January 18, 2025
IMG-20171030-WA0013

ದೀಪಾವಳಿಯ ದಿನದಂದು ಎಲ್ಲರೂ ದೀಪಾವಳಿಯ ಸಂಭ್ರಮದಲ್ಲಿ ಇರುವಾಗ ಬಂಟ್ವಾಳ ತಾಲ್ಲೂಕಿನ ರಾಯಿಗ್ರಾಮದ ಗೋಪಿ ಭಂಡಾರಿ ಯವರ ಮನೆಯಲ್ಲಿ ಮಾತ್ರ ದುಃಖದ ಕರಿ ನೆರಳು. ಈ ಮನೆಯ ಕೂಲಿ ಕೆಲಸ ಮಾಡಿ ಮನೆಯನ್ನು ನಡೆಸುವ ಜವಾಬ್ದಾರಿ ಯನ್ನು   ಹೊಂದಿರುವ ಮಗಳು ಪುಷ್ಪ  (52 ವರ್ಷ )ಅಸೌಖ್ಯದಿಂದ  ನಿಧನರಾದರು  ಮೊದಲೇ ಈ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಅಂದು ಇವರ ಮಳೆಯ ನಂದಾ ದೀಪವೇ ಕಳಚಿ  ಹೋಯಿತು ಅಂದು ಇವರ   ಶವ  ಸಂಸ್ಕಾರ ಕ್ಕೆ   ಸೇರಿದ್ಧು ಬೆರಳೆಣಿಕೆಯ ಹತ್ತು ಜನ ಮಾತ್ರ.

ಇವರ ಸಮಸ್ಯೆಯನ್ನು  ಅರಿತು ಇವರ ಮನೆಗೆ ಬಂಟ್ವಾಳ ಎಸ್ . ವಿ. ಎಸ್ . ಕಾಲೇಜಿನ  ಉಪನ್ಯಾಸಕ ಹಾಗೂ ಬಂಟ್ವಾಳ ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷ  ನಾರಾಯಣ ಭಂಡಾರಿ ಯವರ   ನೇತೃತ್ವದಲ್ಲಿ  ಭೇಟಿ ನೀಡಿ ಸಾಂತ್ವನ   ಹೇಳಿ ಆರ್ಥಿಕ ಸಹಾಯ  ಮಾಡಲಾಯಿತು ಈ ಸಂದರ್ಭದಲ್ಲಿ ಬಂಟ್ವಾಳ ಭಂಡಾರಿ ಸಮಾಜ ಸಂಘದ ಮಾಜಿ ಕಾರ್ಯದರ್ಶಿ ಧನಂಜಯ   ಕೂರಿಯಾಳ ಉಪಸ್ಥಿತರಿದ್ದರು.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *