January 19, 2025
WhatsApp Image 2021-02-05 at 11.27.02

ಮಾನವೀಯತೆ ಇಂದು ಪ್ರಸಿದ್ಧಿ, ಸ್ವಾರ್ಥದ ಸೊತ್ತಾಗಿರುವಾಗ ನಿಶ್ಕಲ್ಮಶ ಮತ್ತು ಫಲಾಪೇಕ್ಷೆಯಿಲ್ಲದ ಸೇವೆ ಮಾಡುವ ಮನಸ್ಸುಗಳು ನಮ್ಮ ಸುತ್ತ ಇಲ್ಲವೇ ಎನ್ನುವ ಪ್ರಶ್ನೆಗೆ ಉತ್ತರ ಈ ಅಮೃತಸಂಜೀವಿನಿಯ ಯುವಕರು. ಹೌದು ಅಮೃತಸಂಜೀವಿನಿ ಸಮಾಜದೆದುರು ಬೆಳೆದು ನಿಂತು 6 ವರ್ಷ ಪೂರೈಸಿದೆ.


ಗುರುದೇವ ದತ್ತಾತ್ರೇಯರ ಅನುಗ್ರಹದೊಂದಿಗೆ ಈ ಸ್ವಾರ್ಥ ಜಗತ್ತಿನೆದುರಿನ ಎಲ್ಲಾ ಸವಾಲುಗಳನ್ನು ದಾಟಿ ಮುಂದಡಿ ಇಟ್ಟಿರುವ ಬಹುಮುಖ್ಯ ಶಕ್ತಿಯೇ ಈ ಸಂಜೀವಿನಿಗಳು..
ಇವರು ಎಲ್ಲೋ ಕುಳಿತು ಹೆಸರಿನ ಮೋಹವಿಲ್ಲದೆ, ಕೊಡುವ ಸಹಾಯಕ್ಕೆ ಅಹಂಕಾರವಿಲ್ಲದೆ, ತಾನು ಮಾಡುವ ಒಂದು ಕಾರ್ಯವು ಬಡವನೊಬ್ಬನ ಕಣ್ಣೀರ ಕಥೆಯನ್ನು ನಿವಾರಿಸಬಹುದು ಎನ್ನುವ ಕಲ್ಪನೆಯೇ ಇಂದು ಸಂಸ್ಥೆಯ ಪ್ರತಿ ಸೇವಾ ಯೋಜನೆಗಳು ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಯಲು ಸಾಧ್ಯವಾಗುತ್ತಿರುವುದು.

ಇದೀಗ ಸಂಸ್ಥೆ ತನ್ನ 63 ನೇ ಮಾಸಿಕ ಸೇವಾ ಯೋಜನೆಗಾಗಿ ನಾಲ್ಕು ಬಡ ಕುಟುಂಬಗಳ ಕಷ್ಟವನ್ನು ಅರಿತು ವಿವರವನ್ನು ಸಮಾಜದ ಮುಂದಿಟ್ಟಿದೆ.


ಅದರಲ್ಲಿ ಒಬ್ಬರು ಭಂಡಾರಿ ಸಮಾಜದ ಬಂಧು ಉಡುಪಿ ಗುಡ್ಡೆ ಅಂಗಡಿ ನೆಹರುನಗರ ನಿವಾಸಿ ಶ್ರೀನಿವಾಸ್ ಭಂಡಾರಿ
ಫಲಾನುಭವಿ-2
ಉಡುಪಿ ಗುಡ್ಡೆ ಅಂಗಡಿ ನೆಹರುನಗರ ನಿವಾಸಿ ಶ್ರೀನಿವಾಸ್ ಭಂಡಾರಿ ಇವರು ಕಿಡ್ನಿ ವೈಫಲ್ಯತೆಯಿಂದ ಬಳಲುತ್ತಿದ್ದು, ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಬೇಕಾದ ಪರಿಸ್ಥಿತಿ ಇದೆ. ಇವರ ಅಣ್ಣ ಸಂಜೀವಿನಿಯ ಸಕ್ರಿಯ ಸದಸ್ಯರಾಗಿದ್ದು ತುಂಬಾ ಬಡತನದಲ್ಲಿರುವ ಕುಟುಂಬಕ್ಕೆ ಚಿಕಿತ್ಸಾ ವೆಚ್ಚಕ್ಕಾಗಿ ಸಮಾಜದ ಸಹಕಾರದ ಅಗತ್ಯವಿದೆ.

ಬಡತನದಲ್ಲಿರುವ ಶ್ರೀನಿವಾಸ್ ಭಂಡಾರಿ ಕುಟುಂಬ ನಿಮ್ಮ ಅಲ್ಪ ಸಹಾಯದ ನಿರೀಕ್ಷೆಯಲ್ಲಿದ್ದು ಇವರ ಕಣ್ಣೀರ ವ್ಯಥೆಗೆ ಸ್ಪಂದಿಸುವ ಮೂಲಕ 63ನೇ ಮಾಸಿಕ ಯೋಜನೆಯನ್ನು ಯಶಸ್ವಿಗೊಳಿಸಬೇಕಾಗಿ ಭಂಡಾರಿ ವಾರ್ತೆ ತಂಡ ಸಮಾಜದ ಬಂಧುಗಳಲ್ಲಿ ವಿನಂತಿಸಿಕೊಳ್ಳುತ್ತಿದೆ

ಬನ್ನಿ ಈ ಪುಟ್ಟಸಮಾಜ ಕಾರ್ಯದಲ್ಲಿ ಜೊತೆಯಾಗೋಣ…
ಹಸ್ತ ಹಸ್ತಗಳ ಬೆಸೆದು ಸಮಾಜವ ಬಲಗೊಳಿಸಲೊಂದು ಹೆಜ್ಜೆಯನಿಡೋಣ.


Name: Amruthasanjeevini
Bank : H.D.F.C
Branch: M_G_Road_Mangalore / BallalBagh_Mangalore
A/c no: 50200021761881
IFSC code: HDFC0001269

 

ಇ-ಮೇಲ್ ಸಂಪರ್ಕ…
amruthasanjeevini@gmail.com

ದೂರವಾಣಿ ಸಂಪರ್ಕ….
+919743514603
+919535628131
+918147697946

ಮಿಡಿಯಲಿ ನಮ್ಮೀ ಮನವು ಧರ್ಮಕಾರ್ಯದ ಚಿತ್ತದಿ ಪೂರ್ಣಶಕ್ತರೂ ನಾವಲ್ಲ, ಮಿಡಿವ ಮಹಾಮನವು ನಮ್ಮದಷ್ಟೇ.
ನಿಮ್ಮ ಪ್ರೀತಿಯ ಸಹಕಾರದ ನಿರೀಕ್ಷೆಯಲ್ಲಿ


-ಭಂಡಾರಿ ವಾರ್ತೆ 

Leave a Reply

Your email address will not be published. Required fields are marked *