ಇಲ್ಲಿಯವರೆಗೆ…..
ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಲು ಬಂದ ಡಾಕ್ಟರ್ ಆಕಾಶ್ ಆ ಮಹಿಳೆಯನ್ನು ನೋಡಿ ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಇರುತ್ತಾನೆ.ಪೆಶೆಂಟ್ ಮಾತನಾಡುತ್ತಿದ್ದಾರೆ ಎಂದು ತನ್ನ ಜೊತೆ ಕೆಲಸ ಮಾಡುವ ಲೇಡಿ ಡಾಕ್ಟರ್ ರೇಖ ಹೇಳಿದಾಗ ಲಗುಬಗೆಯಿಂದ ಡಾಕ್ಟರ್ ಆಕಾಶ್ ಅವರಲ್ಲಿ ಮಾತನಾಡಲು ಅವಸರ ಮಾಡುತ್ತಾನೆ……
ಅವಿನಾಭಾವ -ಭಾಗ 3
ಆ ಹೆಂಗಸು ಇರುವ ಕೊಣೆಗೆ ಹೋದಾಗ ನನ್ನನು ನೋಡಿ ಅವರ ನಿರ್ಮಲಾ ಮುಖದಿಂದ ಅಷ್ಟೇ ನಿರ್ಮಲವಾದ ನಗುವನು ಹೊರಸೂಸಿದರು. ಈಗ ಹೇಗಿದ್ದೀರಿ ಎಂದು ನಾನು ಕೇಳಿದೆ. ನಿಮ್ಮ ದಯೆಯಿಂದ ಚೆನ್ನಾಗಿದ್ದೇನೆ ಡಾಕ್ಟರೆ ಎಂದರು. ನನ್ನ ಪರಿಚಯ ಆಯಿತೆ ಎಂದು ನಾನು ಅವರಲ್ಲಿ ಕೇಳಿದಾಗ ಡಾಕ್ಟರ್ ಅಲ್ವಾ ಎಂದರು….ಆಗ ನನಗೆ ತಿಳಿಯಿತು ನಾನು ಈಗ ದೊಡ್ಡ ಯುವಕನಾಗಿದ್ದೇನೆ. ಬಾಲ್ಯದಲ್ಲಿ ನೋಡಿದ್ದು ಆ ನಂತರ ಅವರು ನನ್ನನ್ನುನೋಡಿಲ್ಲ.ಹಾಗಾಗಿ ನನ್ನ ಪರಿಚಯ ಸಿಗಲು ಸಾಧ್ಯವಿಲ್ಲ ಎಂದು. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದುಕೊಳ್ಳಿ…. ಇವತ್ತು ಸಂಜೆ ಮನೆಗೆ ಹೋಗಬಹುದು.. ಆದರೆ ಹೋಗುವ ಮುಂಚೆ ನನ್ನಲ್ಲಿ ಮಾತನಾಡಿಯೇ ಹೋಗಬೇಕು ಎಂದು ಅವರಲ್ಲಿ ಹೇಳಿ ಅವರಿಗೆ ಏನೇನು ಜಾಷಧಿ ನೀಡಬೇಕು ಎಂದು ನರ್ಸ್ ಬಳಿ ಇರುವ ಪೈಲ್ ನಲ್ಲಿ ಬರೆದು ಅಲ್ಲಿಂದ ವಿಶ್ರಾಂತಿ ಕೊಠಡಿಗೆ ಬಂದು ಯಾವುದೋ ಒಂದು ಪುಸ್ತಕ ತೆಗೆದು ಓದಲು ಶುರು ಮಾಡಿದ ಆಕಾಶ್.
ಓದಬೇಕು ಎಂದು ಪುಸ್ತಕ ತೆಗೆದು ಪುಟ ತಿರುಗಿಸಿರುವುದು ಮಾತ್ರ…ಅವನ ಯೋಚನೆ ಎಲ್ಲ ಆ ಹೆಂಗಸಿನ ಬಗ್ಗೆಯೇ ಶುರುವಾಯಿತು…. ಪುನಃ ನರ್ಸ್ ಅವರನ್ನು ಕರೆದು ಆ ರೋಗಿಯ ಹೆಸರು ಏನೂ ಎಂದು ಕೇಳಿದ….ಆಗ ಅವರು ಸುಶೀಲ ಅಂತೆ ಡಾಕ್ಟರ್ ಎಂದಾಗ ಓಹೋ ಅವರ ಹೆಸರು ಸುಶೀಲ ಎಂದು ಗೊತ್ತಾಯಿತು ಎಂದು ಸಮಾಧಾನ ಪಟ್ಟುಕೊಂಡನು.. ಸುಶೀಲ ಅವರು ಎಷ್ಟು ಹೊತ್ತಿಗೆ ಬರುತ್ತಾರೆ ಅವರಲ್ಲಿ ಏನೇನು ಕೇಳಬೇಕು ಎಂಬ ಯೋಚನೆ ಕಾತರದಿಂದ ಆತುರದಿಂದ ಕೈ ಗಡಿಯಾರವನ್ನು ನೋಡಲು ಪ್ರಾರಂಭಿಸಿದ. ಕುಳಿತಲ್ಲಿ ಕುಳಿತುಕೊಳ್ಳಲು ಆಕಾಶ್ ನಿಗೆ ಸಾಧ್ಯವಾಗಲಿಲ್ಲ….. ಅಮ್ಮ ಅಪ್ಪ ಯಾಕೆ ಇವರಲ್ಲಿ ಮಾತನಾಡಲು, ನೋಡಲು ಬಿಡುತ್ತಿರಲಿಲ್ಲ….ಕಾರಣ ಏನಿರಬಹುದು ನಾನು ಇವರಲ್ಲಿ ಹೇಗೆ ಕೇಳುವುದು… ಇವರು ಆ ಮನೆಯಲ್ಲಿ ಒಬ್ಬಳೇ ಯಾಕೆ ಇರುತ್ತಿದ್ದರು.. ಈಗ ಎಲ್ಲಿ ಇದ್ದಾರೆ ಇವರಿಗೆ ಖರ್ಚು ಮಾಡಲು ದುಡ್ಡು ಯಾರು ಕೊಡುತ್ತಾರೆ ಇತ್ಯಾದಿ ಇತ್ಯಾದಿ ಯೋಚನೆಗಳು ಆಕಾಶ್ ನಿಗೆ ಮುತ್ತಿ ಕೊಂಡಿತ್ತು…
ನರ್ಸ್ ಅವರನ್ನು ಕರೆದು ಆ ಸುಶೀಲ ಎನ್ನುವ ರೋಗಿಯನ್ನು ನನ್ನ ಬಳಿಗೆ ಕಳುಹಿಸಿ ನೀವು ಲೇಡಿ ಡಾಕ್ಟರ್ ಯಾರು ಬರಬೇಡಿ ಎಂದು ಮೊದಲೇ ತಾಕಿತ್ತು ಮಾಡಿದ ಆಕಾಶ್.
ಇವನು ಹೇಳಿದಂತೆ ನರ್ಸ್ ಸುಶೀಲ ಅವರನ್ನು ಆಕಾಶ್ ಇರುವ ಕೊಠಡಿಗೆ ಬಿಟ್ಟು ಹೊರ ಹೋದರು…. ಆಕಾಶ್ ತನ್ನ ಎದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದ. ಈಗ ಸುಶೀಲ ಮುಗುಳು ನಗೆ ಸೂಸಿ ಹೇಳಿ ಡಾಕ್ಟ್ರೆ ಯಾಕೆ ನನ್ನನು ಬರಹೇಳಿದಿರಿ ಎಂದು ಕೇಳಿದರು…. ಆಗ ಆಕಾಶ್ ನನ್ನ ಪರಿಚಯ ನಿಮಗೆ ಆಗಿಲ್ಲ ಎಂದು ಕಾಣುತ್ತದೆ. ನಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಆಕಾಶ್ ಎಂದಾಗ ಸುಶೀಲ ಒಮ್ಮೆಲೇ ಕುರ್ಚಿಯಿಂದ ಮೇಲೆದ್ದವರೆ ಕುಸಿದು ಕೆಳಗೆ ಬಿದ್ದು ಬಿಟ್ಟರು!!!!!
