January 18, 2025
cutuku

ಮಾಹಿತಿ ನೀಡದೆ ನೀ ಲಗ್ಗೆ ಇಟ್ಟೆ ಈ ಮನಸ್ಸಿನೊಳಗೆ. .
ಅದ ನೀ ತಿಳಿದರು ಮತ್ತೇಕೆ ಮೌನವಾಗಿಹೆ…

ದೂರದ ಬಾನಿನ ಚುಕ್ಕಿಯಂತೆ ನೀನು
ಭಾನುವಿನ ಕಿರಣಗಳಂತೆ ನಿನ್ನ ನಗು
ನಿನ್ನ ನೋಡಿಯೇ ಕಳೆದೋಗುವೆ ನಾನು
ನಿನ್ನ ಜೊತೆಗೂಡಿ ನಾನಾಗಿಹೆ ಪುಟ್ಟ ಮಗು

ನಿನ್ನಂತರಾಳದಲಿ ಸೇರಿರುವೆ ನಾನು
ನಡುಮಧ್ಯದಲ್ಲಿ ತೊರೆದೆಯಾ ನೀನು
ನಿನ್ನೊಡನೆ ಸರಿದ ಕ್ಷಣಗಳು ಸುಂದರ
ಅದು ಸೃಷ್ಟಿಸಿದೆ ನೆನಪಿನ ಹಂದರ

ಮಧುಮಾಸದ ಚಂದ್ರಮ ನಾಚಿಹನು
ನೋಡಿ ನಿನ್ನ ಸೌಂದರ್ಯ
ನಿನ್ನೊಳಗೆ ಅವಿತು ಕುಳಿತಿಹುದು
ನನ್ನ ಮನದಾಂತರ್ಯ..

ವರುಷಗಳೇ ಉರುಳಿದವು ನಿನ್ನೊಡನೆ
ಜೀವನಚಕ್ರ ತಿರುಗುತಿಹುದು ನಮ್ಮೊಡನೆ
ಕಾಲಚಕ್ರದೊಳಗೆ ಲೀನಳಾದೆ ನೀನು ಒಬ್ಬಂಟಿಗನಾಗಿ ಬಿಟ್ಟು ನನ್ನ
ನಿನ್ನ ನೆನಪಿನಲ್ಲಿಯೇ ಕೊರಗುತಿಹೆ ನಾನು ಎಣಿಸುತ್ತಾ ಕೊನೆಯ ದಿನಗಳನ್ನ…

ನನ್ನಂತರಾಳ ಬಂಧಿಯಾಗಿಹುದು ನಿನ್ನಂತರಾಳದೊಳು..
ಈ ನನ್ನ ನಿನ್ನ ಅಂತರ ಮತ್ತೆ ಸಮೀಪಿಸುವುದು ನನ್ನುಸಿರು ಒಂದಾದಾಗ ಕಾಲಚಕ್ರದೊಳು. ….

✍ ಅಕ್ಷತಾ ಆರ್ ಭಂಡಾರಿ

 

 

 

Leave a Reply

Your email address will not be published. Required fields are marked *