
ಕರ್ನಾಟಕ ಸರ್ಕಾರ ಸಾರ್ವಜನಿಕ ಪದವಿ ಪೂರ್ವ ಶಿಕ್ಷಣ ಇಲಾಖಾ ವತಿಯಿಂದ ಬಳ್ಳಾರಿಯಲ್ಲಿ ಜರುಗಿದ ರಾಜ್ಯ ಮಟ್ಟದ ಫುಟ್ಬಾಲ್ ಸ್ಪರ್ಧೆಯಲ್ಲಿ ಅಶ್ವೀಜ ಜಗದೀಶ್ ಭಂಡಾರಿ ಯವರನ್ನೊಳಗೊಂಡ ತಂಡ ಪ್ರಥಮ ಸ್ಥಾನ ಗಳಿಸಿದೆ. ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪ್ರತಿನಿಧಿಸುವ ತಂಡಕ್ಕೆ ನಮ್ಮ ಭಂಡಾರಿ ಕುಟುಂಬದ ಪ್ರತಿಭೆ ಅಶ್ವೀಜಾ ಜಗದೀಶ್ ಭಂಡಾರಿ ಯವರು ಆಯ್ಕೆಯಾಗಿದ್ದಾರೆ.

ಪ್ರಸ್ತುತ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ಇವರು ಸುರತ್ಕಲ್ ನ ಕಟ್ಲಾ ಶಾಂತಿ ಫ್ಯಾಮಿಲಿಯ ಶ್ರೀ ಜಗದೀಶ್ ಭಂಡಾರಿ ಮತ್ತು ಶ್ರೀಮತಿ ಅಮಿತಾ ಜಗದೀಶ್ ಭಂಡಾರಿ ದಂಪತಿಗಳ ಸುಪುತ್ರಿ.
ರಾಷ್ಟ್ರ ಮಟ್ಟದಲ್ಲಿ ಜಯಗಳಿಸಿ ಕುಟುಂಬಕ್ಕೂ, ಕಾಲೇಜಿಗೂ ಹೆಮ್ಮೆಯನ್ನು, ಸಮಸ್ತ ಭಂಡಾರಿ ಕುಟುಂಬಕ್ಕೆ ಗೌರವವನ್ನೂ ತಂದುಕೊಡಲಿ ಎಂದು ಭಂಡಾರಿ ಸಮುದಾಯದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
– ವರದಿ: ಕಿಶೋರ್ ಸೊರ್ನಾಡು
– ಭಾಸ್ಕರ ಭಂಡಾರಿ ಸಿ ಆರ್, ಭಂಡಾರಿ ವಾರ್ತೆ
Good morning, thank you Ms. ಅಶ್ವೀಜ ಜಗದೀಶ್ ಭಂಡಾರಿ.