September 20, 2024

2017 -18 ರ ಸಾಲಿನ ದ್ವಿತೀಯ ಪಿ ಯು ಸಿ ( PCMS ) ಪರೀಕ್ಷೆಯಲ್ಲಿ ಕು. ಅಶ್ವಿತಾ ಭಂಡಾರಿ ಕುತ್ಪಾಡಿ ಇವರು 577 (ಶೇ.96.17) ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಉಡುಪಿ ಕುತ್ಪಾಡಿಯ ಅಶೋಕ್ ಭಂಡಾರಿ ಮತ್ತು ಸರೋಜಾ ಅಶೋಕ ಭಂಡಾರಿ ದಂಪತಿಗಳ ಪುತ್ರಿ. ಇವರು ಉಡುಪಿ ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಇವರ ಅಮೋಘ ಸಾಧನೆಯಿಂದ ತನ್ನ ಪೋಷಕರ , ಹುಟ್ಟೂರಿನ , ತಾನು ಕಲಿತ ವಿದ್ಯಾ ಸಂಸ್ಥೆಯ ಮತ್ತು ಭಂಡಾರಿ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಶುಭ ಸಂದರ್ಭದಲ್ಲಿ ಗುರು ಹಿರಿಯರು ,ಸ್ನೇಹಿತರು, ಬಂಧುಗಳೆಲ್ಲರೂ ಕು. ಅಶ್ವಿತಾ ಭಂಡಾರಿಯವರಿಗೆ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ.

ಭಂಡಾರಿ ಕುಟುಂಬ ದ ಪ್ರತಿಭೆ ಅಶ್ವಿತಾ ಭಂಡಾರಿಯವರ ಸಾಧನೆಯನ್ನು ಶ್ಲಾಘಿಸುತ್ತಾ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಶ್ರೀ ದೇವರಲ್ಲಿ

ಭಂಡಾರಿ ವಾರ್ತೆ ಬೇಡುತ್ತದೆ.

 

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *