ಅಮ್ಮ ಲಾಲಿಸಿದರೆ , ಅಪ್ಪ ಪಾಲಿಸಿ ಮುತ್ತಿನೊಡನೆ ತನ್ನ ಗಡ್ಡ ತುರಿಸಿ ಕಚಗುಳಿ ನೀಡುತ್ತಾ ಮತ್ತಷ್ಟು ಹತ್ತಿರವಾಗುತ್ತಾರೆ. ಇಲ್ಲಿ ತಂದೆ ಮಗಳ ಜನ್ಮಕ್ಕೆ ಬರೀ ಕಾರಣೀಕರ್ತನಷ್ಟೇ ಅಲ್ಲ; ತಂದೆ ಮತ್ತು ಮಗಳ ಸಂಬಂಧವೆಂಬುದು ಜನುಮ-ಜನುಮಾಂತರದ ಸಂಬಂಧವಾಗಿದ್ದು, ತಂದೆಯ ಪಾತ್ರ ಕೇವಲ ಪಾಲನೆ ಪೋಷಣೆಗೆ ಮಾತ್ರ ಸೀಮಿತವಲ್ಲದೇ ಅವಳ ವಿದ್ಯಾಬ್ಯಾಸ, ಮದುವೆ , ಮದುವೆ ನಂತರದ ಯೋಗಕ್ಷೇಮ ಎಲ್ಲದರಲ್ಲಿಯೂ ಭಾಗಿಯಾಗುತ್ತಾನೆ. ಹಾಗೆಯೇ ಮಗಳು ಕೂಡ ತಂದೆಗೆ ಮಗಳಾಗಿರದೇ ಮಗನಂತೆ ಮನೆಯ ಜವಬ್ದಾರಿ ತೆಗೆದುಕೊಂಡು ಅಪ್ಪನಿಗೆ ಒಳ್ಳೆಯ ಸ್ನೇಹಿತೆಯಾಗಿ, ಬಂಧು ಬಳಗದ ಕನಸುಗಳಿಗೆ ದಾರಿದೀಪವಾಗಿರುತ್ತಾಳೆ. ತಂದೆಯ ಮುಪ್ಪಿನಾವಸ್ಥೆಯಲ್ಲಿ ಅಥವಾ ಅನಾರೋಗ್ಯದ ಸಮಯದಲ್ಲಿ ಅವರ ಲಾಲನೆ- ಪಾಲನೆ ಮಾಡಿ ತಾಯಿ ಸ್ಥಾನವನ್ನು ನೀಡಬಲ್ಲವಳಾಗಿರುತ್ತಾಳೆ. ಅಪ್ಪ ಎಂದರೆ ಭಯ ಎಷ್ಟಿದೆಯೋ ಅದಕ್ಕೆರಡರಷ್ಟು ಮಿಗಿಲಾದ ಪ್ರೀತಿ ಇದೆ. ಸಹೃದಯಾ, ಕರುಣಾಮಯಿ, ತ್ಯಾಗಮಯಿ, ಜನುಮದಾತ… ಬಣ್ಣಿಸಲಾಗದು ಅವರ ಸಜ್ಜನಿಕೆಯ ವ್ಯಕ್ತಿತ್ವ.
ಅಪ್ಪನ ಜಗತ್ತು ….ಅಪ್ಪಾ….
ನೀನಂದ್ರೆ ನನಗಿಷ್ಟ.
ಲೇಖನ ಚೆನ್ನಾಗಿ ಮೂಡಿ ಬಂದಿದೆ……
ಮಹೇಂದ್ರ ಕುಮಾರ್ ಫಲ್ಗುಣಿ.
ಯುವ ಜಾಗೃತಿ ಮತದಾರರ ವೇದಿಕೆ….
ಧನ್ಯವಾದಗಳು ಸರ್😊