
ಫೆಬ್ರವರಿ 12 ರ ಸೋಮವಾರ ಉಡುಪಿಯ ಎಲ್ಲು ಭಂಡಾರಿ ಮನೆಯ ಹಿರಿಯರಾದ ಶ್ರೀಮತಿ ಅಪ್ಪಿ ಜೋಗಿ ಭಂಡಾರಿಯವರು ದೈವಾಧೀನರಾಗಿದ್ದಾರೆ.ಅವರಿಗೆ 84 ವರ್ಷ ವಯಸ್ಸಾಗಿತ್ತು. ಇವರು ಮುಂಬಯಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಮಗ ಶ್ರೀ ಉಮೇಶ್.ಜೆ.ಭಂಡಾರಿ,ಶ್ರೀ ಪ್ರಕಾಶ್.ಜೆ.ಭಂಡಾರಿ, ಹೆಣ್ಣು ಮಕ್ಕಳಾದ ಶ್ರೀಮತಿ ಚಂದ್ರಾವತಿ.ಆರ್.ಭಂಡಾರಿ, ಶ್ರೀಮತಿ ಗೀತಾ.ಎಸ್.ಭಂಡಾರಿ, ಶ್ರೀಮತಿ ಆಶಾ.ಎಸ್.ಭಂಡಾರಿ, ಮೊಮ್ಮಕ್ಕಳು,ಮರಿಮಕ್ಕಳು ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

ನೂರಾರು ವರ್ಷಗಳ ಇತಿಹಾಸವಿರುವ ಉಡುಪಿಯ ಪ್ರಸಿದ್ಧ ಎಲ್ಲು ಭಂಡಾರಿ ಹೌಸ್ ಮಾರುತಿ ವೀಥಿಕಾ ದ ಹಿರಿಯರಾಗಿದ್ದ ಇವರು ದಿವಂಗತ ಎಲ್ಲು ಭಂಡಾರಿಯವರ ಮೊಮ್ಮಗಳು.ಶಿಕ್ಷಣಕ್ಕೆ ಒತ್ತುಕೊಟ್ಟು ಕುಟುಂಬದ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸುಶಿಕ್ಷಿತರಾಗಬೇಕು,ತನ್ಮೂಲಕ ಭಂಡಾರಿ ಕುಟುಂಬಕ್ಕೆ ಒಳ್ಳೆಯ ಹೆಸರು ಗಳಿಸಬೇಕೆಂದು ನುಡಿದು ಅದರಂತೆ ನಡೆದುಕೊಂಡ ಹಿರಿಯರಾದ ಅಪ್ಪಿ ಜೋಗಿ ಭಂಡಾರಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಮತ್ತು ಅವರ ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.
— ಭಂಡಾರಿವಾರ್ತೆ