January 19, 2025
arun_builders_3

ಸಮಾಜಸೇವಾ ಚಟುವಟಿಕೆಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಬಜಪೆ ರೋಟರಿ ಕ್ಲಬ್ ವತಿಯಿಂದ ಇತ್ತೀಚೆಗೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯೊಬ್ಬರಿಗೆ ಸಹಾಯಹಸ್ತ ಚಾಚಲಾಯಿತು. ಬಜಪೆಯ ಸ್ವಾಮಿಲಪದವು ನಿವಾಸಿ ಸುಂದರಿ ಎಂಬುವವರ ಮನೆಗೆ ವಿದ್ಯುತ್ ಸಂಪರ್ಕವಾಗಲಿ,ಶೌಚಾಲಯವಾಗಲಿ,ಸ್ನಾನಗೃಹವಾಗಲಿ ಇಲ್ಲದೇ ಆಕೆ ಹಲವಾರು ವರ್ಷಗಳಿಂದ ಕತ್ತಲೆಯಲ್ಲಿಯೇ ದಿನದೂಡುತ್ತಿರುವುದನ್ನು ಗಮನಿಸಿದ ಬಜಪೆ ರೋಟರಿ ಕ್ಲಬ್ ನವರು ಅವರ ನೆರವಿಗೆ ಧಾವಿಸಿದರು.

ಬಹ್ರೇನ್‌ನಲ್ಲಿ ನೆಲೆಸಿರುವ ಶ್ರೀಯುತ ಮಹೇಶ್ ಪ್ರಭುರವರು ಸುಂದರಿಯವರ ಮನೆಯ ಕತ್ತಲು ನೀಗಿಸಲು ಸೋಲಾರ್ ವಿದ್ಯುತ್ ದೀಪ ಸಂಪರ್ಕ ಘಟಕ ವನ್ನು ಉಚಿತವಾಗಿ ನೀಡಿದರು. ಬಜಪೆ ರೋಟರಿ ಕ್ಲಬ್ ನ ಹಾಲಿ ಅಧ್ಯಕ್ಷರೂ,ಅರಣ್ ಭಂಡಾರಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನ ಮುಖ್ಯಸ್ಥರೂ ಆಗಿರುವ  ಶ್ರೀಯುತ ಅರುಣ್ ಭಂಡಾರಿಯವರು ಮನೆಗೆ ಮೂಲಭೂತವಾಗಿ ಅವಶ್ಯಕವಾಗಿರುವ ಸ್ನಾನಗೃಹ ಮತ್ತು ಶೌಚಾಲಯವನ್ನು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಟ್ಟಿದ್ದಾರೆ.ಇದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಮಹಿಳೆಯೊಬ್ಬರು ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.

 

ಭಂಡಾರಿವಾರ್ತೆ ಆಯೋಜಿಸಿದ್ದ ಭಂಡಾರಿ ಚಿತ್ತಾರ ಸ್ಪರ್ಧೆಗೆ ಪ್ರಾಯೋಜಕರಾಗಿದ್ದ ಹಾಗೂ ಭಂಡಾರಿವಾರ್ತೆಯ ಮುಂದಿನ ಎಲ್ಲಾ ಸ್ಪರ್ಧೆಗಳಿಗೂ ಖಾಯಂ ಪ್ರಾಯೋಜಕರಾಗಿರುವ ಶ್ರೀಯುತ ಅರುಣ್ ಭಂಡಾರಿ ಬಜ್ಪೆಯವರಿಗೆ ಇನ್ನಷ್ಟು ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಮಾಡಲು ಭಗವಂತನು ಶಕ್ತಿಯನ್ನು ನೀಡಲಿ.ಬಜಪೆ ರೋಟರಿ ಕ್ಲಬ್ ಇನ್ನು ಮುಂದೆಯೂ ಅಸಹಾಯಕರಿಗೆ ನೆರವು ನೀಡುತ್ತ ಜನಮಾನಸಕ್ಕೆ ಹತ್ತಿರವಾಗಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃದಯಪೂರ್ವಕವಾಗಿ ಹಾರೈಸುತ್ತದೆ.

ಮಾಹಿತಿ: ಪ್ರಕಾಶ್ ಭಂಡಾರಿ ಕಟ್ಲಾ.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

1 thought on “ಅರುಣ್ ಭಂಡಾರಿಯಿಂದ ಅಶಕ್ತ ಮಹಿಳೆಗೆ ಸಹಾಯ ಹಸ್ತ

  1. ಉತ್ತಮ‌ಕೆಲಸ ನಿಮ್ಮ ಸಮಾಜಮುಖಿ ಕೆಲಸ ಹಾಗು ಬಡವರ ಪರವಾದ ಕೆಲಸ ಮುಂದುವರಿಯಲಿ.

Leave a Reply

Your email address will not be published. Required fields are marked *