ಆಕಾಶ್ ತಕ್ಷಣ ಅವರನ್ನು ಮೇಲೆತ್ತಲು ಕೆಳಗೆ ಬಗ್ಗಿದ. ಬಿದ್ದ ಶಬ್ಧ ಕೇಳಿ ಲೇಡಿ ಡಾಕ್ಟರ್ ರೇಖಾ, ನರ್ಸ್ ನವರು ಏನಾಯಿತು, ಏನಾಯಿತು ಎಂದು ಓಡೋಡಿ ಬಂದರು. ಎಲ್ಲರೂ ಎತ್ತಿ ತಂದು ಬೆಡ್ ನಲ್ಲಿ ಮಲಗಿಸಿದರು…. ಆಕಾಶ್ ಅವರ ಬಿಪಿ ಚೆಕ್ ಮಾಡಿ ಶುಗರ್ ಟೆಸ್ಟ್ ಮಾಡಿ ಎಂದು ನರ್ಸ್ ಗೆ ಹೇಳಿ ಇಂಜೆಕ್ಷನ್ ಕೊಟ್ಟು ಎಚ್ಚರ ಅದ ಮೇಲೆ ಕರೆಯಿರಿ ಎಂದು ಡಾಕ್ಟರ್ ರೇಖಾನವರಲ್ಲಿ ಹೇಳಿ ಹೊರಗೆ ಬಂದು ಕಾಫಿ ಕುಡಿಯೋಣ ಎಂದು ಕ್ಯಾಂಟಿನ್ ಗೆ ಬಂದ….
ಕಾಫಿ ಯಾಂತ್ರಿಕವಾಗಿ ಕುಡಿಯುತ್ತಿದ್ದ ಯೋಚನೆ ಎಲ್ಲ ಸುಶೀಲ ಅವರ ಸುತ್ತ ತಿರುಗುತ್ತಿತ್ತು.. ಯಾಕೆ ಅವರು ಅಪ್ಪ ಅಮ್ಮನ ಹೆಸರು ಹೇಳಿದ ತಕ್ಷಣ ಮೇಲೆದ್ದರು.. ನನ್ನ ಬೆನ್ನು ಸವರಲು ಮೇಲೆದ್ದರೆ ಅಥವಾ ತಕ್ಷಣ ಎದ್ದು ಹೋಗಲು ಎಂದು ಮೇಲೆದ್ದರೆ ಯಾಕೆ ಎಂದೇ ಹೊಳೆಯಲಿಲ್ಲ ಆಕಾಶ್ ನಿಗೆ.. ನಾನು ಅವರಲ್ಲಿ ಪೂರ್ತಿ ಮಾತನಾಡಿದ ಮೇಲೆ ನಿತೀನ್ ಚಂದ್ರ ಮತ್ತು ಸುಜಯಳ ಮಗ ಎಂದು ಹೇಳಬೇಕಿತ್ತು… ನಾನು ಆತುರ ಮಾಡಿದೆ ಎಂದು ತುಂಬಾ ಪರಿತಪಿಸಿದ ಆಕಾಶ್…….
ವೈದ್ಯರಾದವರಿಗೆ ಅವಸರ ಆತುರ ಇರಬಾರದು …. ನನ್ನಿಂದ ಪುನಃ ಅವರು ಆಸ್ಪತ್ರೆಯಲ್ಲಿ ಇರುವಂತಾಯಿತು ಪಾಪ…. ಇನ್ನು ಎಷ್ಟು ಹೊತ್ತಿಗೆ ಪ್ರಜ್ಞೆ ಬರುತ್ತಾದ ಎಂದು ಮರುಕ ಪಟ್ಟ ಆಕಾಶ್….
( ಮುಂದುವರಿಯುವುದು)