ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯ
“ಶಿಕ್ಷಣ ಎನ್ನುವುದು ಭವಿಷ್ಯಕ್ಕೆ ಪಾಸ್ ಪೋರ್ಟ್ ಇದ್ದ ಹಾಗೆ, ಒಳ್ಳೆಯ ನಾಳೆಗೆ, ನಾವು ಇಂದೇ ತಯಾರಾಗಬೇಕು”
ಆದರೆ ನಾವು ಹೇಗೆ ತಯಾರಾಗಬೇಕು ಎನ್ನುವುದೇ ಪ್ರಶ್ನೆ!
ನಮ್ಮ ಹಿರಿಯರಿಗೆ ಒಂದು ದೂರದೃಷ್ಟಿ ಇತ್ತು!, ಇಸವಿ 1991ರಲ್ಲಿ ಬೆಂಗಳೂರಿನಲ್ಲಿ ವಿದ್ಯಾನಿಧಿ ದೇಣಿಗೆ ಸಂಗ್ರಹಿಸಲು ಆರಂಭಿಸಿಲಾಯಿತು!
ಇಸವಿ 1999 ರಿಂದ ಪ್ರತೀ ವರ್ಷ ವಿದ್ಯಾರ್ಥಿ ವೇತನ ವಿತರಿಸಲು ಆರಂಭಿಸಿದೆವು.
ಅಲ್ಲಿಂದ 2022 ರ ವರೆಗೆ ನಾವು ಸುಮಾರು 13 ಲಕ್ಷ ರೂಪಾಯಿ ಸಂಗ್ರಹಿಸಿ ಅದರಿಂದ ಬರುವ ಬಡ್ಡಿ ದರದಿಂದ ಇಲ್ಲಿಯವರೆಗೆ ಸುಮಾರು 12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೇತನವನ್ನು ನಾವು ಬೆಂಗಳೂರು ವಲಯದ ಭಂಡಾರಿ ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುತ್ತಾ ಬಂದಿದ್ದೇವೆ! ಇದು ಸಣ್ಣ ಸಾಧನೆಯಲ್ಲ! ಈ ಸಂದರ್ಭದಲ್ಲಿ, ಈ ಸಾಧನೆ ಮಾಡಲು ಸಹಕರಿಸಿದವರೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
ಆದರೆ ಕಳೆದ ಐದು ವರ್ಷಗಳಲ್ಲಿ ಬಡ್ಡಿದರ ಕಡಿಮೆ ಆದ ಕಾರಣ, ನಮಗೆ ವಾರ್ಷಿಕ ಬಡ್ಡಿ ಹೆಚ್ಚು ಉತ್ಪತ್ತಿಯಾಗುತ್ತಿಲ್ಲ! ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೇತನವನ್ನು ಕೊಡುತ್ತಿದ್ದ ನಮಗೆ ಈಗ ಕೇವಲ 60-70 ಸಾವಿರ ಕೊಡಲು ಮಾತ್ರ ಸಾಧ್ಯವಾಗುತ್ತಿದೆ!
ನಾವು, ಎಸ್ ಎಸ್ ಎಲ್ ಸಿ , ಪಿಯುಸಿ, ಯಾವುದೇ ಡಿಗ್ರಿಯನ್ನು ಕಲಿಯುವ ಮಕ್ಕಳಿಗೆ 2000ದಿಂದ ಹಿಡಿದು 3000 ರೂಪಾಯಿವರೆಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬರುತ್ತಿದ್ದೇವೆ!
ಈಗ ಶಿಕ್ಷಣ ದುಬಾರಿಯಾಗಿದೆ ವಿಶೇಷವಾಗಿ ತಾಂತ್ರಿಕ ಶಿಕ್ಷಣ ಮಾಡುವ ಮಕ್ಕಳಿಗೆ ನಾವು ಕೊಡುವ ವಿದ್ಯಾರ್ಥಿ ವೇತನ ಬಹಳ ಕಡಿಮೆ!
ಹಾಗಾಗಿ, ಈಗ ನಿಮ್ಮಲ್ಲಿ ಒಂದು ವಿಜ್ಞಾಪನೆ!
