January 18, 2025
1

ತಾಯಿಯ ಹಾಲಿನ ಸೇವನೆ ಬಳಿಕ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದನ್ನು ಸುಲಭವಾಗಿ ಆಹಾರದಿಂದಲೇ ಯಾವ ರೀತಿ ಕಡಿಮೆ ಮಾಡಬಹುದು.

ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತದೆ. ದೊಡ್ಡವರಾದರೆ ಔಷಧ, ವೈದ್ಯರು ಎಂದು ಹೇಗೋ ಗುಣಮುಖ ಮಾಡಿಕೊಳ್ಳುತ್ತಾರೆ. ಆದರೆ ಮಕ್ಕಳಿಗೆ ಹಾಗಲ್ಲ. ಎದೆಹಾಲು ಸೇವನೆಯನ್ನು ನಿಲ್ಲಿಸಿದ ಬಳಿಕ ಮಕ್ಕಳಲ್ಲಿ ಹೆಚ್ಚಾಗಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂದರೆ ಸರಿಸುಮಾರು 8 ತಿಂಗಳ ಬಳಿಕ ಮಕ್ಕಳಿಗೆ ಇತರ ಆಹಾರವನ್ನು ನೀಡಲಾಗುತ್ತದೆ. ಆಗ ಮಲಬದ್ಧತೆಯುಂಟಾಗುವ ಸಾಧ್ಯತೆಗಳು ಇರುತ್ತವೆ.

ಮಲಬದ್ಧತೆಯಿಂದ ಮಕ್ಕಳು ಹೊಟ್ಟೆನೋವು, ಹೊಟ್ಟೆಮುರಿತದಂತಹ ಅನುಭವವನ್ನು ಅನುಭವಿಸಬಹುದು. ಇದರಿಂದ ಒಂದೇ ಸಮನೆ ಅಳು ಮಾತ್ರ ಅವರ ಕಡೆಯಿಂದ ಬರುತ್ತದೆ. ಹಾಗಾದರೆ ಮಕ್ಕಳ ಈ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವುದು ಹೇಗೆ, ಯಾವೆಲ್ಲಾ ಮದ್ದುಗಳ ಮೂಲಕ ಮಲವಿಸರ್ಜನೆ ಸರಿಯಾಗಿ ಆಗುವಂತೆ ಮಾಡಬಹುದು.

ತರಕಾರಿಗಳ ಸೂಪ್‌

ಸಾಮಾನ್ಯವಾಗಿ ಮಕ್ಕಳು ತರಕಾರಿಗಳನ್ನು ಇಷ್ಟಪಡುವುದಿಲ್ಲ. ಆದರೆ ತರಕಾರಿಗಳ ಸೂಪ್‌ ಮಕ್ಕಳ ಮಲಬದ್ಧತೆ ತಡೆಗೆ ಉತ್ತಮ ಆಹಾರವಾಗಿದೆ. ತರಕಾರಿಗಳನ್ನು ಚೆನ್ನಾಗಿ ಬೇಯಿಸಿ, ಅದಕ್ಕೆ ಉಪ್ಪು ಹಾಕಿ ಅದರ ರಸವನ್ನು ಕುಡಿಯಲು ನೀಡಬೇಕು. ಆಗ ಹೊಟ್ಟೆಯು ತುಂಬುತ್ತದೆ ಜೊತೆಗೆ ಮಲವಿಸರ್ಜನೆ ಕೂಡ ಸರಿಯಾದ ರೀತಿಯಲ್ಲಿ ಆಗುತ್ತದೆ. ಮಕ್ಕಳ ಆರೋಗ್ಯಕ್ಕೆ ಬೇಕಾದ ವಿಟಮಿನ್ ಬಿ ಸಹ ಸಿಗುತ್ತದೆ.

ದಿನಕ್ಕೆ ಎರಡು ಹೊತ್ತಾದರೂ ತರಕಾರಿಗಳನ್ನು ಬೇಯಿಸಿ ಮಕ್ಕಳಿಗೆ ನೀಡಿ. ಇದು ದೇಹಕ್ಕೆ ಪ್ರೋಟೀನ್‌ ಜೊತೆಗೆ ಶಕ್ತಿಯನ್ನೂ ನೀಡುತ್ತದೆ. ಮಲಬದ್ಧತೆ ಸಮಸ್ಯೆಯನ್ನೂ ನಿವಾರಿಸುತ್ತದೆ.

ಕುಡಿಯಲು ನೀರು ಕೊಡಿ

ತಾಯಿಯ ಹಾಲಿನ ಸೇವನೆಯನ್ನು ಬಿಟ್ಟ ಬಳಿಕ ನೀರನ್ನು ಕುಡಿಯಲು ನೀಡಿ. ಸಕ್ಕರೆ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿಸುತ್ತಿರಿ. ಆಗ ಆಹಾರ ಬೇಗನೆ ಜೀರ್ಣವಾಗುತ್ತದೆ. ಅಲ್ಲದೆ ಹೊಟ್ಟೆಗೆ ಸಂಬಂಧಿಸಿ ಅನಾರೋಗ್ಯವೂ ಕಾಡುವುದಿಲ್ಲ.

