
ಭಂಡಾರಿ ಯುವ ಪ್ರತಿಭೆ ದೀಕ್ಷಿತ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ‘ಅವನಿ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ ಮೇ 18ರ ಶುಕ್ರವಾರದಂದು ಉಜಿರೆಯ ರಾಮಕೃಷ್ಣ ಸಭಾಭವನದಲ್ಲಿ ನಡೆಯಲಿದೆ.
ಉಜಿರೆಯ ಪ್ರಸಿದ್ಧ ದಂತ ವೈದ್ಯ ಡಾ. ಎಮ್ ಎಮ್ ದಯಾಕರ್ ನಿರ್ಮಾಪಕರಾಗಿರುವ ಸಾಮಾಜಿಕ ಕಳಕಳಿಯುಳ್ಳ ಕಿರುಚಿತ್ರ ಇದಾಗಿದ್ದು ಶಿವಾನಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಸುಂದರವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಸ್ಮಿತೇಶ್ ಎಸ್ ಬಾರ್ಯ, ಭರತ್ ಶೆಟ್ಟಿ, ಆತಿರ ಅಶೋಕ್ ಹಾಗೂ ಅಕ್ಷತಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರವನ್ನ ಉಜಿರೆಯ ದೀಕ್ಷಿತ್ ಭಂಡಾರಿ ನಿರ್ದೇಶಿಸಿದ್ದಾರೆ.
ಚಿತ್ರಕ್ಕೆ ಸಾಹಿತ್ಯ, ಕಥೆ, ಚಿತ್ರಕಥೆ ಹಾಗೂ ಛಾಯಾಗ್ರಾಹಣವನ್ನೂ ದೀಕ್ಷಿತ್ ಭಂಡಾರಿಯವರೇ ಒದಗಿಸಿದ್ದಾರೆ. ಇನ್ನು ಕಲಾ ನಿರ್ದೇಶಕರಾಗಿ ಧೀರಜ್ ಭಂಡಾರಿಯವರು ಸಹಕಾರ ನೀಡಿದ್ದು, ಉಜಿರೆಯ ಪುನಿತ್ ಭಂಡಾರಿಯವರ ಸಂಕಲನದಲ್ಲಿ ಚಿತ್ರ ಸುಂದರಾಗಿ ಮೂಡಿ ಬಂದಿದೆ.
ಚಿತ್ರದಲ್ಲಿ 2 ಹಾಡುಗಳಿದ್ದು ಸರಫ್ ವಿಟ್ಲ ಧ್ವನಿ ನೀಡಿದ್ದಾರೆ.
ಚಿತ್ರ ಬಿಡುಗಡೆ ಕಾರ್ಯಕ್ರಮಕ್ಕೆ ಭಂಡಾರಿ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭಹಾರೈಸುತ್ತಿದೆ.
-ಭಂಡಾರಿ ವಾರ್ತೆ