January 18, 2025
shekhar bahndary

ಭಂಡಾರಿ ಸಮಾಜದ ಹಿರಿಯರು,ಭಂಡಾರಿ ಸಮಾಜದ ಅತ್ಯಂತ ಲವಲವಿಕೆಯ ವ್ಯಕ್ತಿತ್ವದ ಸ್ನೇಹಜೀವಿ ಶ್ರೀಯುತ ಕಾರ್ಕಳ ಶೇಖರ ಭಂಡಾರಿಯವರು ಆಗಸ್ಟ್ 10 ನೇ ಸೋಮವಾರ ಬೆಳಗಿನ ಜಾವ ನಿಧನ ಹೊಂದಿದರು. ಅವರಿಗೆ  72 ವರ್ಷ ವಯಸ್ಸಾಗಿತ್ತು.

ಕಾರ್ಕಳದ ಬೆಟ್ಟದ ಮನೆ ಬಾಬು ಭಂಡಾರಿ ಮತ್ತು ಅಭಯ ಭಂಡಾರಿ ದಂಪತಿಯ ಪುತ್ರರಾಗಿ ಜನಿಸಿದ ಕಾರ್ಕಳ ಶೇಖರ ಭಂಡಾರಿಯವರು ವಿಜಯ ಬ್ಯಾಂಕ್ ನ ನಿವೃತ್ತ ಉದ್ಯೋಗಿಯಾಗಿದ್ದರು. ಸಣ್ಣ ವಯಸ್ಸಿನಿಂದಲೂ ನಾಟಕ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸುತ್ತಾ ಹಾಸ್ಯನಟನಾಗಿ, ಖಳನಟನಾಗಿ, ಪೋಷಕ ನಟನಾಗಿ ವಿವಿಧ ಪಾತ್ರಗಳನ್ನು ಅಭಿನಯಿಸುತ್ತಾ ಚಲನಚಿತ್ರನಟರಾಗಿ ಗುರುತಿಸಿಕೊಂಡಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಕೃಷಿ ಮಾಡಿದ್ದ ಶೇಖರ ಭಂಡಾರಿಯವರು ಪ್ರಾಸ ಭಂಡಾರ ಸರಣಿಯ “ಮಸ್ತಕದಿಂದ ಪುಸ್ತಕಕ್ಕೆ” ಕೃತಿಯನ್ನು ಇತ್ತೀಚೆಗಷ್ಟೇ ಹೊರತಂದಿದ್ದರು.ತಮ್ಮ ಭಾಷಣಗಳಲ್ಲಿ ಪ್ರಾಸಬದ್ಧವಾಗಿ ಕವನಗಳನ್ನು ರಚಿಸುತ್ತಾ, ಚುಟುಕುಗಳ ಸರಮಾಲೆಯನ್ನೇ ಹೆಣೆಯುತ್ತಿದ್ದರು. ಬೆಂಗಳೂರು ಭಂಡಾರಿ ಸಮಾಜ ಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಶೇಖರ ಭಂಡಾರಿಯವರು 2012-14 ರ ಅವಧಿಯಲ್ಲಿ ಬೆಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮಾರ್ನಾಡು ಭಂಡಾರಿ ಕುಟುಂಬಸ್ಥರ ಗುರುಕಾರರಾಗಿದ್ದ ಶೇಖರ ಭಂಡಾರಿಯವರು ಮಂಗಳೂರು ಭಂಡಾರಿ ಸಮಾಜ ಸಂಘದ ಹಾಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಂಸ್ಥಾಪಕ ಟ್ರಸ್ಟಿಗಳಾಗಿ ಕಾರ್ಯ ನಿರ್ವಹಿಸಿ, ಕಚ್ಚೂರು ಕೋ ಅಪರೇಟಿವ್ ಸೊಸೈಟಿಯ ನಿರ್ದೇಶಕರಲ್ಲಿಯೂ ಒಬ್ಬರಾಗಿದ್ದರು.ಶ್ರೀಯುತರು ಭಂಡಾರಿ ಸಮಾಜ ಸಂಘದ ಬಹುತೇಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.

ಶೇಖರ ಭಂಡಾರಿ ಪ್ರಾಸ ಭಂಡಾರದಲ್ಲಿ ಒಂದು ...

ಕಳೆದ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದ ಶ್ರೀಯುತರು ವಿಜಯಾ ಬ್ಯಾಂಕ್ ನಿಂದ ವಿಜಯಶ್ರೀ ಪ್ರಶಸ್ತಿ, ಡಾ, ರಾಜ್ ಕುಮಾರ್ ಸದ್ಭಾವನಾ ಪ್ರಶಸ್ತಿ, ವೀರ ಕನ್ನಡಿಗ ಪ್ರಶಸ್ತಿ, ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಪುರಸ್ಕಾರ, ಡಾಕ್ಟರ್ ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ ಹೀಗೆ ನೂರಾರು ಪ್ರಶಸ್ತಿಗಳಿಂದ ಭಾಜನರಾಗಿದ್ದರು.

ಶೇಖರ ಭಂಡಾರಿ ಪ್ರಾಸ ಭಂಡಾರದಲ್ಲಿ ಒಂದು ...

ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀ ಶೇಖರ ಭಂಡಾರಿಯವರು ಇಂದು ಬೆಳಗಿನ ಜಾವ ತಮ್ಮ ಜೀವನ ನಾಟಕದ ಕೊನೆಯ ಪರದೆಯನ್ನು ಎಳೆದು ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ.ಮೃತರು ಪತ್ನಿ ಶ್ರೀಮತಿ ವಾರಿಜಾ ಶೇಖರ ಭಂಡಾರಿ, ಮಕ್ಕಳಾದ ಶ್ರೀಮತಿ ಪ್ರೀತಿ ಪದ್ಮನಾಭ್ ಮತ್ತು ಶ್ರೀಮತಿ ಸ್ವಾತಿ ಶರತ್, ಮೊಮ್ಮಕ್ಕಳು, ಅಪಾರ ಸಂಖ್ಯೆಯ ಕುಟುಂಬ ವರ್ಗದವರು, ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

ಶೇಖರ ಭಂಡಾರಿ ಪ್ರಾಸ ಭಂಡಾರದಲ್ಲಿ ಒಂದು ...

ಕಾರ್ಕಳ ಶೇಖರ ಭಂಡಾರಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ, ದುಃಖತಪ್ತ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿ ವಾರ್ತೆ” ಶ್ರೀದೇವರಲ್ಲಿ ಪ್ರಾರ್ಥಿಸುತ್ತದೆ.

 

“ಭಂಡಾರಿ ವಾರ್ತೆ.”

Leave a Reply

Your email address will not be published. Required fields are marked *