ಅತಿಮಧುರವಾದ ಕ್ಷಣಗಳಲ್ಲಿ ಬಾಲ್ಯ ಸಹ ಒಂದು. ಅಕ್ಕ, ಅಣ್ಣ, ತಂಗಿ, ತಮ್ಮರೊಂದಿಗೆ
ಅಣ್ಣನೆಂದರೆ ತಂಗಿಗೆ ತುಂಬಾ ಇಷ್ಟ ಅವನಿಗೂ ಅಷ್ಟೇ. ಅ ಸಂಬಂಧವೇ ಹಾಗೆ ಮುಗಿಯಾಲಾರದ ಅನುಬಂಧ. ಒಮ್ಮೊಮ್ಮೆ ಕಿತ್ತಾಟ, ಹೊಡೆದಾಟ ಇವನ್ನೆಲ್ಲಾ ಮೀರಿದ ಒಂದು ಭಾಂಧವ್ಯವೇ ಒಡಹುಟ್ಟಿದವರ ನಡುವಿನಲ್ಲಿರುವ ಸಂಬಂಧ. ಒಬ್ಬ ನಿಜವಾದ ಅಣ್ಣ ತಂದೆಯಾಗಿ, ತಾಯಿಯಾಗಿ, ಮಿಗಿಲಾಗಿ ಒಬ್ಬ ಸ್ನೇಹಿತನಾಗಿ ಜೊತೆಯಲ್ಲಿರುತ್ತಾನೆ. ಅಣ್ಣ ಎಂದಾಗ ಹಲವರಿಗೆ ಅವನೊಂದಿಗೆ ಬಾಲ್ಯದಲ್ಲಿ ಕಳೆದ ನೆನಪುಗಳ ಸರಮಾಲೆಯೇ ಕಣ್ಣೆದುರು ಬರುತ್ತದೆ. ಅ ನೆನಪಿನ ಪರಿಚಯ ಇಲ್ಲದವರು ನನಗೂ ಒಬ್ಬ ಸಹೋದರನಿರಬೇಕಿತ್ತು ಎಂದು ಹೇಳುವುದು ಸಹಜ.
ಅದೊಂದು ಅದ್ಭುತ ಲೋಕ ಅ ಜಗತ್ತನ್ನು ವರ್ಣಿಸುವುದು ಅಸಹಜ ಸಂಗತಿಯೇ ಸರಿ. ಅದೇ ಅಣ್ಣನೆಂಬ ಲೋಕ.ತಂಗಿಯರ ಮಾನ ಪ್ರಾಣಕ್ಕೋಸ್ಕರ ಜೀವ ಕೊಟ್ಟಂತಹ ಮತ್ತು ಜೀವ ತೆಗೆದಂತಹ ಪ್ರಕರಣಗಳು ಸಾಕಷ್ಟಿವೆ. ಸಹೋದರ-ಸಹೋದರಿಯಾಗಲು ರಕ್ತಸಂಬಂಧಿಯೇ ಆಗಬೇಕಿಲ್ಲ ಅ ಭಾವನೆಯನ್ನು ಹೊಂದಿರುವ ಪ್ರತಿಯೊಬ್ಬರೂ ಅಣ್ಣ ತಂಗಿಯಂತೆಯೇ. ಗಂಡು ಹೆಣ್ಣಿನ ಸಂಬಂಧವನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಗುರುತಿಸುವುದು ತಪ್ಪು. ಅವರಲ್ಲೂ ಒಂದು ಉತ್ತಮ ಭಾಂಧವ್ಯದ ಭಾವನೆಗಳು ಇದೆ ಎಂದು ಅರಿಯಬೇಕು.
ಅಣ್ಣ-ತಂಗಿ ಸಂಬಂಧದ ಕಲ್ಪನೆ ಬಹಳ ಅಗಾಧ ಹಾಗೂ ಅವರ್ಣನೀಯ. ಸಹೋದರಿ ಎಷ್ಟೇ ಬೇಜಾರಿನಲ್ಲಿ ಇದ್ದರೂ ಸಹೋದರ ಮುದ್ದು ಮಾಡುವ ರೀತಿಗೆ ತುಟಿಯ ಅಂಚಿನಲ್ಲಿ ಒಂದು ಸಣ್ಣ ಕಿರುನಗೆ ತಂದು ಕೊಡುತ್ತದೆ ಅಲ್ವಾ???
“”ಪ್ರತಿಯೊಂದು ಹೆಣ್ಣಿಗೂ ಕಾಯುವಂತಹ ಅಣ್ಣ ಇರಬೇಕು. ಅವನ ಹೆಗಲ ಮೇಲೆ ಅವಳಿಗೊಂದು ಜಾಗವಿರಬೇಕು””
✍ ಗ್ರೀಷ್ಮಾ ಭಂಡಾರಿ ಕಲ್ಲಡ್ಕ