ವಿದ್ಯಾದಾನ ಎನ್ನುವುದು ಶ್ರೇಷ್ಠ ದಾನ ಎಂದು ತಿಳಿದವರು ಹೇಳಿದ್ದಾರೆ!
ನಮ್ಮ ವಿದ್ಯಾನಿಧಿಯ ನಿರಖು ಠೇವಣಿಯನ್ನು 13 ಲಕ್ಷದಿಂದ ಇನ್ನೂ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿ , ನಮ್ಮ ಸಮಾಜದ ಪ್ರತಿಭಾನ್ವಿತ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಮತ್ತು ಪೋಷಕರಿಗೆ ಇನ್ನು ಹೆಚ್ಚಿನ ರೀತಿಯ ಪ್ರೋತ್ಸಾಹ ನೀಡುವ ಹೆಬ್ಬಯಕೆ ನಮ್ಮದಾಗಿದೆ!
ತಾವು ದಯವಿಟ್ಟು ಉದಾರವಾಗಿ, ಈ ಒಂದು ಕೆಲಸಕ್ಕೆ ನಮ್ಮೊಂದಿಗೆ ಜೊತೆಯಾಗಿ ಸಹಕರಿಸಲು ವಿನಂತಿಸುತ್ತೇನೆ!
ಉದಾಹರಣೆಗೆ, 10,000 ರೂಪಾಯಿ ನೀಡಲು ಕೆಲವರಿಗೆ ಮನಸ್ಸು ಇರಬಹುದು, ಆದರೆ ಒಂದೇ ಬಾರಿಗೆ ನೀಡಲು ಕಷ್ಟವಾಗಬಹುದು! ಅಂಥವರು ಪ್ರತೀ ತಿಂಗಳು 1000 ರೂಪಾಯಿ 10 ತಿಂಗಳು ಕೊಟ್ಟರೆ ಸಾಕು! ಹನಿಗೂಡಿ ಹಳ್ಳ!
ಶಿಕ್ಷಣದ ಬೇರುಗಳು ಕಹಿ ಇರಬಹುದು ಆದರೆ ಅದರ ಫಲ ಸಿಹಿಯಾಗೇ ಇರುತ್ತದೆ
ಈಗ ಸ್ವಲ್ಪ ಕಷ್ಟವಾಗಬಹುದು , ಆದರೆ ನಾವು ಮಾಡಿದ ಸಹಾಯದಿಂದ ಮುಂದೆ ಒಬ್ಬ ವಿದ್ಯಾರ್ಥಿ ಕಲಿತು ಸಾಧನೆ ಮಾಡಿದರೆ ನಾವು ಮಾಡುತ್ತಿರುವ ಈ ಕೆಲಸ ಸಾರ್ಥಕ ಎನಿಸುತ್ತದೆ!
ಬನ್ನಿ ಜೊತೆಯಾಗೋಣ, ಸುಶಿಕ್ಷತ ಸಮಾಜ ಕಟ್ಟೋಣ, ನಮ್ಮಿಂದಾಗುವ ಸಹಾಯ ಮಾಡೋಣ
ವಿದ್ಯಾನಿಧಿಯ ಬ್ಯಾಂಕಿನ ವಿವರ ಹೀಗಿದೆ!
Account No: 1302500100304901
Account Name: Bhandary Samaja Sangha
IFSC : KARB0000130
Bank: Karnataka Bank, Marathahalli Branch
ವಿದ್ಯಾನಿಧಿಗೆ ಹಣವನ್ನು ವರ್ಗಾಯಿಸಿದ ನಂತರ ಸಂಘದ ಈ ಕೆಳಗಿನ ಪದಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಕುಶಲ್ ಕುಮಾರ್, ಪ್ರಧಾನ ಕಾರ್ಯದರ್ಶಿ- 99864 08888
ಅಕ್ಷತಾ ಸದಾನಂದ, ಕೋಶಾಧಿಕಾರಿ – 94800 23200
ವಂದನೆಗಳೊಂದಿಗೆ
ಪ್ರಸಾದ್ ಭಂಡಾರಿ ಮುನಿಯಾಲ್
ಅಧ್ಯಕ್ಷರು,ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