ಕಾಲಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇದ್ದವರಿಗೆ ಆಯುರ್ವೇದ ಪರಿಹಾರಗಳು
ಕಾಲುಗಳ ಸೆಳೆತ, ಕಾಲು ಜೋಮು ಬಂದಂತೆ ಆಗುವುದು, ಕುಳಿತರೆ ಎದ್ದೇಳಲು ಸಾಧ್ಯವಾಗದೇ ಇರುವುದು ಇವೆಲ್ಲವೂ ಕಾಲುಗಳಲ್ಲಿ ರಕ್ತ ಹೆಪ್ಪು ಗಟ್ಟುತ್ತಿದೆ ಎನ್ನುವ ಸೂಚನೆಗಳು. ಮೊದಲು ಇದನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬ ಬಗ್ಗೆ ತಿಳಿದುಕೊಳ್ಳಿ.
ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಕೆಲವು ಸಂದರ್ಭಗಳಲ್ಲಿ ಸಾಮಾನ್ಯ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚು ಎಂದು ಕಂಡುಬಂದಿದೆ. ಕೆಲವರಿಗೆ ಇದರಿಂದ ಕಾಲುಗಳು ಊದಿಕೊಳ್ಳುವುದು ಮತ್ತು ವಿಪರೀತ ನೋವು ಕಾಣಿಸುತ್ತದೆ.
ಕಾಲುಗಳ ಸೆಳೆತ ಕೂಡ ಕಂಡು ಬರಬಹುದು. ಇಂತಹ ಸಂದರ್ಭದಲ್ಲಿ ಕಾರಣಗಳನ್ನು ಹುಡುಕುವುದಾದರೆ ಜಡ ಜೀವನ ಶೈಲಿ ಮತ್ತು ಅತಿಯಾದ ದೇಹದ ತೂಕ ಪ್ರಮುಖವಾಗಿ ಕಂಡು ಬರುತ್ತದೆ. ಸಾಧ್ಯವಾದಷ್ಟು ವೈದ್ಯರ ನೆರವು ತೆಗೆದುಕೊಳ್ಳುವುದು ಮುಖ್ಯ.
ಸೂಕ್ತ ಸಮಯಕ್ಕೆ ಸೂಕ್ತ ಸಲಹೆ ಮತ್ತು ಚಿಕಿತ್ಸೆಗಳನ್ನು ತೆಗೆದುಕೊಂಡರೆ ಇಂತಹ ಆರೋಗ್ಯ ಸಮಸ್ಯೆಗಳಿಂದ ದೂರವಾಗಬಹುದು. ಆಯುರ್ವೇದ ಪ್ರಕಾರದಲ್ಲಿ ಈ ರೀತಿಯ ಸಮಸ್ಯೆಗೆ ಪರಿಹಾರ ವನ್ನು ಹುಡುಕುವುದಾದರೆ ‘ಪ್ರಾಣ ಆಯುರ್ವೇದ ಅಕಾಡೆಮಿ’ ಕೆಲವೊಂದು ಆಹಾರ ಪದಾರ್ಥಗಳ ಟಿಪ್ಸ್ ನೀಡಿದೆ. ಬನ್ನಿ ಅವುಗಳನ್ನು ನೋಡೋಣ.
ಅರಿಶಿನ
ಚರ್ಮದ ಅನೇಕ ಸಮಸ್ಯೆಗಳಿಗೆ ಅರಿಶಿನ ರಾಮಬಾಣವಾಗಿ ಕೆಲಸ ಮಾಡುತ್ತದೆ. ಏಕೆಂದರೆ ಇದರಲ್ಲಿ curcumin ಎಂಬ ಅಂಶ ಇರಲಿದ್ದು, ಇದು ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ನಿಮಗೆ ಒಂದು ವೇಳೆ ಇಂತಹ ಸಮಸ್ಯೆ ಇದ್ದರೆ ನೀವು ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿ ಹಾಲಿಗೆ ಸ್ವಲ್ಪ ಅರಿಶಿನ ಹಾಕಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಬೆಳ್ಳುಳ್ಳಿ
- ಬೆಳ್ಳುಳ್ಳಿ ತನ್ನಲ್ಲಿ ಅಲಿಸಿನ್ ಎಂಬ ಅಂಶವನ್ನು ಹೊಂದಿದ್ದು, ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಂಡು ಹೃದಯದ ಆರೋಗ್ಯವನ್ನು ಕಾಪಾಡಿ ದೇಹದ ಎಲ್ಲಾ ಕಡೆಗೆ ಅತ್ಯುತ್ತಮ ರಕ್ತ ಸಂಚಾರ ಉಂಟಾಗುವಂತೆ ಮಾಡುತ್ತದೆ.
