January 19, 2025
arun6

ಭಂಡಾರಿವಾರ್ತೆಯ ಖಾಯಂ ಪ್ರಾಯೋಜಕರೂ,ಅರುಣ್ ಭಂಡಾರಿ ಬಿಲ್ಡರ್ಸ್ ಎಂಡ್ ಡೆವಲಪರ್ಸ್ ನ ಮುಖ್ಯಸ್ಥರೂ ಆಗಿರುವ ಶ್ರೀ ಅರುಣ್ ಭಂಡಾರಿ ಬಜ್ಪೆಯವರು ಡಿಸೆಂಬರ್ 31 ರ ರಾತ್ರಿ ತಮ್ಮ ಸಂಸ್ಥೆಯ ಕಾರ್ಮಿಕರು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ತಮ್ಮ ಹಿತೈಷಿಗಳಿಗೆ ಒಂದು ಭರ್ಜರಿ ಔತಣಕೂಟವನ್ನು ಅವರ ಸ್ವಗೃಹ “ಅವನ ಹೌಸ್” ನಲ್ಲಿ ಏರ್ಪಡಿಸಿದ್ದರು.

 

ಈ ಔತಣಕೂಟವು ಸರ್ವಧರ್ಮೀಯರನ್ನು ಒಟ್ಟುಗೂಡಿಸುವ ಒಂದು ವೇದಿಕೆಯಾಗಿದ್ದು ವಿಶೇಷ. ಅಷ್ಟೇ ಅಲ್ಲದೇ ಈ ಔತಣಕೂಟದಲ್ಲಿ ಮಾಲಿಕ ಕಾರ್ಮಿಕ    , ಮೇಲು ಕೀಳು ಎಂಬ ಯಾವುದೇ ಭೇದಭಾವವಿಲ್ಲದೇ ಎಲ್ಲರೂ ಒಗ್ಗೂಡಿ ಸಂಭ್ರಮಿಸಿದರು.

ವರ್ಷವಿಡೀ ತಮ್ಮೊಟ್ಟಿಗೆ ದುಡಿಯುವ ಎಲ್ಲರನ್ನೂ ಆತ್ಮೀಯತೆಯಿಂದ ಬರಮಾಡಿಕೊಂಡ ಅರುಣ್ ರವರು ಕರಾವಳಿಯ ವಿಶೇಷ ಖಾದ್ಯಗಳಾದ ಕೋಳಿ ಸುಕ್ಕ,ಮೀನು ಫ್ರೈ ಮುಂತಾದ ತಿನಿಸುಗಳನ್ನು ಉಣಬಡಿಸಿ ಖುಷಿಪಟ್ಟರು. ಔತಣಕೂಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಅರುಣ್ ಭಂಡಾರಿಯವರ ಈ ಔದಾರ್ಯವನ್ನು ಮೆಚ್ಚಿ ಅವರಿಗೆ ಶುಭ ಹಾರೈಸಿದರು.

ತಮ್ಮೊಟ್ಟಿಗೆ ದುಡಿಯುವವರ ಕಷ್ಟಗಳಿಗೆ ಸ್ಪಂದಿಸುತ್ತಾ ಅವರನ್ನೂ ತಮ್ಮ ಮನೆಯವರೆಂದು ಭಾವಿಸುವ ಶ್ರೀ ಅರುಣ್ ಭಂಡಾರಿಯವರ ಈ ಮಾನವೀಯ ಗುಣವನ್ನು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಮುಕ್ತಕಂಠದಿಂದ ಶ್ಲಾಘಿಸುತ್ತದೆ.

ಮಾಹಿತಿ : ಪ್ರಕಾಶ್ ಭಂಡಾರಿ ಕಟ್ಲಾ.
ನಿರೂಪಣೆ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ

Leave a Reply

Your email address will not be published. Required fields are marked *