ ಚಿತ್ರ)

ಅಂಜೂರದ ಹಾಲು ಮಾಡುವ ವಿಧಾನ
3 ಅಂಜೂರವನ್ನು ಹಾಲಿನಲ್ಲಿ ಎರಡರಿಂದ ನಾಲ್ಕು ಗಂಟೆಗಳ ಕಾಲ ನೆನೆಸಿಡಿ. ಅದರ ನಂತರ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.

ನೆನೆಸಿದ ಅಂಜೂರದ ಹಣ್ಣನ್ನು ಪುಡಿಮಾಡಿ ಅದನ್ನು ಹಾಲಿನಲ್ಲಿ ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ. ನಿಮ್ಮ ರುಚಿಗೆ ಅನುಗುಣವಾಗಿ ಸಕ್ಕರೆ ಸೇರಿಸಿದ್ದರೆ ಕುಡಿಯಲು ಅಂಜೂರದ ಹಾಲು ಸಿದ್ದ (ಸಾಂದರ್ಭಿಕ ಚಿತ್ರ)

ಅಂಜೂರದ ಹಣ್ಣುಗಳು ದೇಹಕ್ಕೆ ಉಷ್ಣತೆಯನ್ನು ನೀಡುವ ಕಾರಣ ಚಳಿಗಾಲದಲ್ಲಿ ಸೇವನೆ ಮಾಡಬೇಕು. ಬೇಸಿಗೆಯಲ್ಲಿ ವೈದ್ಯರ ಸಲಹೆ ಮೇರೆಗೆ ಸೇವಿಸಿ. (ಸಾಂದರ್ಭಿಕ ಚಿತ್ರ)

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರದ ಹಣ್ಣುಗಳನ್ನು ಉಪಹಾರದಲ್ಲಿ ಸೇರಿಸುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ. ನೀವು ದಿನಕ್ಕೆ ಎರಡರಿಂದ ಮೂರು ಅಂಜೂರದ ಹಣ್ಣುಗಳನ್ನು ತಿನ್ನಬಹುದು. (ಸಾಂದರ್ಭಿಕ ಚಿತ್ರ)

( ಹಕ್ಕು ನಿರಾಕರಣೆ : ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ.)

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: 18

Leave a Reply

Your email address will not be published. Required fields are marked *