- ಇದಕ್ಕಾಗಿ ನೀವು ಬೆಳ್ಳುಳ್ಳಿಯನ್ನು ಜಜ್ಜಿ ಬಿಸಿನೀರಿಗೆ ಹಾಕಿ ಉಗುರು ಬೆಚ್ಚಗಿರುವ ಸಂದರ್ಭದಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಗ್ರೀನ್ ಟೀ ಸೇವಿಸಿ
- ಪ್ರತಿ ದಿನ ಗ್ರೀನ್ ಟೀ ಕುಡಿಯುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? ಗ್ರೀನ್ ಟೀ ತನ್ನಲ್ಲಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆಯುವ ಸಾಮರ್ಥ್ಯ ಹೊಂದಿದೆ.
- ಸಾಧಾರಣ ಚಹಾ ಕುಡಿಯುವುದಕ್ಕೆ ಹೋಲಿಸಿದರೆ ಗ್ರೀನ್ ಟೀ ಸೇವನೆಯಿಂದ ಹಲವಾರು ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು.
ಯೋಗ ಮಾಡುವುದು
- ಯೋಗಭ್ಯಾಸ ತಿಂದ ನಮ್ಮ ಮೆದುಳು ಮತ್ತು ದೇಹ ಆರೋಗ್ಯದಿಂದ ಕೂಡಿರುತ್ತದೆ. ಕಾಲುಗಳ ಭಾಗದಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆಯುವಂತೆ ಯೋಗಭ್ಯಾಸದಿಂದ ಪರಿಹಾರವನ್ನು ಕಂಡು ಕೊಳ್ಳಬಹುದು.
- ಉತ್ತನಾಸನ ಮತ್ತು ವೀರಭದ್ರಸನ ಈ ನಿಟ್ಟಿನಲ್ಲಿ ನಿಮಗೆ ಸಹಾಯಮಾಡುತ್ತದೆ. ಕಾಲುಗಳ ಭಾಗ ದಲ್ಲಿ ರಕ್ತ ಹೆಪ್ಪುಗಟ್ಟದ ಹಾಗೆ ಇದು ತಡೆದು ಕಾಲುಗಳ ಸೆಳೆತ ಬರುವುದನ್ನು ತಪ್ಪಿಸುತ್ತದೆ.
ನಿಮ್ಮ ಆಹಾರ ಪದ್ಧತಿಯ ಬಗ್ಗೆ ಗಮನವಿರಲಿ
ಸಾಧ್ಯವಾದಷ್ಟು ಹೆಚ್ಚು ತರಕಾರಿ ಹಣ್ಣುಗಳನ್ನು ಸೇವಿಸಿ. ಉದಾಹರಣೆಗೆ ಅನಾನಸ್, ಸ್ಟ್ರಾಬೆರಿ, ದ್ರಾಕ್ಷಿ ಹಣ್ಣಿನ ಜ್ಯೂಸ್ ಇತ್ಯಾದಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಬಾದಾಮಿ, ಗೋಡಂಬಿ, ವಾಲ್ನಟ್, ಪಿಸ್ತಾ ಇವುಗಳನ್ನು ಸಹ ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿಂದ ಪಾರಾಗಬಹುದು.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ವಿ ಕೆ