ಬಿಸಿ ನೀರನ್ನು ಮಕ್ಕಳಿಗೆ ನೀಡುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗಿ ಮಲವಿಸರ್ಜನೆ, ಹೊಟ್ಟೆ ನೋವಿನ ಸಮಸ್ಯೆ ಕೂಡ ಸರಿಹೋಗುತ್ತದೆ.

ಬಾಳೆಹಣ್ಣು

ಬಾಳೆಹಣ್ಣು ದೊಡ್ಡವರಿಗೂ ಮಲಬದ್ಧತೆಯನ್ನು ಸರಿಮಾಡುತ್ತದೆ. ಮಕ್ಕಳಿಗೆ ಮಲಬದ್ಧತೆ ಸಮಸ್ಯೆ ಕಾಡಿದರೆ ಬಾಳೆಹಣ್ಣನ್ನು ನುಣ್ಣಗೆ ಅರೆದು ಕೊಡಬೇಕು. ಆಗ ಮಲವಿಸರ್ಜನೆ ಸರಾಗವಾಗಿ ಅಗುತ್ತದೆ.

ಬಾಳೆಹಣ್ಣನ್ನು ಹೆಚ್ಚು ತಿನ್ನಿಸಬೇಡಿ ಶೀತವಾಗಬಹುದು. ಆದರೆ ಮಕ್ಕಳಿಗೆ ಬಾಳೆಹಣ್ಣು ತಿನ್ನಿಸುವುದರಿಂದ ಕ್ಯಾಲ್ಸಿಯಂ ಅಂಶ ಸಿಗುತ್ತದೆ. ಅಲ್ಲದೆ ದೇಹಕ್ಕೆ ಅಗತ್ಯವಾದ ಪೋಷಕಾಂಶವೂ ದೊರೆಯುತ್ತ

ಹಸುವಿನ ಹಾಲಿನ ಬಳಕೆ

ತಾಯಿಯ ಹಾಲಿನ ಸೇವನೆಯ ಬಳಿಕ ಮಕ್ಕಳಿಗೆ ದಿನಕ್ಕೆ ಎರಡರಿಂದ ಮೂರು ಬಾರಿ ಹಸುವಿನ ಹಾಲನ್ನು ಕುಡಿಸಬೇಕು. ಇದರಿಂದಲೂ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ಹಸುವಿನ ಹಾಲಿನ ಸೇವನೆಯಿಂದ ಜೀರ್ಣಶಕ್ತಿ ಚುರುಕುಗೊಳ್ಳುತ್ತದೆ. ಅಲ್ಲದೆ ಮಕ್ಕಳಿಗೆ ಮೂಳೆಗಳ ಬೆಳವಣಿಗೆಗೂ ಕೂಡ ಹಾಲು ನೆರವಾಗುತ್ತದೆ.

ಆದ್ದರಿಂದ 8 ತಿಂಗಳ ಬಳಿಕ ಮಲಬದ್ಧತೆ ನಿವಾರಿಸಲು ಮಕ್ಕಳಿಗೆ ಈ ರೀತಿ ಆಹಾರಗಳನ್ನು ನೀಡಬೇಕು ಎಂದು ಸಲಹೆ ನೀಡುತ್ತಾರೆ ವೈದ್ಯರು.

ಮಾವಿನ ಹಣ್ಣು

8 ತಿಂಗಳ ಬಳಿಕ ಮಗುವಿಗೆ ಅಥವಾ 10 ವರ್ಷದವರೆಗಿನ ಮಕ್ಕಳಲ್ಲಿ ಮಲಬದ್ಧತೆ ಕಾಣಿಸಿಕೊಂಡರೆ ಮಾವಿನ ಹಣ್ಣನ್ನು ತಿನ್ನಿಸಿ ಎನ್ನುತ್ತಾರೆ ವೈದ್ಯರು,ಮಾವಿನ ಹಣ್ಣನ್ನು ತಿನ್ನಿಸುವುದರಿಂದ ಮಲವಿಸರ್ಜನೆ ಸರಿಯಾದ ರೀತಿಯಲ್ಲಿ ಆಗುತ್ತದೆ.

ಅಲ್ಲದೆ ಸಿಹಿಯಾದ ಮಾವಿನ ಹಣ್ಣನ್ನು ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ನೆನಪಿಡಿ 1 ಸಣ್ಣ ಕಪ್‌ಗಿಂತ ಹೆಚ್ಚು ಮಾವಿನ ಹಣ್ಣಿನ ಗುಳ ಅಥವಾ ರಸವನ್ನು ನೀಡಬೇಡಿ

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *